ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದರಲ್ಲಿ ಹಿರಿಯ ನಟಿ ಕಮಲಾಶ್ರೀ ಅವರು ಸಹ ಒಬ್ಬರು. ಇವರ ಹೆಸರು ಹೇಳಿದರೆ ನಿಮಗೆ ಗೊತ್ತಾಗದೇ ಇರಬಹುದು. ಆದರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದವರು ಎಂದು ಹೇಳಿದರೆ, ತಕ್ಷಣ ನೆನಪಾಗುತ್ತಾರೆ. ಗಟ್ಟಿಮೇಳ ಧಾರಾವಾಹಿಯ ಪಾತ್ರ ಅಷ್ಟರ ಮಟ್ಟಿಗೆ ಇವರಿಗೆ ಯಶಸ್ಸು ತಂದು ಕೊಟ್ಟಿದೆ. ಬಹಳಷ್ಟು ಜನರು ಈ ಪಾತ್ರದ ಮೂಲಕ ಇವರನ್ನು ಗುರುತಿಸುತ್ತಿದ್ದಾರೆ. ಆದರೆ ಹಿರಿಯನಟಿ ಕಮಲಾಶ್ರೀ ಅವರು ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಹೌದು ಕಮಲಶ್ರೀ ಅವರಿಗೆ ಈಗ ಬ್ರೆಸ್ಟ್ ಕ್ಯಾನ್ಸರ್ ಆಗಿದ್ದು, ಅವರು ಮೊದಲಿಗೆ ಅಕ್ಕನ ಮಗಳ ಜೊತೆಗೆ ವಾಸ ಮಾಡುತ್ತಿದ್ದರು, ಆದರೆ ಅವರಿಗೆ ಬ್ರೆಸ್ಟ್ ಕ್ಯಾನ್ಸರ್ ಆಗಿರುವ ಕಾರಣ ಅವರಿಗೂ ತೊಂದರೆ ಆಗೋದು ಬೇಡ ಎಂದು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇವರಿಗೆ ಈಗ ಕ್ಯಾನ್ಸರ್ ಇದ್ದು, ವಯಸ್ಸು ಹೆಚ್ಚಾಗಿರುವ ಕಾರಣ ಕಮಲಾಶ್ರೀ ಅವರಿಗೆ ಈಗ ಸರ್ಜರಿ ಮಾಡಲು ಆಗುವುದಿಲ್ಲ, ಹಾಗೆಯೇ ಕೀಮೋ ಥೆರಪಿ ಮಾಡುವುದಕ್ಕೆ ಅವರ ದೇಹ ಆ ನೋವನ್ನು ತಡೆದುಕೊಳ್ಳುವುದಕ್ಕೆ ಕಷ್ಟ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರಂತೆ. ಈ ಕಾರಣಕ್ಕೆ ಅವರಿಗೆ ಮೆಡಿಸಿನ್ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ.

ವೈದ್ಯರು ಅವರಿಗೆ ತುಂಬಾ ದುಬಾರಿ ಮಾತ್ರೆ ಹಾಗೂ ಔಷಧಿಗಳನ್ನು ಕೊಡುತ್ತಿದ್ದು, ಅದನ್ನು ಭರಿಸಲು ಅವರಿಗೆ ಕಷ್ಟವಾಗುತ್ತಿದೆ. ಪ್ರಸ್ತುತ ಕೆಲವು ಕಲಾವಿದರು ಅವರಿಗೆ ಸಹಾಯ ಮಾಡುತ್ತಿದ್ದಾರಂತೆ. ಉಮಾಶ್ರೀ ಅವರು ಆರ್ಥಿಕವಾಗಿ ಸಹಾಯ ಮಾಡಿದ್ದಾರಂತೆ. ಇನ್ನು ಕೆಲವರು ಸಹ ಹಣದ ವಿಷಯದಲ್ಲಿ ಸಹಾಯ ಮಾಡಿದ್ದು, ಒಬ್ಬರು 25 ಕೆಜಿ ಅಕ್ಕಿಯನ್ನು ತಂದುಕೊಟ್ಟಿದ್ದಾರಂತೆ. ಅವರ ಅಕ್ಕನ ಮಗಳು ಮನೆಗೆ ಬೇಕಿರುವ ದಿನಸಿ ವಸ್ತುಗಳನ್ನು ತಂದುಕೊಡುತ್ತಿದ್ದಾರಂತೆ. ಒಂದು ಮಟ್ಟಿಗೆ ಈಗ ಅವರ ಜೀವನ ಹೇಗೋ ನಡೆಯುತ್ತಿದೆ. ಆದರೆ ವೈದ್ಯರು ಹೇಳುವ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ನಿಜಕ್ಕೂ ಆರ್ಥಿಕವಾಗಿ ಸಹಾಯದ ಅವಶ್ಯಕತೆ ಇದೆ.
ತಮ್ಮ ಕಷ್ಟದ ಬಗ್ಗೆ ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಕಮಲಾಶ್ರೀ ಅವರು ಮಾತನಾಡಿದ್ದಾರೆ.. ತಮ್ಮ ಪರಿಸ್ಥಿತಿಯನ್ನು ವಿವರಿಸಿ ಕಣ್ಣೀರು ಹಾಕಿದ್ದಾರೆ. ಅವರು ಒಂಟಿಯಾಗಿ ಇರುವ ಕಾರಣ ಇದೆಲ್ಲವನ್ನು ಎದುರಿಸುವುದು ತುಂಬಾ ಕಷ್ಟ. ಹಾಗಾಗಿ ಯಾರಿಗೆ ಆದರೂ ಕಮಲಾಶ್ರೀ ಅವರಿಗೆ ಹಣ ಸಹಾಯ ಮಾಡಬೇಕು ಎಂದು ಅನ್ನಿಸಿದರೆ, ಇಲ್ಲಿ ನೀಡಿರುವ ಅಕೌಂಟ್ ಡೀಟೇಲ್ಸ್ ಗೆ ಹೋಗಿ, ಅವರಿಗೆ ನೀವು ಹಣ ಸಹಾಯ ಮಾಡಬಹುದು. ಇಲ್ಲಿ ಅವರ ಡೀಟೇಲ್ಸ್ ಇದೆ. Kamalashree, Canara Bank Account Number – 0411101052386. IFSC Code- CNRB0000411
ನಾವು ಹೊರಗಡೆ ಇಂದ ನೋಡಿ ಕಲಾವಿದರ ಜೀವನ ಹಾಗಿರುತ್ತದೆ, ಹೀಗಿರುತ್ತದೆ ಎಂದು ಭಾವಿಸುತ್ತೇವೆ, ಅವರಿಗೇನು ತೊಂದರೆ ಕೈತುಂಬಾ ಹಣ ಬರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಎಲ್ಲಾ ಕಲಾವಿದರ ಬದುಕು ಈ ರೀತಿ ಐಷಾರಾಮಿ ಜೀವನ ಆಗಿರುವುದಿಲ್ಲ. ಕೆಲವರಿಗೆ ಬಹಳ ಕಷ್ಟ ಇರುತ್ತದೆ. ಅಂಥವರು ಹೀಗೆ ಕಷ್ಟಪಡುತ್ತಾರೆ. ಕಮಲಾಶ್ರೀ ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಅವರು ಧಾರಾವಾಹಿಗಳಲ್ಲಿ ನಟಿಸಲು ಸಹ ಆಗುವುದಿಲ್ಲ, ಈಗ ಅವರಿಗೆ ಎಲ್ಲರ ಸಹಾಯದ ಅವಶ್ಯಕತೆ ಇದೆ. ಹಾಗಾಗಿ ನಾವೆಲ್ಲರೂ ಅವರಿಗೆ ನಮ್ಮಿಂದ ಆದಷ್ಟು ಸಹಾಯ ಮಾಡೋಣ..