ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರಾವಾಹಿ ದಿನದಿಂದ ದಿನಕ್ಕೆ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಇಷ್ಟು ದಿವಸ ಕೀರ್ತಿ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಧಾರಾವಾಹಿಗೆ ಕೀರ್ತಿ ವಾಪಸ್ ಬಂದಿದ್ದೇನೋ ಆಗಿದೆ ಆದರೆ ಈಗ ಬಂದಿರೋದು ಕೀರ್ತಿನೆ ಅಲ್ಲ. ಇದೊಂದು ದೊಡ್ಡ ಟ್ವಿಸ್ಟ್ ಆಗಿದ್ದು, ಸೀರಿಯಲ್ ವೀಕ್ಷಕರು ಡೈರೆಕ್ಟರ್ ಕೊಟ್ಟಿರುವ ಈ ಟ್ವಿಸ್ಟ್ ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಇದು ಕೀರ್ತಿ ಅಲ್ಲ ಅಂದ್ರೆ ಇನ್ಯಾರು? ಲಕ್ಷ್ಮೀನೇ ಕೀರ್ತಿ ಥರ ಬಂದಿದ್ದಾಳಾ? ಅಥವಾ ಬೇರೆ ಯಾರನ್ನೋ ಕೀರ್ತಿ ಥರ ಕರೆದಿದ್ದಾರ ಎನ್ನುವ ಕುತೂಹಲ ಹೆಚ್ಚಾಗಿದೆ.

ಧಾರಾವಾಹಿ ನೋಡುತ್ತಿರುವವರಿಗೆ ಸಿಕ್ಕಾಪಟ್ಟೆ Confuse ಆಗಿದೆ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ. ಈ ಧಾರಾವಾಹಿಯ ಕಥೆ ಈಗ ಹೇಗೆ ಸಾಗುತ್ತಿದೆ ಎಂದರೆ, ಕೆಲ ತಿಂಗಳುಗಳ ಹಿಂದೆ ಕೀರ್ತಿಯನ್ನು ಬೆಟ್ಟದಿಂದ ತಳ್ಳಿದ್ದಳು ಕಾವೇರಿ, ಎಲ್ಲರೂ ಕೀರ್ತಿ ಸತ್ತೇ ಹೋಗಿದ್ದಾಳೆ ಅಂದುಕೊಂಡಿದ್ದರು. ಕೀರ್ತಿಯ ಅಂತ್ಯಸಂಸ್ಕಾರವನ್ನು ಕೂಡ ಮಾಡಲಾಗಿತ್ತು. ಆದರೆ ಲಕ್ಷ್ಮೀ ಮಾತ್ರ ಕೀರ್ತಿ ಸತ್ತಿಲ್ಲ ಬದುಕಿದ್ದಾಳೆ ಎಂದು ನಂಬಿ, ಕೀರ್ತಿಯನ್ನು ಕಾಪಾಡಬೇಕು ಎಂದು ಏನೇನೋ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದರು. ಕಾವೇರಿಗೆ ಇದರಿಂದ ಕೋಪ ಬಂದು, ತನ್ನ ಮಗ ತನ್ನ ಪಾಲಿಗೆ ಮಾತ್ರ ಇರಬೇಕು ಎಂದು ಭಾವಿಸಿ, ಲಕ್ಷ್ಮಿಯನ್ನು ಕೊಲ್ಲುವ ಪ್ಲಾನ್ ಮಾಡಿದಳು.

ಲಕ್ಷ್ಮಿಗೆ ಮಾನಸಿಕ ಅಸ್ವಸ್ಥತೆ ಆಗಿದೆ, ಅವಳಿಗೆ ಟ್ರೀಟ್ಮೆಂಟ್ ಬೇಕು ಎಂದು ಕಳಿಸಿ, ಅಲ್ಲಿ ನಡೆದ ಹಬ್ಬದಲ್ಲಿ ರಾವಣ ದಹನದಲ್ಲಿ ಲಕ್ಷ್ಮಿಯನ್ನು ಕೊಲ್ಲುವ ಪ್ಲಾನ್ ಮಾಡಿದಳು. ಅದೇ ರೀತಿ ಲಕ್ಷ್ಮೀ ಸಹ ಸಿಕ್ಕಿಹಾಕಿಕೊಂಡಂತೆಯೇ ತೋರಿಸಲಾಯಿತು. ಆದರೆ ಲಕ್ಷ್ಮೀ ನಿಜಕ್ಕೂ ಸತ್ತಿದ್ದಾಳ ಇಲ್ಲವ ಗೊತ್ತಿಲ್ಲ. ಆದರೆ ವೈಷ್ಣವ್ ಮನೆಯಲ್ಲಿ ಲಕ್ಷ್ಮೀ ಸತ್ತಿರಬಹುದು ಎಂದುಕೊಂಡು, ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಲಕ್ಷ್ಮಿಗೆ ಸಂಸ್ಕಾರ ಮಾಡಬೇಕು ಎಂದುಕೊಂಡಾಗ, ಮನೆಗೆ ಕೀರ್ತಿಯ ಆಗಮನ ಆಗಿದೆ. ಕೀರ್ತಿ ಬಂದು ಕಾವೇರಿ ಮಾಡಿದ್ದನ್ನೆಲ್ಲಾ ಸಾಕ್ಷಿ ಸಮೇತ ನಿರೂಪಿಸಿ, ಕಾವೇರಿಯನ್ನು ಜೈಲಿಗೆ ಕಳಿಸಿದ್ದಾಳೆ. ಕಾವೇರಿ ಇಷ್ಟೆಲ್ಲಾ ಮಾಡಿದ್ದಾಳ ಎಂದು ಮನೆ ಮಂದಿ ಶಾಕ್ ಆಗಿದ್ದಾರೆ..
ಇತ್ತ ಕೀರ್ತಿ ಏನೋ ಕಾವೇರಿ ಮಾಡಿದ್ದನ್ನೆಲ್ಲಾ ಬಹಿರಂಗ ಪಡಿಸಿದ್ದಾಯಿತು. ಆದರೆ ಅವಳು ನಿಜಕ್ಕೂ ಕೀರ್ತಿನಾ ಎನ್ನುವ ಪ್ರಶ್ನೆಯನ್ನು ಎಲ್ಲರಲ್ಲಿ ಮೂಡಿಸಿದ್ದಾಳೆ. ಅದು ಯಾಕೆ ಎಂದರೆ ಕೀರ್ತಿಯ ಅಭಿನಯದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತಿದೆ. ಮೊದಲಿದ್ದ ಹಾಗೆ ಗತ್ತು ಇಲ್ಲ, ಜೊತೆಗೆ ಯಾರೋ ಹೇಳಿಕೊಟ್ಟು ಮಾತನಾಡಿಸುತ್ತಿರುವ ಹಾಗೆ ಎಲ್ಲವು ಕಾಣಿಸುತ್ತಿದೆ. ಅಷ್ಟೇ ಅಲ್ಲದೇ ಇತ್ತೀಚಿನ ಪ್ರೊಮೋದಲ್ಲಿ ನನಗೆ ಕೀರ್ತಿ ಆಗಿ ಸಾಕಾಗಿದೆ ಎಂದು ಸ್ವತಃ ಕೀರ್ತಿಯಾಗಿ ಬಂದಿರುವ ಕೀರ್ತಿಯೇ ಹೇಳುತ್ತಿದ್ದಾಳೆ. ಇದನ್ನೆಲ್ಲಾ ನೋಡಿ ವೀಕ್ಷಕರು ಫುಲ್ confuse ಆಗಿದ್ದಾರೆ. ಜೊತೆಗೆ ಕೀರ್ತಿಯ ಕೈಯಲ್ಲಿ ಲಕ್ಷ್ಮಿ ಹತ್ತಿರ ಇದ್ದ ರಾಣಿ ಗೊಂಬೆ ಇದೆ. ಲಕ್ಷ್ಮೀ ರಾವಣ ದಹನದ ದಿವಸ ಆ ಗೊಂಬೆ ಹುಡುಕಿಕೊಂಡೇ ಹೋಗಿದ್ದು..
ಹಾಗಾಗಿ ಲಕ್ಷ್ಮೀ ಅಲ್ಲಿ ಸತ್ತಿಲ್ಲ, ಲಕ್ಷ್ಮಿಯ ಮುಖ ಸುಟ್ಟು ಕೀರ್ತಿಯ ಹಾಗೆ ಪ್ಲಾಸ್ಟಿಕ್ ಸರ್ಜರಿ ಮಾಡಿರಬಹುದು ಎನ್ನುವ ಪ್ರಶ್ನೆ ಶುರುವಾಗಿದೆ. ಜೊತೆಗೆ ಸುಪ್ರೀತಾ ಏನಾದರೂ ಕಾವೇರಿಯ ಮುಖವಾಡ ಕಳಚುವುದಕ್ಕಾಗಿ ಕೀರ್ತಿಯ ಹಾಗಿರುವ ಮತ್ತೊಬ್ಬರನ್ನು ಕರೆದುಕೊಂಡು ಬಂದಿರಬಹುದಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಒಟ್ಟಿನಲ್ಲಿ ಕೀರ್ತಿ ಇದ್ದಾಳೋ ಇಲ್ಲವೋ, ಲಕ್ಷ್ಮಿ ನಿಜವಾಗ್ಲೂ ಸತ್ತು ಹೋಗಿದ್ದಾಳ? ಈ ಕಥೆಯಲ್ಲಿ ಏನಾಗ್ತಿದೆ? ಈ ಟ್ವಿಸ್ಟ್ ಗಳು ಏನೇನು? ಎಂದು ಎಲ್ಲಾ ವೀಕ್ಷಕರು ತಲೆಕೆಡಿಸಿಕೊಳ್ಳುವ ಹಾಗೆ ಮಾಡಿದ್ದಾರೆ ನಿರ್ದೇಶಕರು, ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ.