ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದವರು ನಟಿ ರಶ್ಮಿಕಾ ಮಂದಣ್ಣ. ಇಂದು ಇವರು ಟಾಲಿವುಡ್, ಬಾಲಿವುಡ್ ಎಂದು ಪ್ಯಾನ್ ಇಂಡಿಯಾ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ನಾಳೆ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ2 ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಅವರು ನಾಯಕಿಯಾಗಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಇಲ್ಲ. ಹಾಗಿದ್ರೆ ರಶ್ಮಿಕಾ ಅವರು ಇಷ್ಟು ವರ್ಷಗಳ ಅವಧಿಯಲ್ಲಿ ಎಷ್ಟು ಆಸ್ತಿ ಗಳಿಸಿದ್ದಾರೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್.

ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಪಾತ್ರ ಅವರಿಗೆ ಕರ್ನಾಟಕ ಕ್ರಶ್ ಎಂದು ಹೆಸರನ್ನು ಕೂಡ ತಂದುಕೊಟ್ಟಿತು. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ತೆಲುಗಿಗೆ. ಚಲೋ ಸಿನಿಮಾ ಮೂಲಕ ತೆಲುಗಿನಲ್ಲಿ ಪ್ರಯಾಣ ಶುರು ಮಾಡಿದ ರಶ್ಮಿಕಾ ಅವರಿಗೆ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಸಿಕ್ಕಿತ್ತು. ಚಲೋ ನಂತರ ಗೀತಾ ಗೋವಿಂದಮ್ ನಲ್ಲಿ ಅಭಿನಯಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ನಟ ದರ್ಶನ್ ಇವರೊಡನೆ ನಟಿಸಿದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು. ಕಳೆದ ವರ್ಷ ತೆರೆಕಂಡ ಅನಿಮಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಶ್ಮಿಕಾ ಅವರು ಹೆಸರು ಮಾಡಿದ್ದಾರೆ ಜೊತೆಗೆ ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಇವರ ಪುಷ್ಪ2 ಮೇಲೆ ಭಾರಿ ನಿರೀಕ್ಷೆ ಇದೆ, ರಶ್ಮಿಕಾ ಅವರನ್ನು ಶ್ರೀವಲ್ಲಿ ಯಾಗಿ ಮತ್ತೆ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರು ಪರ್ಸನಲ್ ವಿಚಾರದಿಂದ ಹೆಚ್ಚು ಸುದ್ದಿ ಸಹ ಆಗುತ್ತಾರೆ. ವಿಜಯ್ ದೇವರಕೊಂಡ ಅವರೊಡನೆ ರಿಲೇಶನ್ಷಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ.

ಇತ್ತೀಚೆಗೆ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ರಶ್ಮಿಕಾ ಅವರು ತಾವು ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಒಪ್ಪಿಕೊಂಡರು, ಹಾಗೆಯೇ ವಿಜಯ್ ದೇವರಕೊಂಡ ಅವರು ಸಹ ತಾವು ರಿಲೇಶನ್ಷಿಪ್ ನಲ್ಲಿರುವ ವಿಷಯವನ್ನು ಒಪ್ಪಿದರು, ಅಷ್ಟೇ ಅಲ್ಲದೇ ರೀಸೆಂಟ್ ಆಗಿ ವಿಜಯ್ ರಶ್ಮಿಕಾ ಲಂಚ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಹ ವೈರಲ್ ಆಗಿತ್ತು. ಈ ಮೂಲಕ ಇವರು ವಿಜಯ್ ದೇವಡಕೊಂಡ ಅವರೊಡನೆ ಪ್ರೀತಿಯಲ್ಲಿ ಇರುವುದು ಕನ್ಫರ್ಮ್ ಆಗಿದ್ದು, ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಹಲವು ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ.
ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 8 ವರ್ಷ ಆಗಿದೆ, ಇಷ್ಟು ಸಮಯದಲ್ಲಿ ಇವರು ಒಟ್ಟು 15 ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ರಶ್ಮಿಕಾ. ಹಾಗೆಯೇ ಕೂರ್ಗ್ ನಲ್ಲಿ ಇವರಿಗೆ ಒಂದು ಸ್ವಂತ ಮನೆ ಇದೆ, ಹೈದರಾಬಾದ್ ನಲ್ಲಿ ಕೂಡ ಒಂದು ಸ್ವಂತ ಮನೆ ಇದೆ, ಗೋವಾದಲ್ಲಿ ಕೂಡ ಸ್ವಂತ ಮನೆ ಹೊಂದಿದ್ದಾರೆ ಎಂದು ಕೂಡ ಹೇಳಲಾಗುತ್ತದೆ. ಇಷ್ಟೆಲ್ಲಾ ಆಸ್ತಿಗಳನ್ನು ಹೊಂದಿರುವ ರಶ್ಮಿಕಾ ಅವರು ಗಳಿಸಿರುವ ಒಟ್ಟು ಆಸ್ತಿ 45 ಕೋಟಿ ಆಗಿದೆ. ಇಷ್ಟು ಆಸ್ತಿ ಗಳಿಸಿರುವ ರಶ್ಮಿಕಾ ಅವರು ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ನಟಿಸಲಿದ್ದಾರೆ.



