ಜೈಲಲ್ಲಿರುವ ಆರೋಪಿ, ನಟ ದರ್ಶನ್ ತೂಗುದೀಪ ಅವರು ಮೂಲಸೌಕರ್ಯಕ್ಕಾಗಿ ಪರದಾಡುತ್ತಿದ್ದಾರೆ. ಕನಿಷ್ಠ ಮೂಲಸೌಲಭ್ಯ ಒದಗಿಸಿದ್ದೇವೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಜೈಲು ಸೇರಿದ ಬಳಿಕ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು ಸಾಕಷ್ಟು ಆರೋಗ್ಯ ಸಮಸ್ಯೆಗಳು ಕೂಡ ಎದುರಾಗಿದೆ. ಅಲ್ಲದೆ ಹಾಸಿಗೆ, ಬೆಡ್ ಶೀಟ್ ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಜೈಲಾಧಿಕಾರಿಗಳ ಮೇಲೆ ಆರೋಪಿಸಿದ್ದರು.
ದರ್ಶನ್ ಜೈಲೊಳಗಿನ ಪರದಾಟ ಕುರಿತು ಯುವತಿಯೊಬ್ಬಳು ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ದರ್ಶನ್ ಜೈಲಿನಲ್ಲಿ ಬೆಡ್ ಗಾಗಿ ಪರದಾಡಿದ್ದು ಗೊತ್ತೇ ಇದೆ. ಇದೇ ಬೆಡ್ ವಿಚಾರ ಮುಂದಿಟ್ಟುಕೊಂಡು ಯುವತಿಯೊಬ್ಬರು ಜ್ಯೂಸ್ ಕುಡಿಯುತ್ತ ಮಾತನಾಡಿದ್ದಾರೆ, ಅಸಲಿಗೆ ಯುವತಿ ಹೇಳಿದ ಮಾತು ತಮಾಷೆ ಅನ್ನಿಸಿದರೆ ದರ್ಶನ್ ಅವರು ಈ ಪರಿಸ್ಥಿತಿಗೆ ಬರಲು ಅದೇ ಕಾರಣ ಎನ್ನಲಾಗಿದೆ.
“ಏನು ದರ್ಶನ್ಗೆ ಜೈಲಲ್ಲಿ ಬೆಡ್ ಸಿಗ್ತಿಲ್ಲವಾ!, ಹೊರಗಿದ್ದಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರದು ಎಂದು ಯೊಚಿಸಿ ಜೀವನ ಮಾಡಿದ್ದರೆ. ಇವತ್ತು ಜೈಲಲ್ಲಿ ಬೆಡ್ ಗೆ ಪರದಾಡೋ ದಿನ ಬರುತ್ತಿರಲಿಲ್ಲ’ ಎಂದು ಆ ಯುವತಿ ಹೇಳಿದ್ದಾರೆ.
ಮುಂದುವರಿದು… “ಆಯುರ್ವೇಧದ ಪ್ರಕಾರ ಹಾಸಿಗೆ ಇಲ್ಲದೇ ನೆಲದ ಮೇಲೆ ಮಲಗಿದರೆ ಬೆನ್ನು ನೋವು ವಾಸಿಯಾಗುತ್ತಂತೆ. ಅಣ್ಣಂಗೆ ಬೆನ್ನು ನೋವು ವಾಸಿಯಾಗಬೇಕು. ಅದು ಮುಖ್ಯ’ ಎಂದು ಯುವತಿ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ.



