ಒಂದೇ ವಯಸ್ಸು, ಅಭಿರುಚಿ, ಅಂದ ಚಂದ ಇರುವ ವಧು-ವರರು ಮದುವೆಯಾಗುವುದನ್ನು ನೀವು ಕಂಡಿರಬಹುದು. ಹೆಚ್ಚೆಂದರೆ 5 ಅಥವಾ 10 ವರ್ಷಗಳ ಅಂತರ ಇರುವವರು ಮದುವೆಯಾಗಬಹದು. ಆದರೆ ತಾತನ ವಯಸ್ಸಿನ ವರನನ್ನು ಮೊಮ್ಮಗಳ ವಯಸ್ಸಿನ ಯುವತಿ ಮದುವೆಯಾಗುತ್ತಾಳೆ ಅಂದರೆ ನೀವು ನಂಬುತ್ತೀರಾ. ನಂಬಲು ಕಷ್ಟವಾದರೂ ಕೂಡ ಇದು ಸತ್ಯ. ಹೌದು ಇಂತಹದ್ದೊಂದು ಮದುವೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್ ನಲ್ಲಿದೆ.

https://www.instagram.com/p/ChEbcQijsoo/?utm_source=ig_web_copy_link
80 ರಿಂದ 90 ವರ್ಷದ ಹಣ್ಣು ಹಣ್ಣು ಮುದುಕನೊಬ್ಬ ಕುತ್ತಿಗೆಗೆ ವರಮಾಲಾವನ್ನು ಹಾಕಿಕೊಂಡು, ಪಂಚೆ ಅಂಗಿ ಧರಿಸಿ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತನಗಿಂತ ತುಂಬಾ ಚಿಕ್ಕವಳಾಗಿ ಕಾಣುವ ಸುಂದರ ವಧು ಜೊತೆ ಮದುವೆ ಆಗುತ್ತಿರುವುದಕ್ಕೆ ತಾತ ಸಂತಸಗೊಂಡಂತಿದೆ. ವಧು ನಾಚಿಕೆಯಿಂದ ಕಾಣುತ್ತಿದ್ದಾಳೆ. ಈ ವಿಡಿಯೋ ಇದೀಗ ಸಖತದ ವೈರಲ್ ಆಗುತ್ತಿದ್ದು, ನೆಟ್ಟಿಗರೆಲ್ಲ ಕಮೆಂಟ್ ಮಳೆ ಸುರಿಸುತ್ತಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಈ ವರೆಗೆ ಬರೋಬ್ಬರಿ 116k ವೀಕ್ಷಣೆ ಪಡೆದುಕೊಂಡಿದೆ. ಈ ವಿಚಿತ್ರ ವಿವಾಹವನ್ನು ಕಣ್ತುಂಬಿಕೊಂಡಿರುವ ನೆಟ್ಟಿಗರಲ್ಲಿ ಒಬ್ಬ, ‘ಭಗವಂತ ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ’ ಎಂದರೆ, ಮತ್ತೊಬ್ಬ, ‘ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಈ ಮದುವೆ ನೋಡಿ ಯಾರೋ ಹೇಳಿರಬೇಕು’ ಎಂದಿದ್ದಾನೆ. ಇನ್ನೂ ಕೆಲವರು ಈ ಮದುವೆಗೆ ಶುಭ ಹಾರೈಸಿದ್ದಾರೆ. ಒಟ್ಟಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.