ನಟಿ ನಮೃತಾ ಗೌಡ ಇತ್ತೀಚಿಗಂತೂ ಬಹಳ ಪಾಪ್ಯುಲರ್. ಬಿಗ್ ಬಾಸ್ ಸೀಸನ್ 10 ನಲ್ಲಿ ಒಂದಷ್ಟು ಹವಾ ಮೂಡಿಸಿ ಬಂದ ಮೇಲಂತೂ ಈಕೆಗೆ ಸೋಶಿಯಲ್ ಮೀಡಿಯಾದಲ್ಲೂ ಬಹಳ ದೊಡ್ಡ ಫ್ಯಾನ್ ಬೇಸ್ ಸಿಕ್ಕಿದೆ. ನಾಗಿಣಿ ಧಾರಾವಾಹಿ ತಂದುಕೊಟ್ಟ ಖ್ಯಾತಿಯಿಂದ ಬಿಗ್ ಬಾಸ್ ಮನೆಗೆ ಹೋದ ನಟಿ ನಮೃತಾ ಗೌಡ ತಮ್ಮ ಖಡಕ್ ಕ್ಯಾರೆಕ್ಟರ್ ನಿಂದ ಕನ್ನಡ ಕಿರುತೆರೆ ಜನಮನ ಗೆದ್ದಿರುವುದಂತೂ ಸುಳ್ಳಲ್ಲ.
ಬಿಗ್ ಬಾಸ್ ನಿಂದ ಹೊರಬಂದ ಈಕೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ, ದೊಡ್ಡ ಬ್ರಾಂಡ್ ಗಳ ಅಡ್ವಟೈಸ್ಮೆಂಟ್ ಗಳಲ್ಲಿಯೂ ಗುರುತಿಸಿಕೊಂಡರು. ಹೀಗಿರುವಾಗ ಸಿನಿಮಾಗಳಲ್ಲಿ ಯಾಕೆ ನಟಿಸುತ್ತಿಲ್ಲ ಎಂದು ಇವರ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರಶ್ನಿಸಿದ್ದಾರೆ.

“ನನಗೂ ನನ್ನದೇ ಆದ ಜೀವನ ಮತ್ತು ದೈನಂದಿನ ಖರ್ಚುಗಳಿವೆ. ಇ ಎಂ ಐ ಕಟ್ಟುವ ಜವಾಬ್ದಾರಿಯು ಇದೆ. ಸಿನಿಮಾಗಳಿಗೆ ಹೋದರೆ ಈ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಲು ಕಷ್ಟವಾಗುತ್ತದೆ. ಅದೇ ಧಾರಾವಾಹಿಗಳಲ್ಲಿ ನಟಿಸುವುದಾದರೆ ಪ್ರತಿ ತಿಂಗಳ ಕೊನೆಗೆ ನನ್ನ ಖರ್ಚುಗಳನ್ನು ಸಂಭಾಳಿಸಲು ಸಾಧ್ಯವಾಗುತ್ತದೆ. ಸಿನಿಮಾದಲ್ಲಿ ಬರುವ ದುಡ್ಡಿಗಾಗಿ ಕಾಯುತ್ತ ಕೂರುವ ಪರಿಸ್ಥಿತಿ ಇರುತ್ತದೆ. ಅದೇ ಧಾರಾವಾಹಿಗಳಲ್ಲಿ ಸರ್ಕಾರಿ ಉದ್ಯೋಗದಂತೆ ಪ್ರತಿ ತಿಂಗಳ ಕೊನೆಯಲ್ಲಿ ಬರುವ ಸಂಬಳದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಯಾವುದೇ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿಲ್ಲ” ಎಂದು ತಾವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರುವ ಕಾರಣವನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ನಮೃತ ಗೌಡ.
” ಸಿನಿಮಾಗಳು ಬಹುದೊಡ್ಡ ಪ್ರಾಜೆಕ್ಟ್. ಅದು ಒಂದು ಎರಡು ವರ್ಷಗಳ ಕಾಲ ನಡೆಯುತ್ತದೆ ಮತ್ತು ಎಂದೋ ಒಮ್ಮೆ ಸಂಬಳ ಸಿಗುತ್ತದೆ. ತಿಂಗಳು ತಿಂಗಳು ಸಂಬಳ ಸಿಗುವುದಿಲ್ಲ ಇದರಿಂದ ನನಗೆ ಜೀವನ ಕಷ್ಟವಾಗುತ್ತದೆ, ಧಾರಾವಾಹಿಗಳಲ್ಲಿ ನಾನು ಈಗಾಗಲೇ ನಟಿಸಿರುವುದರಿಂದ ನನಗೆ ಇದೇ ಹೆಚ್ಚು ಕಂಫರ್ಟೆಬಲ್. ಅಲ್ಲದೆ ಸಿನಿಮಾಗಳಲ್ಲಿ ಸಂಬಳದ ವಿಚಾರ ಯಾವ ರೀತಿ ನಡೆಯುತ್ತದೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಕ್ಲಾರಿಟಿ ಕೂಡ ಇಲ್ಲ” ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ನಟಿ ಉತ್ತರಿಸಿದ್ದಾರೆ.

ಇದಕ್ಕೆ ನಟಿ ನಮೃತಾ ಗೌಡ ಅವರ ಕಾಲೆಳೆದ ನೆಟ್ಟಿಗರು ” ಸಿನಿಮಾ ಸಂಬಳದ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತೀರಿ ಮತ್ಯಾಕೆ ಈ ರೀತಿಯಲ್ಲ ಉತ್ತರಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ‘ಸಿನಿಮಾದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ನೇರವಾಗಿ ಹೇಳಿ ಬಿಡಮ್ಮ’ ಎಂದು ರೇಗಿಸಿದ್ದಾರೆ. ಹೀಗೆ ಥರಥರವಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ನಟಿ ನಮೃತಾ ಗೌಡ ಅವರ ಕಾಲೆಳೆದಿದ್ದಾರೆ. ಈ ರೀತಿ ಎಲ್ಲದಕ್ಕೂ ಕಮೆಂಟ್ ಮಾಡುವ ನೆಟ್ಟಿಗರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ನಟಿ ನಮೃತಾ ಗೌಡ.
ಇತ್ತೀಚೆಗಂತೂ ನಟಿ ನಮೃತಾ ಗೌಡ ಹಾಗೂ ಡ್ಯಾನ್ಸರ್ ಕಿಶನ್ ಬೆಳಗಲಿ ಅವರ ರೀಲ್ಸ್ ಹಾಗೂ ಡ್ಯಾನ್ಸ್ ಗಳು ಬಹಳ ವೈರಲ್ ಆಗುತ್ತಿದೆ. ಇತ್ತೀಚೆಗೆ ಕೊಡಗಿನಲ್ಲಿ ಬಿಕಿನಿ ಹಾಕಿ ಓಡಾಡಿದ್ದಕ್ಕೆ ಹಾಗೂ ಬಾಲಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ರೀತಿ ನಾನಾ ಕಾರಣಗಳಿಗೆ ನಟಿ ನಮೃತಾ ಗೌಡ ಅವರು ಸೋಶಿಯಲ್ ಮೀಡಿಯಾ ನೆಟ್ಟಿಗರಿಂದ ಕಮೆಂಟ್ ಗಳಿಗೆ ತುತ್ತಾಗುತ್ತಿದ್ದಾರೆ.