ಸಮುದ್ರ ಲೋಕದಲ್ಲಿ ಲಕ್ಷಾಂತರ ವಿಧದ ಜಲಚರಗಳಿವೆ ಅವುಗಳ ಬಗ್ಗೆ ಬೇಕಾದಷ್ಟು ಮಾಹಿತಿಗಳೂ ಕೂಡ ಇವೆ. ಆದರೆ ಅತ್ಯಂತ ಸಾತ್ವಿಕ ಜಲಚರ ಎಂದು ಕರೆಸಿಕೊಳ್ಳುವ ಡಾಲ್ಫಿನ್ ಗಳ ಪೈಕಿ ಪ್ರತ್ಯೇಕ 40 ವಿಧಗಳಿದ್ದರೂ ಕೂಡ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಇದೀಗ ಸಮುದ್ರ ಮೀನುಗಾರಿಕೆ ವೇಳೆ ಅತ್ಯಂತ ಅಪರೂಪದ ಪಿಂಕ್ ಬಣ್ಣದ ಡಾಲ್ಫಿನ್ ಒಂದು ಮೀನುಗಾರರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.
ಸುಮಾರು 20 ವರ್ಷಗಳಿಂದಲೂ ಸಮುದ್ರ ಮೀನುಗಾರಿಕೆ ನಡೆಸುತ್ತಿರುವ ವಾಷಿಂಗ್ಟನ್ ಮೂಲದ ಥಾಮಸ್ ಗಷ್ಟಿನ್ ಎಂಬವರು ಇತ್ತೀಚೆಗಷ್ಟೇ ಮೀನುಗಾರಿಕೆಗೆ ತೆರಳಿದಾಗ ಈ ನಸುಗೆಂಪು ಬಣ್ಣದ ಡಾಲ್ಫಿನ್ ಸಮುದ್ರದ ಮೇಲೆ ಕಾಣಿಸಿಕೊಂಡಿದೆ. ಅದನ್ನು ವಿಡಿಯೋ ಮಾಡಿರುವ ಥಾಮಸ್ ವಿಡಿಯೋವನ್ನು ಟ್ವಿಟ್ಟರದ ನಲ್ಲೊ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಥಾಮಸ್, ‘ಈ ರೀತಿಯ ನಸುಗೆಂಪು ಬಣ್ಣದ ಡಾಲ್ಫಿನ್ ಗಳು ಹೆಚ್ಚಾಗಿ ಸಮುದ್ರದಾಳದಿಂದ ಹೊರ ಬರುವುದಿಲ್ಲ ಮತ್ತು ಜನರನ್ನು ಕಾಣಲು ಬಯಸುವುದಿಲ್ಲ. ಆದರೆ ನನ್ನ ಅದೃಷ್ಟಕ್ಕೆ ಆವತ್ತು ಮೀನುಗಾರಿಕೆಗೆ ತೆರಳಿದಾಗ ಪಿಂಕ್ ಡಾಲ್ಫಿನ್ ನನ್ನ ಕಣ್ಣಿಗೆ ಬಿತ್ತು. ತಡ ಮಾಡದೆ ಅದನ್ನು ವಿಡಿಯೋ ಮಾಡಿದೆ. ಇದೀಗ ಎಲ್ಲರೂ ಅದನ್ನು ಮೆಚ್ಚಿಕೊಂಡಿದ್ದಾರೆ’ ಎಂದಿದ್ದಾರೆ. ಸದ್ಯ, ಥಾಮಸ್ ಅವರ ಪಿಂಕ್ ಡಾಲ್ಫಿನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.