ಬಾಲಿವುಡ್ ಮಾತ್ರವಲ್ಲ ಈಗ ಎಲ್ಲಾ ಚಿತ್ರರಂಗದಲ್ಲಿ ಸಹ ಮದುವೆ, ಡೈವೋರ್ಸ್ ಇದೆಲ್ಲವೂ ಕಾಮನ್ ಎನ್ನುವ ರೀತಿ ಆಗಿ ಹೋಗಿದೆ. ಕಲಾವಿದರು ಲವ್ ನಲ್ಲಿ ಬೀಳುವುದು, ಮದುವೆ ಆಗುವುದು, ಕೆಲ ಸಮಯಕ್ಕೆ ವಿಚ್ಛೇದನ ಪಡೆದ ಸುದ್ದಿ ಬರುವುದು, ಇನ್ನು ಕೆಲವರದ್ದು ಮದುವೆಗಿಂತ ಮೊದಲೇ ಬ್ರೇಕಪ್ ಆಗುವುದು ಇದೆಲ್ಲವೂ ಈಗ ಸಿಕ್ಕಾಪಟ್ಟೆ ಕಾಮನ್ ಎನ್ನುವ ರೀತಿ ಆಗಿ ಹೋಗಿದೆ. ದಿನಾ ಒಂದೊಂದು ಸುದ್ದಿಯನ್ನು ನಾವು ಕೂಡ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಹೀಗಿರುವಾಗ ಬಾಲಿವುಡ್ ನ ಖ್ಯಾತ ನಟ ಅಮೀರ್ ಖಾನ್ ಅವರ ಮೂರನೇ ಮದುವೆ ಸುದ್ದಿ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. 60ರ ಅಂಚಿನಲ್ಲಿರುವ ನಟ ಈಗ ಮೂರನೇ ಮದುವೆ ಆಗುತ್ತಾರಾ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರು ಪ್ರೀತಿ ಮಾಡುತ್ತಿರುವ ಈ ಬೆಂಗಳೂರಿನ ಮಹಿಳೆ ಯಾರು? ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
ನಟ ಆಮೀರ್ ಖಾನ್ ಅವರು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟ. ಇವರಿಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇವರು ಆಯ್ಕೆ ಮಾಡಿಕೊಳ್ಳುವ ಒಂದೊಂದು ಪಾತ್ರ ಕೂಡ ಅದ್ಭುತವಾಗಿ ಇರುತ್ತದೆ ಎಂದು ಹೇಳಿದರೆ ತಪ್ಪಲ್ಲ. ಬಾಲಿವುಡ್ ನಲ್ಲಿ ತಮ್ಮ ಅದ್ಭುತ ಕೆಲಸದ ಮೂಲಕ ಹೆಸರು ಮತ್ತು ಜನಪ್ರಿಯತೆ ಜೊತೆಗೆ ಒಂದಷ್ಟು ಅವಾರ್ಡ್ ಗಳನ್ನು ಗಳಿಸಿರುವ ಆಮೀರ್ ಖಾನ್ ಅವರು ವೈಯಕ್ತಿಕ ಜೀವನದ ವಿಚಾರಕ್ಕೆ ಸುದ್ದಿ ಆಗುವುದನ್ನು ಸಹ ನಾವೆಲ್ಲರೂ ನೋಡಿದ್ದೇವೆ. ಈಗಾಗಲೇ ಎರಡು ಬಾರಿ ಮದುವೆಯಾಗಿ, 2 ಬಾರಿ ವಿಚ್ಛೇದನ ಪಡೆದಿರುವ ನಟ ಅಮೀರ್ ಖಾನ್ ಈಗ ಮೂರನೇ ಮದುವೆಗೆ ಸಿದ್ಧವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೊದಲು ವರದಿ ಮಾಡಿದ್ದು ಫಿಲ್ಮ್ ಫೇರ್. ಈ ಬಾರಿ ಇವರು ಪ್ರೀತಿಸಿರುವುದು ಬೆಂಗಳೂರು ಮೂಲದ ಮಹಿಳೆಯನ್ನು ಎಂದು ಹೇಳಲಾಗುತ್ತಿದೆ.

ಇನ್ನು ನಟ ಅಮೀರ್ ಖಾನ್ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಮೊದಲಿಗೆ ಮದುವೆ ಆಗಿದ್ದು ರೀನಾ ದತ್ತ ಅವರ ಜೊತೆಗೆ. ಇವರೊಡನೆ 16 ವರ್ಷಗಳ ಕಾಲ ಸಂಸಾರ ನಡೆಸಿದರು ಆಮೀರ್ ಖಾನ್. ರೀನಾ ಹಾಗೂ ಆಮೀರ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಜುನೈದ್ ಖಾನ್ ಹಾಗೂ ಇರಾ ಖಾನ್. ಇವರಿಬ್ಬರು ಸಣ್ಣವದಿದ್ದಾಗಲೇ ತಂದೆ ತಾಯಿ ದೂರ ಆಗಿದ್ದರು. ಆಮೀರ್ ಖಾನ್ ಅವರ ಮಗ ಜುನೈದ್ ಖಾನ್ ಚಿತ್ರರಂಗಕ್ಕೆ ಬರುವುದಕ್ಕೆ ಸಿದ್ಧವಾಗಿದ್ದಾರೆ. ಅಪ್ಪನ ಹಾಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಇವರು ಆಸಕ್ತಿ ಹೊಂದಿದ್ದು, ಈಗಾಗಲೇ ಸಿನಿಮಾ ಶೂಟಿಂಗ್ ಸಹ ನಡೆಯುತ್ತಿದೆ. ಶೀಘ್ರದಲ್ಲೇ ಬಾಲಿವುಡ್ ಗೆ ನಾಯಕನಾಗಿ ಎಂಟ್ರಿ ಕೊಡೋದಕ್ಕೆ ಸಿದ್ಧವಾಗಿದ್ದಾರೆ ಆಮೀರ್ ಖಾನ್ ಅವರ ಮಗ ಜುನೈದ್ ಖಾನ್. ಇನ್ನು ಮಗಳು ಇರಾ ಖಾನ್ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ..

ಇರಾ ಖಾನ್ ಅವರಿಗೆ ಇತ್ತೀಚೆಗೆ ಮದುವೆಯಾಯಿತು, ಅವರು ಗಂಡ ಮನೆ ಎಂದು ತಮ್ಮ ಲೈಫ್ ನೋಡಿಕೊಂಡು ಇದ್ದಾರೆ. ಇವರ ಮದುವೆಯನ್ನು ಆಮೀರ್ ಖಾನ್ ಅವರು ಬಹಳ ಸರಳವಾಗಿ ಮಾಡಿದರು. ಸೆಲೆಬ್ರಿಟಿಗಳು ಇಲ್ಲದೇ ಕುಟುಂಬದವರ ಸಮ್ಮುಖದಲ್ಲಿ ಮಗಳು ಇರಾ ಖಾನ್ ಮದುವೆ ನಡೆದಿತ್ತು. ಇನ್ನು ಆಮೀರ್ ಖಾನ್ ಅವರ ಎರಡನೇ ಹೆಂಡತಿ ಕಿರಣ್ ರಾವ್. ಇವರ ಜೊತೆಗೆ ಸಹ ಆಮೀರ್ ಖಾನ್ ಅವರು 16 ವರ್ಷಗಳ ಕಾಲ ಸಂಸಾರ ಮಾಡಿದ್ದಾರೆ. ಈ ಜೋಡಿಗೆ ಆಜಾದ್ ಹೆಸರಿನ ಮಗ ಸಹ ಇದ್ದಾನೆ. ಆದರೆ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ವಿಚ್ಛೇದನ ಪಡೆದರು. ಆದರೆ ಮಗ ತುಂಬಾ ಚಿಕ್ಕವನು ಎನ್ನುವ ಕಾರಣಕ್ಕೆ ಕಿರಣ್ ಅವರ ಜೊತೆಗೆ ಒಳ್ಳೆಯ ಬಾಂಧವ್ಯ ಹಾಗೂ ಫ್ರೆಂಡ್ಶಿಪ್ ಅನ್ನು ಇಂದಿಗೂ ಹೊಂದಿದ್ದಾರೆ ನಟ ಅಮೀರ್ ಖಾನ್. ಕಿರಣ್ ಅವರು ಸಿನಿಮಾ ನಿರ್ದೇಶಕಿ ಸಹ ಹೌದು. ಇವರ ಸಿನಿಮಾಗೆ ಒಳ್ಳೆಯ ಜನಪ್ರಿಯತೆ ಇದೆ..

ಇನ್ನು ಆಮೀರ್ ಖಾನ್ ಅವರು ತಮ್ಮ ಜೊತೆ ದಂಗಲ್ ಸಿನಿಮಾದಲ್ಲಿ ನಟಿಸಿದ ಫಾತಿಮಾ ಸನಾ ಖಾನ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ, ಅವರ ಜೊತೆಗೆ ಮೂರನೇ ಮದುವೆ ಆಗುತ್ತಾರೆ. ಈ ಕಾರಣಕ್ಕೆ ಕಿರಣ್ ಅವರಿಂದ ವಿಚ್ಛೇದನ ಪಡೆದಿದ್ದು, ಎನ್ನುವ ಸುದ್ದಿಗಳು ಕೇಳಿಬಂದಿದ್ದವು. ಕೆಲ ಸಮಯದ ಇದು ದೊಡ್ಡದಾಗಿಯೇ ಸುದ್ದಿಯಾಗಿತ್ತು, ಮಗಳ ವಯಸ್ಸಿನ ಹುಡುಗಿಯನ್ನು ಆಮೀರ್ ಖಾನ್ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನುವುದು ಸಾಮಾನ್ಯದ ವಿಷಯ ಅಂತು ಆಗಿರಲಿಲ್ಲ. ಆಗ ಈ ಸುದ್ದಿಗಳಿಗೆ ಅಮೀರ್ ಖಾನ್ ಅವರಿಂದ ಆಗಲಿ, ಕಿರಣ್ ರಾವ್ ಅವರಿಂದ ಆಗಲಿ ಅಥವಾ ಫಾತಿಮಾ ಸನಾ ಖಾನ್ ಅವರಿಂದ ಆಗಲಿ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಈಗ ಇದೆಲ್ಲವನ್ನು ಬಿಟ್ಟು ಮತ್ತೊಬ್ಬ ಮಹಿಳೆಯನ್ನು ಮದುವೆ ಆಗುತ್ತಾರೆ ಆಮೀರ್ ಖಾನ್ ಎನ್ನುವ ಸುದ್ದಿ ಕೇಳಿಬರುತ್ತಿದೆ..
ಹೌದು, ನಟ ಅಮೀರ್ ಖಾನ್ ಅವರು ಇನ್ನೊಬ್ಬ ಮಹಿಳೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಆಕೆ ಬೆಂಗಳೂರು ಮೂಲದವರಾಗಿದ್ದು, ಆಕೆಯನ್ನು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆಮೀರ್ ಖಾನ್ ಅವರಿಗೆ ಈಗ 59 ವರ್ಷ, ಈಗ ಅವರು ಈ ಮಹಿಳೆಯ ಜೊತೆಗೆ ಮೂರನೇ ಬಾರಿ ಮದುವೆ ಆಗಲಿದ್ದಾರಂತೆ. ಮಾಧ್ಯಮಗಳಲ್ಲಿ ಸಿಕ್ಕಿರುವ ಮಾಹಿತಿಯ ಅನುಸಾರ, ಈ ಮಹಿಳೆಯ ಹೆಸರು ಗೌರಿ. ಇವರಿಬ್ಬರು ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈಗಾಗಲೇ ಗೌರಿ ಅವರನ್ನು ತಮ್ಮ ಇಬ್ಬರು ಮಾಜಿ ಪತ್ನಿಯರು ಮತ್ತು ಮೂವರು ಮಕ್ಕಳಿಗೆ ಪರಿಚಯ ಕೂಡ ಮಾಡಿಸಿದ್ದಾರಂತೆ ಆಮೀರ್ ಖಾನ್. ಇವರೆಲ್ಲರೂ ಜೊತೆಯಾಗಿ ಕೂತು ಊಟ ಕೂಡ ಮಾಡಿದ್ದಾರಂತೆ. ಹೀಗೊಂದು ಸುದ್ದಿ ಕೇಳಿಬಂದಿದೆ.

ಗೌರಿ ಅವರು ಬಾಲಿವುಡ್ ಗೆ ಸಂಬಂಧಿಸಿದವರಲ್ಲ, ಬದಲಾಗಿ ಇವರು ಸಿನಿಮಾದವರೆ ಅಲ್ಲ ಎಂದು ಹೇಳಲಾಗುತ್ತಿದೆ. ಗೌರಿ ಅವರು ಸಂಪೂರ್ಣವಾಗಿ ಹೊರಾಗಿನವರಾಗಿದ್ದು, ಬೆಂಗಳೂರಿನಲ್ಲೇ ಈ ಜೋಡಿಯ ಮದುವೆ ನಡೆಯುತ್ತದೆ ಎನ್ನಲಾಗಿದೆ. ಹಾಗೆಯೇ ಇವರಿಬ್ಬರೂ ಶೀಘ್ರದಲ್ಲೇ ಈ ವಿಚಾರವನ್ನು ಬಹಿರಂಗವಾಗಿ ತಿಳಿಸುತ್ತಾರೆ ಎನ್ನಲಾಗಿದೆ. ಆದರೆ ಇನ್ನೂ ಕೂಡ ಇದು ಒಂದು ರೀತಿ ಅಂತೆ ಕಂತೆಯೇ ಆಗಿದ್ದು, ನಟ ಅಮೀರ್ ಖಾನ್ ಅವರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದು ನಿಜಾನ ಅಥವಾ ಗಾಸಿಪ್ ಮಾತ್ರಾನ ಎಂದು ತಿಳಿಯಲು ಇವರ ಕುಟುಂಬದಿಂದ ಅಧಿಕೃತ ಮಾಹಿತಿ ಬರುವವರೆಗೂ ಕಾಯಬೇಕಿದೆ.