ಪುಷ್ಪ2 ಸಿನಿಮಾ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಾಣುತ್ತಿರುವ ಹೊತ್ತಿನಲ್ಲೇ, ಅಲ್ಲು ಅರ್ಜುನ್ ಅವರಿಗೆ ಸಂಕಷ್ಟ ಎದುರಾಗಿದೆ. ಇಂದು ಬೆಳ್ಳಂಬೆಳಗ್ಗೆ ಪೊಲೀಸರು ನಟ ಅಲ್ಲು ಅರ್ಜುನ್ ಅವರ ಮನೆಗೆ ತೆರಳಿ ಅವರನ್ನು ಅರೆಸ್ಟ್ ಮಾಡಿದ್ದಾರೆ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಪುಷ್ಪ 2 ಸಿನಿಮಾ ಬಿಡುಗಡೆಯಾದ ದಿವಸ ಥಿಯೇಟರ್ ವಿಸಿಟ್ ಗಾಗಿ ಅಲ್ಲು ಅರ್ಜುನ್ ಅವರು ಬಂದಿದ್ದಾಗ ನಡೆದ ಘಟನೆಗೆ ಸಂಬಂಧಿಸಿದ ಕೇಸ್ ಆಗಿದ್ದು, ಅಲ್ಲು ಅರ್ಜುನ್ ಅವರು ಈಗ ಪೊಲೀಸರ ವಶದಲ್ಲಿದ್ದಾರೆ. ಅಷ್ಟಕ್ಕೂ ಆಗಿರೋದೇನು? ಅಲ್ಲು ಅರ್ಜುನ್ ಅವರನ್ನ ಬಂಧಿಸಿರೋದು ಯಾಕೆ? ಫುಲ್ ಡೀಟೇಲ್ಸ್ ಇಲ್ಲಿದೆ..

ನಟ ಅಲ್ಲು ಅರ್ಜುನ್ ಅವರ ಪುಷ್ಪ2 ಸಿನಿಮಾ ಡಿಸೆಂಬರ್ 5ರಂದು ವಿಶ್ವಾದ್ಯಂತ ತೆರೆಕಂಡಿದೆ. ಈಗಾಗಲೇ 600 ಕೋಟಿಗಿಂತ ಹೆಚ್ಚು ಹಣವನ್ನು ಗಳಿಕೆ ಮಾಡಿ, 1000 ಕೋಟಿ ಕಲೆಕ್ಷನ್ ಮಾಡುವ ಕಡೆಗೆ ಧಾಪುಗಾಲು ಹಾಕುತ್ತಿದೆ. ಈ ವೇಳೆ ಅಲ್ಲು ಅರ್ಜುನ್ ಅವರು ಸಹ ಸಿನಿಮಾ ಗೆದ್ದ ಸಂಭ್ರಮದಲ್ಲಿದ್ದರು. ಆದರೆ ಈ ಕೆಟ್ಟ ಘಟನೆ ಒಂದು ನಡೆದು ಹೋಗಿದೆ. ಇದು ಪುಷ್ಪ2 ಸಿನಿಮಾ ಬಿಡುಗಡೆ ದಿವಸ ನಡೆದ ಕಹಿ ಘಟನೆಯ ಪರಿಣಾಮ ಆಗಿದೆ. ಪುಶ್ಪ2 ಸಿನಿಮಾ ಬಿಡುಗಡೆಯ ಮೊದಲ ದಿವಸ ನಟ ಅಲ್ಲು ಅರ್ಜುನ್ ಅವರು ಹೈದರಾಬಾದ್ ನ ಚೀಕಟಪಲ್ಲಿ ಎನ್ನುವ ಪ್ರದೇಶದಲ್ಲಿರುವ ಸಂಧ್ಯಾ ಥಿಯೇಟರ್ ಗೆ ಭೇಟಿ ನೀಡಿದರು. ಆ ವೇಳೆ ಒಂದು ದುರ್ಘಟನೆ ನಡೆದು ಹೋಯಿತು. ಈ ವಿಷಯ ಎಲ್ಲರಿಗು ಗೊತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅಂದು ಅಲ್ಲು ಅರ್ಜುನ್ ಅವರು ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿ ಎಂಜಾಯ್ ಮಾಡಲು ಥಿಯೇಟರ್ ವಿಸಿಟ್ ಗಾಗಿ ಬಂದಾಗ, ನಡೆದ ನೂಕು ನುಗ್ಗಲು, ತಲ್ಲಾಟ ಇದರಲ್ಲಿ ಒಬ್ಬ ಮಹಿಳೆ ಕಾಲ್ತುಳಿತಕ್ಕೆ ಸಿಕ್ಕಿ ಸಾ*ವನ್ನಪ್ಪಿದರು, ಅವರ ಮಗನಿಗೆ ತೀವ್ರವಾದ ಗಾಯಗಳು ಆದವು. ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಪೊಲೀಸರು ಅಲ್ಲು ಅರ್ಜುನ್ ಅವರಿಗೆ ನೋಟಿಸ್ ಕಳಿಸಿದ್ದರಂತೆ. ಆದರೆ ಅಲ್ಲು ಅರ್ಜುನ್ ಅವರು ನೋಟಿಸ್ ಗೆ ಯಾವುದೇ ರೆಸ್ಪಾನ್ಸ್ ಮಾಡಿಲ್ಲ ಎಂದು ತಿಳಿದುಬಂದಿದೆ. ಹಾಗೆಯೇ ಅಲ್ಲು ಅರ್ಜುನ್ ಅವರು ಈ ಕೇಸ್ ಗೆ ಸಂಬಂಧಿಸಿದ ಹಿಯರಿಂಗ್ ಗೆ ಹೈಕೋರ್ಟ್ ಮೊರೆ ಹೋಗಿದ್ದರಂತೆ. ಆದರೆ ಹೈಕೋರ್ಟ್ ಇಂದ ಯಾವುದೇ ಹಿಯರಿಂತ್ ನಡೆದಿಲ್ಲ.

ಇತ್ತ ಲೋಕಸ್ ಪೊಲೀಸ್ ನವರು ನೋಟಿಸ್ ಕೊಟ್ಟಿದ್ದರು ಅದಕ್ಕೆ ಅಲ್ಲು ಅರ್ಜುನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಅಲ್ಲು ಅರ್ಜುನ್ ಅವರ ಮನೆಗೆ ಹೋಗಿ ಅವರನ್ನು ಬಂಧಿಸಿದ್ದಾರೆ. ಅಲ್ಲು ಅರ್ಜುನ್ ಅವರು ಬೆಡ್ ರೂಮ್ ನಲ್ಲಿ ಇದ್ದರಂತೆ. ಪೊಲೀಸರು ನೇರವಾಗಿ ಅವರ ಬೆಡ್ ರೂಮ್ ಗೆ ಹೋಗಿ, ನಟನನ್ನು ಅರೆಸ್ಟ್ ಮಾಡಿದ್ದಾರೆ. ಹೊರಗಡೆ ಬಂದು ಪೊಲೀಸ್ ಜೀಪ್ ಒಳಗೆ ಕೂರಿಸಿಕೊಂಡಿದ್ದಾರಂತೆ, ಆ ವೇಳೆ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಸಹ ಅಲ್ಲೇ ಇದ್ದರು, ಅವರು ಕೂಡ ಜೀಪ್ ಹತ್ತಿ ಸ್ಟೇಶನ್ ಗೆ ಬರುತ್ತೇನೆ ಎಂದರಂತೆ, ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅವರನ್ನು ಅಲ್ಲೇ ಬಿಟ್ಟು, ಅಲ್ಲು ಅರ್ಜುನ್ ಅವರನ್ನು ಮಾತ್ರ ಕರೆದುಕೊಂಡು ಹೊರಟಿದ್ದಾರೆ.
ಪೊಲೀಸರು ತಮ್ಮ ಜೊತೆಗೆ ನಡೆದುಕೊಂಡ ರೀತಿ, ತಮ್ಮನ್ನು ಬಂಧಿಸಿದ ರೀತಿ ಅಲ್ಲು ಅರ್ಜುನ್ ಅವರಿಗೆ ಇಷ್ಟ ಆಗಿಲ್ಲವಂತೆ, ಅದರ ಬಗ್ಗೆ ಅಲ್ಲೇ ಅಸಮಾಧಾನ ವ್ಯಕ್ತಪಡಿಸಿದರಂತೆ. ಆದರೆ ಪೊಲೀಸರು ಅದ್ಯಾವುದಕ್ಕೂ ಕೇರ್ ಮಾಡದೆ ಅಲ್ಲು ಅರ್ಜುನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಸಿನಿಮಾ ಗೆದ್ದ ಖುಷಿಯಲ್ಲಿದ್ದ ನಟನಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ. ಆದರೆ ಮೃತ ರಾಗಿರುವ ಮಹಿಳೆ ಮತ್ತು ಆಕೆಯ ಮಗನಿಗೆ ನ್ಯಾಯ ಸಿಗಬೇಕು. ಅವರ ಇಡೀ ಕುಟುಂಬಕ್ಕೆ ಇದು ನಷ್ಟ ತರುವಂಥ ವಿಷಯ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕೇಸ್ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.