ಬಾಲಿವುಡ್ ನಲ್ಲಿ ಮದುವೆಯ ಸುದ್ದಿಗಳು ಒಂದು ರೀತಿ ಕಾಮನ್ ಆಗಿ ಹೋಗಿದೆ. ಒಂದು ಮದುವೆ, ಎರಡು ಮದುವೆ, ಮೂರನೇ ಮದುವೆ, ಲವ್ , ಡೇಟಿಂಗ್, ಬ್ರೇಕಪ್ ಇದೆಲ್ಲವೂ ಸಿಕ್ಕಾಪಟ್ಟೆ ಕಾಮನ್. ಬೆಳಿಗ್ಗೆ ಮದುವೆ, ಮಧ್ಯಾಹ್ನ ಬ್ರೇಕಪ್ ಎನ್ನುವ ಇಂದಿನ ಪ್ರಪಂಚದಲ್ಲಿ ನಿಜವಾದ ಮದುವೆ, ದಾಂಪತ್ಯ ಜೀವನ, ಸಂಬಂಧಗಳ ಮೌಲ್ಯ ಇದೆಲ್ಲವು ಜನರಿಗೆ ಅರ್ಥವಾಗಿಲ್ಲ ಎಂದು ಹೇಳಿದರೆ ತಪ್ಪಲ್ಲ. ಈಗಿನ ಜೆನೆರೇಷನ್ ಯಾಂತ್ರಿಕವಾಗಿ ಜೀವನ ನಡೆಸುತ್ತಿದ್ದಾರೆ, ಹಳೆಯ ಜೆನೆರೇಷನ್ ನ ಕೆಲವರು ಸಹ ಅದೇ ರೀತಿ ಇದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳ ಲೈಫ್ ಅಲ್ಲಿ, ಇದೆಲ್ಲವೂ ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಹೀಗಿರುವಾಗ ನಟ ಅಮೀರ್ ಖಾನ್ ಅವರು ಮೂರನೇ ಮದುವೆಗೆ ರೆಡಿ ಆಗಿದ್ದಾರೆ, ಬೆಂಗಳೂರಿನ ಹುಡುಗಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಷಯ ಒಂದು ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ..
ಬಾಲಿವುಡ್ ನ ಖಾನ್ ಗಳ ಪೈಕಿ ಆಮೀರ್ ಖಾನ್ ಸಹ ಒಬ್ಬರು. ಇವರು ವಿಭಿನ್ನವಾದ ಕಥಾಹಂದರವನ್ನು ಒಳಗೊಂಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚು ಸುದ್ದಿಯಾದವರು. ಆಮೀರ್ ಖಾನ್ ಅವರ ಸಿನಿಮಾ ಎಂದರೆ ಅದರಲ್ಲಿ ಕಂಟೆಂಟ್ ಚೆನ್ನಾಗಿರುತ್ತದೆ ಎನ್ನುವ ನಂಬಿಕೆ ಸಿನಿಪ್ರಿಯರಲ್ಲಿ ಇರುತ್ತದೆ ಆ ರೀತಿಯ ಒಳ್ಳೇ ಸಿನಿಮಾಗಳನ್ನು ಕೊಟ್ಟವರು ಆಮೀರ್ ಖಾನ್. ಹಾಗೆಯೇ ಇವರು ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನ ಇದರಲ್ಲಿ ಸಹ ಮುಂದಿದ್ದಾರೆ. ತಾರೆ ಜಮೀನ್ ಪರ್ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಎಂಥದ್ದೊಂದು ಬದಲಾವಣೆ ತಂದಿತು ಎನ್ನುವ ವಿಷಯ ಗೊತ್ತೇ ಇದೆ. ಹೀಗೆ ಚಿತ್ರರಂಗದಲ್ಲಿ ಹೊಸತನ ತಂದು ಒಳ್ಳೆಯ ನಟ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಆಮೀರ್ ಖಾನ್ ಅವರು ವೈಯಕ್ತಿಕ ವಿಶಯದಿಂದಲು ಆಗಾಗ ಸುದ್ದಿಯಾಗುತ್ತಾರೆ.

ಇವರ ಲೈಫ್ ನಲ್ಲಿ ಎರಡು ಮದುವೆಯಾಗಿ, ಎರಡು ಬಾರಿ ವಿಚ್ಛೇದನ ಪಡೆದಿರುವ ವಿಷಯ ಗೊತ್ತೇ ಇದೆ. ಆಮೀರ್ ಖಾನ್ ಅವರು ರೀನಾ ದತ್ ಅವರ ಜೊತೆಗೆ ಮದುವೆಯಾಗಿ ರೀನಾ ಅವರಿಂದ ವಿಚ್ಛೇದನ ಪಡೆದು, ಬಳಿಕ ಕಿರಣ್ ರಾವ್ ಅವರ ಜೊತೆಗೆ ಮದುವೆಯಾಗಿ, ಇತ್ತೀಚೆಗೆ ಕಿರಣ್ ರಾವ್ ಅವರಿಗೆ ಸಹ ವಿಚ್ಚೇದನ ನೀಡಿದರು. ಪತ್ನಿಯರಿಗೆ ವಿಚ್ಛೇದನ ನೀಡಿದ್ದರೂ ಸಹ ಅವರ ಜೊತೆಗೆ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯ ಇಟ್ಟುಕೊಂಡಿದ್ದಾರೆ ಆಮೀರ್ ಖಾನ್. ವಿಚ್ಛೇದನ ಕೊಟ್ಟ ಮೇಲು ಮಗನ ಶಾಲೆಯ ಕಾರ್ಯಕ್ರಮಗಳಲ್ಲಿ ಮಾಜಿ ಪತ್ನಿ ಕಿರಣ್ ರಾವ್ ಅವರ ಜೊತೆಗೆ ಹೋಗಿದ್ದರು. ಮಗನಿಗೋಸ್ಕರ ಇಬ್ಬರು ಸ್ನೇಹದಿಂದ ಇರುವುದಾಗಿ ತಿಳಿಸಿದ್ದರು ನಟ ಆಮೀರ್ ಖಾನ್. ಇನ್ನು ಕಿರಣ್ ರಾವ್ ಅವರ ಲಾಪತಾ ಲೇಡೀಸ್ ಸಿನಿಮಾಗೆ ಆಮೀರ್ ಅವರ ಸಪೋರ್ಟ್ ಇತ್ತು.

ಈ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಇವರ ಬದುಕಿಗೆ ಈಗ ಹೊಸದೊಂದು ವಿಚಾರ ತಳುಕು ಹಾಕಿ ಕೊಂಡಿದೆ. ಆಮೀರ್ ಖಾನ್ ಅವಾರು ಮೂರನೇ ಮದುವೆ ಆಗೋದಕ್ಕೆ ರೆಡಿ ಆಗಿದ್ದಾರೆ. ಅವರು ಬೆಂಗಳೂರಿನ ಮೂಲದ ಹುಡುಗಿಯನ್ನು ಡೇಟಿಂಗ್ ಮಾಡುತ್ತಿದ್ದು, ಇಬ್ಬರು ಸೀರಿಯಸ್ ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎನ್ನಲಾಗಿದೆ. ಆಮೀರ್ ಖಾನ್ ಅವರು ಈಗಾಗಲೇ ಆ ಹುಡುಗಿಯನ್ನ ತಮ್ಮ ಮನೆಯವರಿಗೆ ಕೂಡ ಪರಿಚಯ ಮಾಡಿಸಿದ್ದಾರೆ ಎನ್ನಲಾಗಿದೆ. ಆದರೆ ಇದು ಮಾಧ್ಯಮಗಳು ವರದಿ ಮಾಡಿರುವ ಸುದ್ದಿ ಆಗಿದ್ದು, ನಟ ಅಮೀರ್ ಖಾನ್ ಅವರ ಕಡೆಯಿಂದ ಅಥವಾ ಅವರ ಕುಟುಂಬದ ಕಡೆಯಿಂದ ಈ ವಿಷಯದ ಬಗ್ಗೆ ಯಾವುದೇ ಸ್ಪಶ್ಟನೆ ಸಿಕ್ಕಿಲ್ಲ. ಈ ಸುದ್ಧಿ ನಿಜವೇ ಅಥವಾ ಸುಳ್ಳೋ ಎಂದು ತಿಳಿದುಕೊಳ್ಳಲು ನೆಟ್ಟಿಗರು ಹಾಗೂ ಆಮೀರ್ ಖಾನ್ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ನಟ ಆಮೀರ್ ಖಾನ್ ಅವರಿಗೆ ಈಗ 59 ವರ್ಷ ವಯಸ್ಸು, ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದುಕೊಂಡಿರುವ ಇವರು ಮೂರನೇ ಬಾರಿ ಮದುವೆಗೆ ತಯಾರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚೆಗೆ ಇವರ ಮಗಳ ಮದುವೆ ನಡೆಯಿತು. ಮಗ ಚಿತ್ರರಂಗಕ್ಕೆ ಬರುತ್ತಾರೆ ಎನ್ನಲಾಗುತ್ತಿದೆ. ಇವರ ಮಗನ ಜೊತೆಗೆ ಸಾಯಿ ಪಲ್ಲವಿ ನಟಿಸಿದ್ದು, ಆ ಸಿನಿಮಾ ಈ ವರ್ಷ ಬಿಡುಗಡೆ ಆಗುವ ನಿರೀಕ್ಷೆ ಇದೆ. ಮಕ್ಕಳ ಬಗ್ಗೆ ಈ ರೀತಿಯ ಸುದ್ದಿಗಳು ಬರುತ್ತಲಿರುವಾಗ ಆಮೀರ್ ಖಾನ್ ಅವರ ಬಗ್ಗೆ ಮದುವೆಯ ಸುದ್ದಿ ಕೇಳಿ ಬರುತ್ತಿರುವುದು ನೆಟ್ಟಿಗರಿಗೆ ಶಾಕ್ ನೀಡಿದೆ. ಹಲವು ಜನರು ಬೇರೆ ಬೇರೆ ರೀತಿಗಳಲ್ಲಿ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ವಯಸ್ಸಲ್ಲಿ ಇದೆಲ್ಲ ಬೇಕಾ ಎಂದರೆ ಇನ್ನು ಕೆಲವರು ಇದು ಸುಳ್ಳು ಸುದ್ದಿ ಇರಬಹುದು ಎನ್ನುತ್ತಿದ್ದಾರೆ. ಆಮೀರ್ ಖಾನ್ ಅವರು ಸ್ಪಷ್ಟನೆ ನೀಡುವವರೆಗೂ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಆಮೀರ್ ಖಾನ್ ಅವರು ಮಗಳ ಮದುವೆ ಸಮಯದಲ್ಲಿ ಸಹ ಸುದ್ದಿಯಾಗಿದ್ದರು. ಇವರ ಮಗಳ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ. ಮಗಳು ಇಷ್ಟಪಟ್ಟ ಹುಡುಗನ ಜೊತೆಗೆ ಸರಳವಾಗಿ ಮದುವೆ ಮಾಡಿ ಮುಗಿಸಿದರು ಆಮೀರ್ ಖಾನ್. ಮದುವೆಗೆ ಹೆಚ್ಚಿನ ಸೆಲೆಬ್ರಿಟಿಗಳು ಸಹ ಬಂದಿರಲಿಲ್ಲ. ಇವರ ಮಗಳ ಮದುವೆ ಕುಟುಂಬದವರ ಸಮ್ಮುಖದಲ್ಲಿ ಬಹಳ ಸರಳವಾಗಿ ನಡೆದು ಹೋಯಿತು. ಆಮೀರ್ ಖಾನ್ ಅವರ ಮಗಳು ತಂದೆ ತಾಯಿಯ ಹಾಗೆ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ ಅವರ ವೃತ್ತಿ ಬೇರೆಯೇ ಆಗಿದೆ. ಆದರೆ ಇವರ ಮಗ ಈಗಾಗಲೇ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಎರಡನೇ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆಮೀರ್ ಅವರ ಮಗ ಜುನೈದ್ ತಮ್ಮ ಸಿಂಪ್ಲಿಸಿಟಿ ಇಂದ ಬಹಳ ಸುದ್ದಿಯಾಗುತ್ತಾರೆ. ತಾನೊಬ್ಬ ಸೂಪರ್ ಸ್ಟಾರ್ ಮಗ ಅನ್ನೋ ಅಹಂ ಇಲ್ಲದೆ ಬಹಳ ಸರಳವಾಗಿ ಇರುತ್ತಾರೆ.

ಹಲವು ಬಾರಿ ಇವರು ಸಾಮಾನ್ಯರ ಹಾಗೆ ಆಟೋದಲ್ಲಿ ಓಡಾಡುವ ವಿಡಿಯೋ ಗಳು ವೈರಲ್ ಆಗಿದೆ. ಅಷ್ಟು ದೊಡ್ಡ ಸ್ಟಾರ್ ಹೀರೋ ಮಗ ಇಷ್ಟು ಸಿಂಪಲ್ ಆಗಿದ್ದಾರೆ ಎಂದು ಜನರು ಸಹ ಆಶ್ಚರ್ಯ ಪಟ್ಟಿರುವುದು ಇದೆ. ಇನ್ನು ಇವರ ಮಾಜಿ ಪತ್ನಿ ಕಿರಣ್ ರಾವ್ ಅವರ ಲಾಪತಾ ಲೇಡೀಸ್ ಸಿನಿಮಾ ಆಸ್ಕರ್ ಸೆಲೆಕ್ಟ್ ಆಗುವ ಭರವಸೆಯನ್ನು ಮೂಡಿಸಿತ್ತು, 2024ರ ಅತ್ಯುತ್ತಮ ಸಿನಿಮಾಗಳ ಸಾಲಿಗೆ ಸೇರಿದೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಇವರ ಇಡೀ ಕುಟುಂಬ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಆಮೀರ್ ಖಾನ್ ಅವರು ಇದೀಗ 3ನೇ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದು, ಈ ವಿಷಯದ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕಿದೆ. ಈ ವಿಷಯ ನಿಜವೇ ಆದರೆ ಆಮೀರ್ ಖಾನ್ ಅವರು ಹೆಚ್ಚು ಟ್ರೋಲ್ ಆಗುವುದಂತೂ ಖಂಡಿತ.