ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಯಾಗಿರುವ ‘ಲಕ್ಷ್ಮಿ ಬಾರಮ್ಮ’ ನಾಡಿನಾದ್ಯಂತ ಫೇಮಸ್. ಈ ಧಾರವಾಹಿಯಲ್ಲಿ ಬರುವ ಪಾತ್ರಗಳನ್ನು ಕೂಡ ಜನ ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಬರುವ ಕೀರ್ತಿ ಎಂಬ ಪಾತ್ರವೂ ಕೂಡ ಜನರಿಗೆ ಇಷ್ಟವಾಗಿದೆ. ನಟನೆ ಹಾಗೂ ತಮ್ಮ ಸೌಂದರ್ಯದಿಂದ ಕೀರ್ತಿ ಅಲಿಯಾಸ್ ತನ್ವಿರಾವ್ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಧಾರವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿದರೂ ಕೂಡ ತನ್ವಿರಾವ್ ಅತ್ಯಂತ ಸೌಮ್ಯ ಸ್ವಭಾವದ ಯುವತಿ, ಅವರಲ್ಲಿರುವ ಪ್ರತಿಭೆಗಳಿಗೆ ಲೆಕ್ಕವಿಲ್ಲ ಜೊತೆಗೆ ಅವರ ಹಿನ್ನಲೆಯೂ ಕೂಡ ಅಷ್ಟೇ ವಿಭಿನ್ನವಾಗಿದೆ.

ತನ್ವಿರಾವ್ ಹುಟ್ಟಿ ಬೆಳೆದದ್ದೆಲ್ಲವೂ ಬೆಂಗಳೂರಿನಲ್ಲಿ. ಬಳಿಕ ಮಂಗಳೂರಿನಲ್ಲಿ ಪಿ.ಯೂ.ಸಿ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ಪದವಿ ಪಡೆದರು. ತಮ್ಮ 4ನೇ ವಯಸ್ಸಿಗೆ ಕಥಕ್ ಡ್ಯಾನ್ಸ್ ಕ್ಲಾಸ್ ಸೇರಿದ ತನ್ವಿ ಭರತನಾಟ್ಯ ಕಲಾವಿದೆ. ಹಲವು ವೇದಿಕೆಗಳಲ್ಲಿ ಅದ್ಭುತವಾಗಿ ಭರತನಾಟ್ಯ ಮಾಡುವ ಮೂಲಕ ತನ್ವಿರಾವ್ ಜನಮನ ಗೆದ್ದಿದ್ದಾರೆ. ಭರತನಾಟ್ಯದೊಂದಿಗೆ ನಟನೆಗೂ ಇಳಿದ ತನ್ವಿ ಲಕ್ಷ್ಮಿ ಬಾರಮ್ಮ ಸೇರಿದಂತೆ ಹಲವು ಧಾರವಾಹಿ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಧೆ ಶ್ಯಾಮ್, ಆಕೃತಿ ಸೇರಿದಂತೆ ತಮಿಳಿನ ಜಮಿಲ ಎಂಬ ಧಾರವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ.
ಬಾಲಿವುಡ್ ಮಾಧುರಿ ದೀಕ್ಷಿತ್ ಅವರೊಂದಿಗೆ ಗುಲಾಬ್ ಗ್ಯಾಂಗ್ ಹಾಗೂ ಶರ್ಮಿಳಾ ಠಾಕೂರ್ ಅವರೊಂದಿಗೆ ಗುಲ್ ಮೋಹರ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ಪ್ರತಿಭಾನ್ವಿತೆಯಾಗಿದ್ದ ತನ್ವಿರಾವ್ ಅವರಿಗೆ ಒಮ್ಮೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು. ಅಂದು ಅಬ್ದುಲ್ ಕಲಾಂ ನನ್ನ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ತನ್ವಿರಾವ್.
ಧಾರವಾಹಿಯಲ್ಲಿ ನಟಿಸುವ ಮುನ್ನ ತನ್ವಿ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದರು. ಲಕ್ಷ್ಮಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದ ತನ್ವಿ ಕಣ್ಣುಗಳ ಕಾರಣದಿಂದ ರಿಜೆಕ್ಟ್ ಆಗಿದ್ದರು ಆದರೆ ಮತ್ತೆ ಅದೇ ತಂಡದಿಂದ ಕೀರ್ತಿ ಪಾತ್ರದ ಆಫರ್ ಬಂದಿತ್ತಂತೆ. ಇತ್ತೀಚೆಗಷ್ಟೇ ತನ್ವಿರಾವ್ ಲಕ್ಷ್ಮಿ ಬಾರಮ್ಮ ತಂಡದಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ‘ಆದರೆ ಇದೆಲ್ಲ ಸುಳ್ಳು ಸುದ್ದಿ ನಾನು ಕೀರ್ತಿ ಪಾತ್ರದಲ್ಲೇ ಮುಂದುವರೆಯಲಿದ್ದೇನೆ’ ಎಂದು ತನ್ವಿರಾವ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದರು.