ಡಾ. ರಾಜ್ ಕುಮಾರ್ ಅವರು ಮತ್ತು ಅವರ ಸಿನಿಮಾಗಳು ಎಷ್ಟು ಅದ್ಭುತವಾಗಿ ಇರುತ್ತಿದ್ದವು ಎಂದು ನಮಗೆಲ್ಲಾ ಗೊತ್ತೇ ಇದೆ. ಅಣ್ಣಾವ್ರ ಬಹುತೇಕ ಎಲ್ಲಾ ಸಿನಿಮಾಗಳು ಸಹ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಬದುಕಿನ ಪಾಠಗಳನ್ನು ಸಹ ಕಲಿಸುತ್ತಿದ್ದವು. ಅಣ್ಣಾವ್ರು ಅವರ ವೃತ್ತಿ ಬದುಕಿನಲ್ಲಿ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಹಾಗೆಯೇ, ಅವರ ಸಿನಿಮಾಗಳು ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ದೇವರ ಸಿನಿಮಾಗಳು ಎಲ್ಲದರಲ್ಲೂ ನಟಿಸಿದ್ದಾರೆ. ಎಲ್ಲಾ ಥರದ ಪಾತ್ರಗಳನ್ನು ನಿರ್ವಹಿಸಬಲ್ಲ ಕಲಾವಿದ ಎಂದು ಹೆಸರು ಪಡೆದವರು ಡಾ. ರಾಜ್ ಕುಮಾರ್. ಅವರ ಬಗ್ಗೆ ಹೇಳಲು ಅವರ ಸಿನಿಮಾ ಕಥೆಗಳನ್ನು ತಿಳಿಸುತ್ತಾ ಹೋದರೆ, ಅನೇಕ ವಿಚಾರಗಳು ನಮಗೆ ಸಿಗುತ್ತದೆ.. ಇಂದು ಅವರ ಮಯೂರ ಸಿನಿಮಾ ಬಗ್ಗೆ ಒಂದಷ್ಟು ಆಸಕ್ತಿಕರ ವಿಚಾರ ಇದೆ..
ಹೌದು, ಡಾ. ರಾಜ್ ಕುಮಾರ್ ಅವರು ನಾಯಕನಾಗಿ ನಟಿಸಿದ ಮಯೂರ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ, ಇವತ್ತಿಗೂ ಕೂಡ ಈ ಸಿನಿಮಾ ಬಹುತೇಕ ಎಲ್ಲಾ ಜನರ ಫೇವರೆಟ್ ಎಂದು ಹೇಳಿದರೂ ಸಹ ತಪ್ಪಲ್ಲ. ಅದ್ಭುತವಾದ ಸಾಹಸಮಯ ಸಿನಿಮಾ ಇದು, ನಮ್ಮ ರಾಜ್ಯದ ದೊರೆ ಮಯೂರ ವರ್ಮನ ಜೀವನಾಧಾರಿತ ಸಿನಿಮಾ ಆಗಿದೆ. ಇನ್ನು ಈ ಸಿನಿಮಾದಲ್ಲಿ ಮಂಜುಳಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಶ್ರೀನಾಥ್ ಅವರು, ಬಾಲಕೃಷ್ಣ ಅವರು ಸೇರಿದಂತೆ ಹಿರಿಯ ಕಲಾವಿದರು ನಟಿಸಿರುವ ಸಿನಿಮಾ ಇದು. ಇನ್ನು ಈ ಸಿನಿಮಾ ಅಣ್ಣಾವ್ರ ಕೆರಿಯರ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಇನ್ನು ಈ ಸಿನಿಮಾ ಬಗ್ಗೆ ಇನ್ನಷ್ಟು ವಿಚಾರಗಳು ಇದೆ. ಈ ಸಿನಿಮಾವನ್ನು ಬಾಲಣ್ಣ ಅವರೇ ನಿರ್ಮಾಣ ಮಾಡಬೇಕಿತ್ತು, ಆದರೆ ಅದು ನಡೆಯಲಿಲ್ಲ. ಮಯೂರ ಸಿನಿಮಾ ತೆರೆಕಂಡು ಈ ವರ್ಷಕ್ಕೆ 50 ವರ್ಷ ತುಂಬುತ್ತದೆ.

1975ರಲ್ಲಿ ತೆರೆಕಂಡಿದ್ದ ಸಿನಿಮಾ ಇದು. ಮಯೂರ ಸಿನಿಮಾವನ್ನು ವಿಜಯ್ ಅವರು ನಿರ್ದೇಶನ ಮಾಡಿದರು, ಟಿ.ಪಿ. ವೇಣುಗೋಪಾಲ್ ಅವರು ನಿರ್ಮಾಣ ಮಾಡಿದರು. ಆದರೆ ಬಾಲಣ್ಣ ಅವರು ನಿರ್ಮಾಣ ಮಾಡಬೇಕಿದ್ದ ಕನಸಿನ ಸಿನಿಮಾ ಇದು. ಬಾಲಣ್ಣ ಅವರು ಮಯೂರ ಕಾದಂಬರಿ ಓದಿ, ರಾಜ್ ಕುಮಾರ್ ಅವರೇ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ರಣಧೀರ ಕಂಠೀರವ ಮತ್ತು ಇನ್ನಿತರ ಸಿನಿಮಾಗಳನ್ನು ನೋಡಿದ್ದ ಬಾಲಣ್ಣ ಅವರು ರಾಜ್ ಕುಮಾರ್ ಅವರೇ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದರಂತೆ. ಅಣ್ಣಾವ್ರ ಜೊತೆಗೆ ಮಾತನಾಡಿ ಅವರು ಒಪ್ಪಿದ್ದರು, ರಣಧೀರ ಕಂಠೀರವ ಸಿನಿಮಾ ನಿರ್ದೇಶನ ಮಾಡಿದ್ದ, ಎನ್. ಸಿ ರಾಜನ್ ಅವರೇ ನಿರ್ದೇಶನ ಮಾಡಬೇಕಿತ್ತು. ಜಿ.ಕೆ ವೆಂಕಟೇಶ್ ಅವರು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದರು.
ಕು. ರಾ ಸೀತಾರಾಮ ಶಾಸ್ತ್ರಿ ಮತ್ತು ಸದಾಶಿವಯ್ಯ ಇಬ್ಬರೂ ಸಹ ಸಂಭಾಷಣೆಯನ್ನು ಬರೆದಿದ್ದರು. ಇಷ್ಟೆಲ್ಲಾ ಕೆಲಸಗಳು ನಡೆದು, ಸಿನಿಮಾ ಶುರುವಾಗಬೇಕಿತ್ತು. ಆದರೆ ಆಗಷ್ಟೇ ಬಾಲಣ್ಣ ಅವರು ಆಗಷ್ಟೇ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಿದ್ದರು, ಅವರ ಬಳಿ ಹೆಚ್ಚು ಹಣ ಇರಲಿಲ್ಲ. ಆದರೆ ತಮ್ಮ ಸ್ಟುಡಿಯೋದಲ್ಲೇ ಸಿನಿಮಾ ಚಿತ್ರೀಕರಣ ಆಗುವ ಹಾಗೆ ಮಾಡಪ್ಪ ಎಂದು ರಾಜ್ ಕುಮಾರ್ ಅವರ ಬಳಿ ಕೇಳಿಕೊಂಡಿದ್ದರು. ಅದಕ್ಕೆ ರಾಜ್ ಕುಮಾರ್ ಅವರು ಕೂಡ ಒಪ್ಪಿ, ಬಾಲಣ್ಣ ಅವರಿಗೆ ಸಹಾಯ ಮಾಡಿದರು, ಎರಡು Landmark ಚಿತ್ರೀಕರಣ ಆಗುವ ಹಾಗೆ ಮಾಡಿದ ಕಾರಣ ಬಾಲಣ್ಣ ಅವರ ಬಳಿ ದುಡ್ಡು ಕೂಡ ಸೇರಿತು. ಸಿನಿಮಾ ಶುರುವಾಗಬೇಕು ಎಂದುಕೊಳ್ಳುವ ಸಮಯದಲ್ಲಿ, ನಡೆದಿದ್ದೇ ಬೇರೆ.. ಆ ವೇಳೆಗೆ ಅಣ್ಣಾವ್ರು ಶ್ರೀಕೃಷ್ಣದೇವರಾಯ ಸಿನಿಮಾವನ್ನು ಒಪ್ಪಿಕೊಂಡಿದ್ದರು.. ಬಿ.ಆರ್ ಪಂತುಲು ಅವರು ಸಿನಿಮಾ ನಿರ್ದೇಶನ ಮಾಡಿದ್ದರು.

ಬಿ.ಆರ್. ಪಂತುಲು ಅವರು ಮೊದಲಿಗೆ ಶ್ರೀಕೃಷ್ಣದೇವರಾಯ ಸಿನಿಮಾವನ್ನು ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ತೆರೆಗೆ ತರುವುದಕ್ಕೆ ಮುಂದಾಗಿದ್ದರು. ನಂತರ ಮನಸ್ಸು ಬದಲಾಯಿಸಿ, ಕಲರ್ ನಲ್ಲಿ ತೆಗೆದರು. ಆ ವೇಳೆ ತಮಿಳಿನ ಖ್ಯಾತ ನಟ ಎಂ.ಜಿ.ಆರ್ ಅವರು ಮಾತನಾಡಿ, ಅಂಥ ಒಳ್ಳೆಯ ಸಿನಿಮಾ, ನನ್ನ ತಮ್ಮ ಸಿನಿಮಾವನ್ನು ಮಾಡುತ್ತಿದ್ದೀರಾ. ಚೆನ್ನಾಗಿ ಮಾಡಿ, ಏನೇ ತೊಂದರೆ ಆದರೂ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರಂತೆ. ಅದೇ ರೀತಿ, ಶ್ರೀಕೃಷ್ಣದೇವರಾಯ ಸಿನಿಮಾ ತಯಾರಾಗಿ, ತೆರೆಕಂಡು ಅದ್ಭುತವಾಗಿ ಯಶಸ್ವಿಯಾಯಿತು. ಬಾಲಣ್ಣ ಅವರಿಗೆ ಮಯೂರ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಆಸೆ ಇತ್ತು. ಆದರೆ ಅವರ ಬಳಿ ಇದ್ದ ಹಣದಲ್ಲಿ, ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ನಿರ್ಮಾಣ ಮಾಡಬಹುದಿತ್ತು.
ಆದರೆ ಶ್ರೀಕೃಷ್ಣದೇವರಾಯ ಸಿನಿಮಾ ಕಲರ್ ನಲ್ಲಿ ತಯಾರಾಗಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಹಾಗಿದ್ದಾಗ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾವನ್ನ ಯಾರು ನೋಡುತ್ತಾರೆ ಎಂದು ಬಾಲಣ್ಣ ಅವರು ತಾವು ಮಯೂರ ನಿರ್ಮಾಣ ಮಾಡುವ ಕನಸ್ಸನ್ನು ಕೈಬಿಡಬೇಕಾಯಿತು. ಮಯೂರ ಸಿನಿಮಾ ನಿರ್ಮಾಣ ಮಾಡಬೇಕೆಂದಿದ್ದ ಕನಸು ಕನಸಾಗಿಯೇ ಉಳಿದು ಹೋಯಿತು. ಆದರೆ ಮುಂದಿನ ದಿನಗಳಲ್ಲಿ ಬಾಲಣ್ಣ ಅವರಲ್ಲದೇ ಬೇರೆ ನಿರ್ಮಾಪಕರು ನಿರ್ಮಿಸಿ, ವಿಜಯ್ ಅವರು ನಿರ್ದೇಶನ ಮಾಡಿದರು. ಮಯೂರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿ ಆಯಿತು. ಬಾಲಣ್ಣ ಅವರ ಕನಸು ಈ ಸಿನಿಮಾ ಆಗಿದ್ದು, ಹಾಗಾಗಿ ಅವರಿಗೆ ಒಂದು ಒಳ್ಳೆಯ ಪಾತ್ರ ಕೊಡಬೇಕು ಎಂದು ಅಣ್ಣಾವ್ರು ಹೇಳಿದರಂತೆ. ಅದೇ ರೀತಿ ಬಾಲಣ್ಣ ಅವರಿಗೆ ಮಯೂರನ ಆಪ್ತವಾಗಿರುವ ಪಾತ್ರವನ್ನು ನೀಡಲಾಯಿತು.
ಮಯೂರನ ಆಪ್ತವಾಗಿದ್ದು, ಮಯೂರನಿಗೋಸ್ಕರ ಪ್ರಾಣವನ್ನು ಕೂಡ ಲೆಕ್ಕಿಸದ ಪಾತ್ರ ಇದಾಗಿತ್ತು. ಈ ಒಂದು ಪಾತ್ರವನ್ನು ಬಾಲಣ್ಣ ಅವರು ಬಹಳ ಸಂತೋಷದಿಂದ ಮಾಡಿದರು. ಹೀಗೆ ಬಾಲಣ್ಣ ಅವರ ಕನಸು ನೆರವೇರದೇ ಹೋದರೂ ಸಹ, ಅವರು ಮಯೂರ ಸಿನಿಮಾದ ಭಾಗವಾಗಿದ್ದರು. ಇದು ಮಯೂರ ಸಿನಿಮಾ ಹಿಂದಿನ ಒಳ್ಳೆಯ ಆಸಕ್ತಿಕರ ವಿಚಾರ ಆಗಿದೆ. ಮಯೂರ ಸಿನಿಮಾ ಬಿಡುಗಡೆಯಾದ ಬಳಿಕ ಕನ್ನಡ ಚಿತ್ರರಂಗದ ಮೈಲಿಗಲ್ಲು ಎನ್ನುವಂತಹ ಸಿನಿಮಾಗಳಲ್ಲಿ ಒಂದು ಸಿನಿಮಾ ಆಗಿದೆ. ಅಣ್ಣಾವ್ರು ಮಯೂರ ವರ್ಮನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ..



