ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮಿ ಬಾರಮ್ಮ ಧಾರವಾಹಿ ಈಗ ಇನ್ನಷ್ಟು ಕುತೂಹಲಕಾರಿ ಹಂತವನ್ನು ತಲುಪಿದೆ. ಒಂದಷ್ಟು ದಿವಸಗಳ ಕಾಲ ಈ ಶೋ ನಲ್ಲಿ ಲಕ್ಷ್ಮೀ ಇರಲಿಲ್ಲ. ದೀಪಾವಳಿ ಹಬ್ಬದ ವೇಳೆ ನಡೆದ ರಾವಣ ದಹನದಲ್ಲಿ ಲಕ್ಷ್ಮೀ ಕೂಡ ಸುಟ್ಟು ಹೋಗಿದ್ದಾಳೆ ಎನ್ನುವ ಹಾಗೆ ತೋರಿಸಲಾಗಿತ್ತು. ಆದರೆ ಲಕ್ಷ್ಮೀಗೆ ಏನು ಆಗಿಲ್ಲ, ಅವಳು ವಾಪಸ್ ಬರುತ್ತಾಳೆ ಎಂದು ವೀಕ್ಷಕರಿಗೆ ಮತ್ತು ವೈಷ್ಣವ್ ಕುಟುಂಬದಲ್ಲಿ ಸುಪ್ರೀತಾಗೆ ನಂಬಿಕೆ ಇತ್ತು. ಹಾಗೆಯೇ ಇದೆಲ್ಲದರ ಹಿಂದೆ ಇರುವುದು ಕಾವೇರಿ ಎನ್ನುವ ಅನುಮಾನ ಕೂಡ ಇತ್ತು. ಕೀರ್ತಿ, ಲಕ್ಷ್ಮೀ, ವೈಷ್ಣವ್ ಮೂವರ ಜೀವನವನ್ನು ಸಹ ಹಾಳು ಮಾಡಿದ್ದು ಸಹ ಕಾವೇರಿ ಎಂದು ಸುಪ್ರೀತಾ ಗೆ ಗೊತ್ತಾಗಿ, ಕಾವೇರಿಗೆ ತನ್ನ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಪ್ಲಾನ್ ಮಾಡಿ, ಅರೆಸ್ಟ್ ಮಾಡಿ, ಈಗ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.
ಕಾವೇರಿ ಅರೆಸ್ಟ್ ಆಗುವ ಹಾಗೆ ಮಾಡಲು ಕೀರ್ತಿಯನ್ನು ಕರೆಸಲಾಯಿತು, ಆಕೆ ಬಂದು ಕೀರ್ತಿ ಥರವೇ ಮಾತನಾಡಿದರು ಸಹ ಅದು ಯಾಕೋ ಕೀರ್ತಿ ಮೊದಲು ಇದ್ದ ಹಾಗೆ ಕಾಣಲಿಲ್ಲ, ಬಹುಶಃ ಬೆಟ್ಟದಿಂದ ಬಿದ್ದು, ಸಾವನ್ನೇ ಗೆದ್ದು ಬಂದ ಕೀರ್ತಿಗೆ ನೆನಪಿನ ಶಕ್ತಿ ಕಳೆದು ಹೋಗಿರಬಹುದು ಎಂದು ಅನ್ನಿಸುತ್ತಿದೆ. ಆದರೆ ಅವಳೇ ಬಂದು, ಎಲ್ಲಾ ಸಾಕ್ಷಿಗಳನ್ನು ತೋರಿಸಿ, ಕಾವೇರಿ ಅರೆಸ್ಟ್ ಆಗುವ ಹಾಗೆ ಮಾಡಿದಳು. ಒಂದೊಂದು ಸಾಕ್ಷಿಯನ್ನು ಕಣ್ಣೆದುರೇ ತೋರಿಸಿದರು ಸಹ, ವೈಷ್ಣವ್ ಮತ್ತು ಅವನ ತಂದೆ ಅದು ಯಾವುದನ್ನು ನಂಬುವುದಕ್ಕೆ ಸಹ ತಯಾರಿರಲಿಲ್ಲ. ಕೋರ್ಟ್ ನಲ್ಲಿ ಈಗ ಕೇಸ್ ನಡೆಯುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!1
ಕಾವೇರಿ ಪರವಾಗಿ ಲಾಯರ್ ಸೌಧಾಮಿನಿ ವಾದ ಮಾಡುತ್ತಿದ್ದರೆ, ಕೀರ್ತಿ ಪರವಾಗಿ ಲಾಯರ್ ಪಾರ್ಥಸಾರಥಿ ವಾದ ಮಾಡುತ್ತಿದ್ದಾರೆ. ಲಾಯರ್ ಪಾರ್ಥಸಾರಥಿ ಕಾವೇರಿ ಮಾಡಿರೋ ಒಂದೊಂದು ಮೋಸದ ಕೆಲಸವನ್ನು ಹೊರಗೆಳೆಯುತ್ತಿದ್ದು, ಜಾತಕದ ವಿಚಾರ ಸಂಪೂರ್ಣವಾಗಿ ಹೊರಬಂದ ನಂತರ, ವೈಷ್ಣವ್ ಕೂಡ ಕಾವೇರಿ ಮೋಸ ಮಾಡಿರುವುದನ್ನು ನಂಬಿದ್ದಾನೆ, ನೀನು ನಂಬಿಕೆ ದ್ರೋಹಿ, ಯಾವ ತಾಯಿ ಕೂಡ ನಿನ್ನ ಹಾಗೆ ಇರೋದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಹಾಗೆಯೇ ಕೀರ್ತಿಯ ಮಾತನ್ನು ಸಹ ನಂಬಿದ್ದಾನೆ ವೈಶ್, ಕೀರ್ತಿ ತನಗೆ ಮೋಸ ಮಾಡುವುದಿಲ್ಲ ಎಂದು ಸಂಪೂರ್ಣವಾಗಿ ನಂಬಿದ್ದಾನೆ ವೈಶ್. ಇದಿಷ್ಟು ನಿನ್ನೆಯ ಸಂಚಿಕೆಯ ವರೆಗು ನಡೆದಿದೆ.
ಕೆಲ ದಿನಗಳಿಂದ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿರುವ ನಟಿ ಭೂಮಿಕಾ ರಮೇಶ್ ಅವರು ಬಹುಶಃ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇಂದ ಹೊರಬಂದಿರಬಹುದು ಎಂದುಕೊಂಡಿದ್ದರು. ಇವರು ಜೀತೆಲುಗು ವಾಹಿನಿಯಲ್ಲಿ ಇನ್ನೊಂದು ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದು, ಈ ಕಾರಣಕ್ಕೆ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿ ಇಂದ ಹೊರಬಂದಿರಬಹುದು, ಹೊಸ ನಾಯಕಿ ಬರಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಭೂಮಿಕಾ ರಮೇಶ್ ಅವರು ಧಾರಾವಾಹಿ ಇಂದ ಹೊರಬಂದಿಲ್ಲ, ಇದೀಗ ಅವರು ಲಕ್ಷ್ಮೀ ಬಾರಮ್ಮ ಧಾರಾವಹಿಗೆ ವಾಪಸ್ ಬಂದಿದ್ದು, ಕಿರುತೆರೆ ವೀಕ್ಷಕರು ಬಹಳ ಸಂತೋಷಪಟ್ಟಿದ್ದಾರೆ.

ವೈಶ್ ಅಂತೂ ಲಕ್ಷ್ಮಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಲಕ್ಷ್ಮೀ ಬರೋದು ಯಾವಾಗ ಎಂದು ವೀಕ್ಷಕರು ಸಹ ಕಾಯುತ್ತಿದ್ದರು. ಇಂದು ಕಲರ್ಸ್ ಕನ್ನಡ ವಾಹಿನಿ ಶೇರ್ ಮಾಡಿರುವ ಪ್ರೊಮೋದಲ್ಲಿ ಲಕ್ಷ್ಮೀ ಕಾಣಿಸಿದ್ದು, ವೀಕ್ಷಕರು ಲಕ್ಷ್ಮಿಯನ್ನು ನೋಡೋದಕ್ಕೆ ಕಾಯುತ್ತಿದ್ದಾರೆ. ಆದರೆ ಪ್ರೊಮೋದಲ್ಲಿ ಲಕ್ಷ್ಮೀ ಪೂರ್ತಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಕೂಲಿಂಗ್ ಗ್ಲಾಸ್ ಹಾಕೊಂಡು, ಇಷ್ಟು ದಿವಸ ಹಾಕಿಲ್ಲದ ಹಾಗೆ ಗ್ರ್ಯಾಂಡ್ ಸೀರೆ ಹಾಕಿಕೊಂಡು ಮೊದಲಿಗಿಂತ ಸ್ಟ್ರಾಂಗ್ ಆಗಿ ಕಾಣುತ್ತಿದ್ದು, ವೀಕ್ಷಕರು ಲಕ್ಷ್ಮಿಯನ್ನು ನೋಡಿ ಶಾಕ್ ಆಗಿದ್ದಾರೆ. ಲಕ್ಷ್ಮೀ ಬಂದಾಯ್ತು ಇನ್ನು ಕಾವೇರಿಗೆ ಉಳಿಗಾಲ ಇಲ್ಲ ಎಂದು ಹೇಳುತ್ತಿದ್ದಾರೆ.