ದಿ ಕಾಶ್ಮೀರ್ ಫೈಲ್ಸ್ ಚಿತ್ರ ಇಡೀ ದೇಶಡೆಲ್ಲೆಡೆ ಸಂಚಲನ ಮೂಡಿಸಿತ್ತು. ಅಗ್ನಿ ಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್ ಭಾರತದೇಲ್ಲೆಡೆ ಸಾಕಷ್ಟು ವೀಕ್ಷಣೆ ಕಂಡಿದ್ದು, ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಅಗ್ರಸ್ಥಾನ ಪಡೆದುಕೊಳ್ಳುವ ನಿರೀಕ್ಷೆಯಿದೆ. ಹಾಗಾದ್ರೆ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕನ ಮುಂದಿನ ಚಿತ್ರ ಯಾವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅಷ್ಟೇ ಅಲ್ಲದೆ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ಅಗ್ನಿ ಹೋತ್ರಿ ಕನ್ನಡದಲ್ಲೂ ಒಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಕರೋನ ಸಮಯದಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದ ಒಂದು ವಸ್ತು ಅಂದ್ರೆ ಅದು ವ್ಯಾಕ್ಸಿನ್.

ಇದೀಗ ವಿವೇಕ್ ಅಗ್ನಿಹೋತ್ರಿ ಅದೇ ವ್ಯಾಕ್ಸಿನ್ ವಿಚಾರ ವಾಗಿ ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದಾರೆ. ಹೌದು ವಾಕ್ಸಿನ್ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಅಗ್ನಿ ಹೋತ್ರಿ ಆ ಚಿತ್ರಕ್ಕೆ ದಿ ವ್ಯಾಕ್ಸಿನ್ ವಾರ್ ಎಂದು ಹೆಸರನ್ನು ಇಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಈ ಹಿಂದೆ ಕೇವಲ ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಓಟಿಟಿಗೆ ಚಿತ್ರ ಬಂದ ಮೇಲೆ ಕನ್ನಡ ಅವತರಣಿಕೆಗೆ ಡಬ್ ಮಾಡಲಾಯಿತು. ಆದರೆ ದಿ ವ್ಯಾಕ್ಸಿನ್ ವಾರ್ ಚಿತ್ರ ಹಿಂದಿ, ಕನ್ನಡ, ತಮಿಳು,ತೆಲುಗು, ಸೇರಿಸಿ ಒಟ್ಟು 11 ಭಾಷೆಯಲ್ಲಿ ಅಗ್ನಿ ಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಚಿತ್ರ ತೆರೆಕಾಣಲಿದೆ. ಕರೋನ ಸಂದರ್ಭದಲ್ಲಿ ವ್ಯಾಕ್ಸಿನ್ ಎಲ್ಲೆಡೆ ಸಖತ್ ಸುದ್ದಿ ಮಾಡಿತ್ತು.
ವ್ಯಾಕ್ಸಿನ್ ಮಾಡಿದ ಅವಾಂತರ, ವ್ಯಾಕ್ಸಿನ್ ಮಾಫಿಯಾ,ಹಾಗೇ ಅದರ ನೆಗೆಟಿವ್ ಹಾಗೂ ಪಾಸಿಟಿವ್ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಚಿತ್ರವಿದಾಗಿದೆ. ಕಾಶ್ಮೀರ್ ಫೈಲ್ಸ್ ಚಿತ್ರದ ಸಂದರ್ಭದಲ್ಲಿ ವ್ಯಾಕ್ಸಿನ್ ಚಿತ್ರ ಮಾಡಬೇಕೆಂದು ಕೆಲ ರೀಸರ್ಚ್ ಮಾಡಿದ್ದ ನಿರ್ದೇಶಕ ಅಗ್ನಿ ಹೋತ್ರಿ, ಕರೋನ ಕಾರಣದಿಂದ ಕಾಶ್ಮೀರ್ ಫೈಲ್ಸ್ ಚಿತ್ರದ ಶೂಟಿಂಗ್ ತಯಾರಿ ವಿಳಂಬವಾದರಿಂದ ವ್ಯಾಕ್ಸಿನ್ ಕಥೆಯತ್ತ ಅಗ್ನಿ ಹೋತ್ರಿ ಯೋಚಿಸಿದ್ದರು. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ವಿಚಾರವನ್ನು ಗಮನಿಸಿರುವ ನಿರ್ದೇಶಕ ಅಗ್ನಿ ಹೋತ್ರಿ ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.



