ಸಮಂತಾ ರುತ್ ಪ್ರಭು ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ. ಅವರ ಬಗ್ಗೆ ನಮ್ಮೆಲ್ಲರಿಗೂ ಚೆನ್ನಾಗಿಯೇ ಗೊತ್ತಿದೆ. ಸಾಧಾರಣ ಕುಟುಂಬದಿಂದ ಬೆಳೆದು ಬಂದ ಹುಡುಗಿ ಸಮಂತಾ. ಓದಿನಲ್ಲಿ ತುಂಬಾ ಆಸಕ್ತಿ ಇದ್ದ ಸಮಂತಾ ಅವರು, ವಿದೇಶಕ್ಕೆ ಹೋಗಿ ಚೆನ್ನಾಗಿ ಓದಬೇಕು ಎಂದು ಆಸೆ ಇಟ್ಟುಕೊಂಡಿದ್ದರು, ಆದರೆ ಮನೆಯಲ್ಲಿ ಹಣದ ಸಮಸ್ಯೆ ಇದ್ದ ಕಾರಣ ಆ ಆಸೆಯನ್ನು ಕೈಬಿಟ್ಟು, ಮಾಡೆಲಿಂಗ್ ಕಡೆಗೆ ಗಮನ ಹರಿಸುವುದಕ್ಕೆ ಶುರು ಮಾಡಿದರು. ಸಿಕ್ಕ ಒಂದೊಂದೇ ಅವಕಾಶಗಳ ಸದುಪಯೋಗ ಪಡಿಸಿಕೊಂಡ ಸಮಂತಾ ಅವರು, ಇಂದು ಸೆಲ್ಫ್ ಮೇಡ್ ಸ್ಟಾರ್ ಆಗಿ ಬೆಳೆದು, ದೊಡ್ಡ ಹೆಸರು ಮಾಡಿದ್ದಾರೆ..

ಭಾರತ ಚಿತ್ರರಂಗದ ಸಿನಿಪ್ರಿಯರು ಸಮಂತಾ ಅವರನ್ನು ಕಂಡರೆ ತುಂಬಾ ಇಷ್ಟ. ಇತ್ತೀಚೆಗೆ ಇವರು ಅಭಿನಯಿಸಿರುವ ವೆಬ್ ಸೀರೀಸ್ ಸಿಟಾಡೆಲ್ ಹನಿ ಬನಿ ಸೂಪರ್ ಸಕ್ಸಸ್ ಆಗಿದ್ದು, ಎಲ್ಲರಿಂದ ಉತ್ತಮವಾದ ಮೆಚ್ಚುಗೆ ಪಡೆದುಕೊಂಡಿದೆ. ಸಮಂತಾ ಅವರ ಅಭಿನಯ, ಆಕ್ಷನ್ ಎಲ್ಲವನ್ನು ಸಹ ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಹೀಗಿರುವಾಗ ಸಮಂತಾ ಅವರು ಇದೀಗ ಅವರ ಮಾಜಿ ಪತಿ ನಾಗಚೈತನ್ಯ ಅವರು ಎರಡನೇ ಮದುವೆ ಆಗಿರುವ ಶೋಭಿತಾ ಅವರಿಗಿಂತ ಒಂದು ಹೆಜ್ಜೆ ಕೆಳಗೆ ಹೋಗಿಬಿಟ್ಟಿದ್ದಾರೆ. ಇದನ್ನು ನೋಡಿ ಸಮಂತಾ ಅವರ ಫ್ಯಾನ್ಸ್ ಗೆ ಬೇಸರವಾಗಿದೆ. ಜೊತೆಗೆ ಇದೆಲ್ಲಾ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಿನ್ನೆಯಷ್ಟೇ ಭಾರತ ಟಾಪ್10 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಆಗಿದ್ದು, ಇದರಲ್ಲಿ ಶೋಭಿತಾ ಧೂಳಿಪಾಲ ಅವರು 5ನೇ ಸ್ಥಾನದಲ್ಲಿದ್ದು, ಸಮಂತಾ ಅವರು 8ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯ ಪೋಸ್ಟ್ ಅನ್ನು ಖುದ್ದು ಸಮಂತಾ ಅವರು ಕೂಡ ಶೇರ್ ಮಾಡಿದ್ದರು. ಈ ವಿಷಯದ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸಮಂತಾ ಅವರಿಗಿಂತ ಶೋಭಿತಾ ಅವರಿಗೆ ಹೆಚ್ಚು ಜನಪ್ರಿಯತೆ ಇದೆಯಾ? ಸಮಂತಾ ಅವರಷ್ಟು ಹಿಟ್ ಸಿನಿಮಾಗಳನ್ನು ಶೋಭಿತಾ ಅವರು ಕೊಟ್ಟಿದ್ದಾರಾ? ಇದು ಹೇಗೆ ಸಾಧ್ಯ ಎನ್ನುತ್ತಿದ್ದಾರೆ ಸಮಂತಾ ಅವರ ಫ್ಯಾನ್ಸ್. ಅಷ್ಟೇ ಅಲ್ಲದೇ ಶೋಭಿತಾ ಪಾಪ್ಯುಲರ್ ಆಗಿರೋದೆ ಸಮಂತಾ ಅವರಿಂದ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.

ಸಮಂತಾ ಅವರು ನಾಗಚೈತನ್ಯ ಅವರನ್ನು ಐದಾರು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಮದುವೆಯಾದರು, 4ನೇ ವರ್ಷದ ಮದುವೆ ವಾರ್ಷಿಕೋತ್ಸವದ ವೇಳೆಗೆ ಇಬ್ಬರು ವಿಚ್ಛೇದನವನ್ನು ಸಹ ಘೋಷಿಸಿದರು. ಇವರಿಬ್ಬರು ವಿಚ್ಛೇದನ ಪಡೆದು 3 ವರ್ಷವಾದ ನಂತರ ಶೋಭಿತಾ ಧೂಳಿಪಾಲ ಅವರೊಡನೆ ನಾಗಚೈತನ್ಯ ಮದುವೆ ಆಗಿದ್ದಾರೆ. ಮೊನ್ನೆಯಷ್ಟೇ ಇವರಿಬ್ಬರ ಮದುವೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಸಮಂತಾ ಅವರೊಡನೆ ಇದ್ದಾಗಲೇ ನಾಗಚೈತನ್ಯ ಅವರು ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು, ಇಬ್ಬರ ನಡುವೆ ರಿಲೇಶನ್ಷಿಪ್ ಇತ್ತು ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಆದರೆ ಇದರಲ್ಲಿ ಎಷ್ಟು ನಿಜ ಅಥವಾ ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ.
ಆದರೆ ಈ ಮೂವರ ಪರ್ಸನಲ್ ಲೈಫ್ ವಿಚಾರ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುವುದಂತು ನಿಜ. ಒಟ್ಟಿನಲ್ಲಿ ಈ ಟಾಪ್ 10 ಸೆಲೆಬ್ರಿಟಿ ಲಿಸ್ಟ್ ಹೊರಬಂದ ನಂತರ ಹೆಚ್ಚಾಗಿ ಸಮಂತಾ ಅವರ ಬಗ್ಗೆ ಚರ್ಚೆ ಆಗುತ್ತಿದೆ. ಸಮಂತಾ ತುಂಬಾ ಒಳ್ಳೆಯ ಹುಡುಗಿ, ಬಹಳ ಕಷ್ಟಪಟ್ಟು ಸ್ಟಾರ್ ಆಗಿದ್ದಾರೆ, ಅಂಥ ಹುಡುಗಿಗೆ ನಾಗಚೈತನ್ಯ ಈ ರೀತಿ ಮೋಸ ಮಾಡಬಾರದಾಗಿತ್ತು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈಗ ಸಮಂತಾ ಅವರು ಮತ್ತು ನಾಗಚೈತನ್ಯ ಅವರು ಇಬ್ಬರು ಕೂಡ ಮೂವ್ ಆನ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.



