ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಕೊನೆಯ ಬಿಗ್ ಬಾಸ್ ಸೀಸನ್ ಇದು ಎಂದು ಬಿಗ್ ಬಾಸ್ ಕನ್ನಡ ಸೀಸನ್ 11 ಅವರಿಗೆ ಕೊನೆಯ ಸೀಸನ್ ಎಂದು ಟ್ವೀಟ್ ಮಾಡುವ ಮೂಲಕ ಬಿಬಿಕೆ 11 ಭರ್ಜರಿ ಟಿಆರ್ಪಿ ಬಂದಾಗ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದರಿಂದ ಬೇಸರ ಆಗಿದ್ದಂತೂ ನಿಜ. ಆದರೆ ಸುದೀಪ್ ಅವರು ಮತ್ತೆ ಮನಸ್ಸು ಬದಲಾಯಿಸಿ, ಬಿಗ್ ಬಾಸ್ ಶೋಗೆ ವಾಪಸ್ ಬರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಸುದೀಪ್ ಅವರ ನಿರ್ಧಾರ ಬದಲಾಗಿಲಿಲ್ಲ. ಬಿಬಿಕೆ 11 ಫಿನಾಲೆಯ ಹಿಂದಿನ ದಿವಸ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅದು ತಮ್ಮ ಕೊನೆಯ ಸೀಸನ್ ಎಂದು ಮತ್ತೆ ಸ್ಪಷ್ಟನೆ ಕೊಟ್ಟರು ಸುದೀಪ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು.

ಕನ್ನಡದಲ್ಲಿ ಬಿಗ್ ಬಾಸ್ ಶೋ ಎಂದ ತಕ್ಷಣ ನೆನಪಿಗೆ ಬರುವುದೇ ಕಿಚ್ಚ ಸುದೀಪ್ ಅವರು. 11 ವರ್ಷಗಳು, 11 ಸೀಸನ್ ಗಳಲ್ಲಿ ಸುದೀಪ್ ಅವರು ಎಷ್ಟು ಅದ್ಭುತವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಿದ್ದಾರೆ ಎಂದು ಗೊತ್ತೇ ಇದೆ. ಸುದೀಪ್ ಅವರ ಹಾಗೆ ಈ ಕಾರ್ಯಕ್ರಮ ನಡೆಸಿಕೊಡಲು ಬೇರೆ ಕಲಾವಿದರಿಂದ ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ. ಆದರೆ ಸುದೀಪ್ ಅವರು ಈ ಮೊದಲೇ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದರು. ಈ ಶೋನ ಬೇರೆ ಯಾರು ನಡೆಸಿಕೊಡೋಕೆ ಆಗೋದಿಲ್ಲ ಅಂತೆಲ್ಲ ಅಂದುಕೊಂಡಿಲ್ಲ ನಾನು, ಬೇರೆಯವರು ನನಗಿಂತಲೂ ಚೆನ್ನಾಗಿ ನಡೆಸಿಕೊಡಬಹುದು ಎಂದು ಹೇಳಿದ್ದರು. ಹಾಗೆಯೇ ಎಲ್ಲರನ್ನು ತಿದ್ದಿಕೊಂಡು ಇನ್ನೆಷ್ಟು ವರ್ಷ ಇರಲಿ ಎಂದು ಹೇಳಿದ್ದರು. ಆದರೂ ಎಲ್ಲೋ ಒಂದು ಕಡೆ ಸುದೀಪ್ ಅವರು ತಮ್ಮ ನಿರ್ಧಾರ ಬದಲಾಯಿಸುತ್ತಾರೆ.

ಮುಂದಿನ ಸೀಸನ್ ನಿರೂಪಣೆ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಹಾಗೆಯೇ ಚಾನೆಲ್ ನವರು ಸಹ ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂದಿದ್ದರು.
ಸುದೀಪ್ ಅವರ ಮನವೊಲಿಸಿ ಮುಂದಿನ ಸೀಸನ್ ಗೆ ಅವರನ್ನು ಖಂಡಿತವಾಗಿಯೂ ಕತೆಯರುತ್ತೇವೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ತಿಳಿಸಿದ್ದರು. ಅದೇ ರೀತಿ ಸತತವಾಗಿ ಸುದೀಪ್ ಅವರು ಮತ್ತೆ ಬಿಗ್ ಬಾಸ್ ಶೋ ಗೆ ಕರೆತರುವ ಪ್ರಯತ್ನ ಮಾಡಿ, ಕೊನೆಗೂ ಸುದೀಪ್ ಅವರನ್ನು ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಣೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಆದರೆ ಕೆಲವು ಕಂಡೀಷನ್ ಗಳನ್ನು ಸಹ ಹಾಕಿದ್ದಾರೆ. ಅದೆಲ್ಲವೂ ನಡೆದರೆ ಮಾತ್ರ ಬಿಗ್ ಬಾಸ್ ಶೋ ನಿರೂಪಣೆ ಮಾಡುವುದಾಗಿ ಹೇಳಿದ್ದಾರೆ ಎನ್ನುವ ವಿಷಯ ವೈರಲ್ ಆಗಿತ್ತು.
ಕಿಚ್ಚ ಸುದೀಪ್ ಅವರಿಗೆ ಕಳೆದ ಸೀಸನ್ ಬೇಸರ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಅದೇ ಕಾರಣಕ್ಕೆ ಸುದೀಪ್ ಅವರು ಈ ಶೋ ಇಂದ ಹೊರಗಡೆ ಬರುವ ನಿರ್ಧಾರ ಮಾಡಿರಬಹುದು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಆದರೆ ಕಿಚ್ಚ ಸುದೀಪ್ ಅವರು ತಮ್ಮ ಕಡೆಯಿಂದ ಬೇರೆ ಉತ್ತರವನ್ನು ಕೊಟ್ಟಿದ್ದರು. ಇನ್ನು ಸುದೀಪ್ ಕಂಡೀಷನ್ ಹಾಕಿದ್ದಾರೆ ಎನ್ನಲಾದ ವಿಚಾರಗಳು ಏನು ಎಂದರೆ.. ಹನ್ನೆರಡನೆಯ ಸೀಸನ್ ನಲ್ಲಿ ಬಿಗ್ ಬಾಸ್ ಮನೆ ತುಂಬಾ ಕಲರ್ ಫುಲ್ ಆಗಿರಬೇಕು, ಇಷ್ಟು ಸೀಸನ್ ಗಿಂತ ಮನೆ ಇನ್ನು ಕಲರ್ ಫುಲ್ ಆಗಿರಬೇಕು. ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು, ಬಹುಶಃ ಎಲ್ಲಾ ಸ್ಪರ್ಧಿಗಳು ಕನ್ನಡದವರೇ ಆಗಿರಬೇಕು ಎನ್ನುವುದು ಈ ಕಂಡಿಷನ್ ಅರ್ಥವಿರಬಹುದು. ಕನ್ನಡ ಬಿಗ್ ಬಾಸ್ ನಲ್ಲಿ ಕನ್ನಡವೇ ವೇದಘೋಷ ಆಗಬೇಕು.

ಒಳ್ಳೇ ಲೀಗಲ್ ಟೀಮ್ ಇರಬೇಕು. ವಿವಾದಿತ ಸ್ಪರ್ಧಿಗಳನ್ನ ಸೆಲೆಕ್ಟ್ ಮಾಡಬಾರದು. ಹೆಚ್ಚಾಗಿ ವಿವಾದ ಸೃಷ್ಟಿಸಿಕೊಂಡಿರುವ ಸ್ಪರ್ಧಿಗಳನ್ನೇ ಬಿಗ್ ಬಾಸ್ ಗೆ ಕರೆಸಲಾಗುತ್ತದೆ. ಈ ಸೀಸನ್ ನಲ್ಲಿ ಆ ರೀತಿ ಆಗಬಾರದು ಎಂದು ಐದು ಕಂಡೀಷನ್ ಗಳನ್ನು ಸುದೀಪ್ ಅವರು ಹಾಕಿದ್ದಾರೆ ಎನ್ನಲಾಯಿತು. ಈ ವಿಷಯದ ಬಗ್ಗೆ ಚಾನೆಲ್ ಇಂದ ಮತ್ತು ಸುದೀಪ್ ಅವರಿಂದ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಸುದೀಪ್ ಅವರು ಒಂದು ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದೀಪ್ ಅವರಿಗೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಸುದೀಪ್ ಅವರು ಉತ್ತರ ಕೊಟ್ಟಿದ್ದು, “ಈ ವಿಷಯದ ಬಗ್ಗೆ ಬಹಳಷ್ಟು ಊಹಾಪೋಹಗಳು, ಪ್ರಶ್ನೆಗಳು ಇದೆ ಅಂತ ನನಗೂ ಗೊತ್ತಿದೆ. ಈ ವಿಷಯದಲ್ಲಿ ಕೆಲವು ಸತ್ಯ, ಕೆಲವು ಅಸತ್ಯ ಕೂಡ ಇದೆ..
ಅದೆಲ್ಲದರ ಬಗ್ಗೆ ಈಗ ಮಾತಾಡೋದಿಲ್ಲ, ಸಮಯ ಬಂದಾಗ ಸರಿಯಾದ ವೇದಿಕೆಯಲ್ಲಿ ಮಾತಾಡ್ತೀನಿ. ನೀವು ಸುದ್ದಿ ಮಾಡುವಾಗ ಕೇಳಲಿಲ್ಲ, ಈಗ ಕೇಳಿ. ಏನು ಪ್ರಯೋಜನ, ಈ ವಿಷಯದ ಬಗ್ಗೆ ನಂತರ ಮಾತಾಡ್ತೀನಿ..” ಎಂದು ಹೇಳಿದ್ದಾರೆ ಕಿಚ್ಚ ಸುದೀಪ್. ಬಿಗ್ ಬಾಸ್ ಬಗ್ಗೆ ಹೊಸ ಅಪ್ಡೇಟ್ ಗಾಗಿ ಇನ್ನು ಕೆಲ ಸಮಯ ಕಾಯಬೇಕಿದೆ. ಇನ್ನು ಬಿಗ್ ಬಾಸ್ ಫ್ಯಾನ್ಸ್ ಅಭಿಪ್ರಾಯ ಬೇರೆ ರೀತಿ ಇದೆ. ಹೆಚ್ಚಿನ ಜನರು ಬಿಗ್ ಬಾಸ್ ಶೋ ನೋಡೋದೇ ಸುದೀಪ್ ಅವರಿಗೋಸ್ಕರ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರನ್ನ ಬಿಟ್ಟು ಬೇರೆ ಯಾರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದರು, ಅದು ಚೆನ್ನಾಗಿ ಬರುವುದಿಲ್ಲ, ಜನರು ನೋಡುವುದು ಇಲ್ಲ. ಇದು ಚಾನೆಲ್ ನವರಿಗೂ ಗೊತ್ತಿರುವ ವಿಷಯ. ಹಾಗಾಗಿ ಸುದೀಪ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಿದೆ.



