ನಟ ರಜನಿಕಾಂತ್ ಅವರು ಬಹುದಿನಗಳ ಬಳಿಕ ಜೈಲರ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ತಮ್ಮ ನೆಚ್ಚಿನ ನಟನ ಸಿನಿಮಾಗಾಗಿ ಆಗಸ್ಟ್ 10 ರಂದು ಕೆಲ ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿವೆ. ಹೌದು ನಟ ರಜನಿಕಾಂತ್ ಗೆ ಬಾಲಕರಿಂದ ಹಿಡಿದು ವೃದ್ಧರವರೆಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಭಾಷಿಗರು ಇಷ್ಟ ಪಡುವಂತಹ ಓರ್ವ ನಟ. ಇವರು ಸಿನಿಮಾ ಬಿಡುಗಡೆಯೇ ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಆದ್ದರಿಂದ ಕೆಲ ಖಾಸಗಿ ಕಂಪನಿಗಳು ಆಗಸ್ಟ್ 10 ರಂದು ರಜೆ ಘೋಷಣೆ ಮಾಡಿವೆ.

‘ಜೈಲರ್’ ಸಿನಿಮಾ ಬಿಡುಗಡೆ ದಿನದಂದು ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಆದೇಶ ಪತ್ರದಲ್ಲಿ ‘ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಉಚಿತ ಟಿಕೆಟ್ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್ ಸ್ಟಾರ್’ ಎಂದು ಬರೆಯಲಾಗಿದೆ. ಇನ್ನು ಈ ಕಂಪನಿಯ ಚೆನೈ, ಬೆಂಗಳೂರು ಮುಂತಾದ ಪ್ರದೇಶಗಳ ಶಾಖೆಗಳಿಗೂ ರಜೆ ಅನ್ವಯ ಆಗುತ್ತದೆ ಎಂದು ಈ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಇನ್ನು ಬಹುನಿರೀಕ್ಷಿತ ‘ಜೈಲರ್’ ಸಿನಿಮಾದಲ್ಲಿ ನಮ್ಮ ಮಾಸ್ ಹೀರೋ ಡಾ. ಶಿವರಾಜ್ ಕುಮಾರ್ ಅವರೂ ನಟಿಸುತ್ತಿದ್ದಾರೆ. ಆದ್ದರಿಂದ ಈ ಸಿನಿಮಾ ಕರ್ನಾಟಕದಲ್ಲೂ ದೊಡ್ಡ ಹವಾ ಸೃಷ್ಟಿಸಿಸುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಕೇವಲ 10 ತನ್ನ ಪಾತ್ರ ಬರಲಿದೆ ಸ್ವತಃ ಶಿವರಾಜ್ ಕುಮಾರ್ ಅವರೇ ತಿಳಿಸಿದ್ದರು. ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ಮೋಹನ್ಲಾಲ್ ಮುಂತಾದ ದೊಡ್ಡ ತಾರಾಬಳಗವೇ ಇರಲಿದೆ.
ಈಗಾಗಲೇ ಬಿಡುಗಡೆಗೊಂಡಿದ್ದ ಜೈಲರ್ ಸಿನಿಮಾದ ಟ್ರೈಲರ್ 23 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಆದರೆ ಈ ಟ್ರೈಲರ್ ನಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಭಿಮಾನಿಗಳ ಅಭಿಪ್ರಾಯ ಸುಳ್ಳಾಗಿತ್ತು. ಆದರೆ ಇತ್ತೀಚಿಗೆ ರಿಲೀಸ್ ಆದ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಸಿನಿಮಾದ ತಮನ್ನಾ ಹೆಜ್ಜೆ ಹಾಕಿದ ‘ಕಾವಾಲಯ್ಯ’ ಹಾಡು ಸೂಪರ್ ಹಿಟ್ ಆಗಿದೆ.
‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದ್ದು, ಆ ಪೈಕಿ ತಮಿಳು ವರ್ಷನ್ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ. ಇದರಿಂದ ಅನೇಕರಿಗೆ ಬೇಸರ ಮೂಡಿಸಿದ್ದು, ಅನೇಕರು ಶಿವರಾಜ್ಕುಮಾರ್ ವಿರುದ್ಧ ಬೇಸರಗೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇರುವುದರಿಂದ ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.



