ನಟ ದರ್ಶನ್ ಅವರಿಗೆ ದೀಪಾವಳಿ ಗಿಫ್ಟ್ ಎನ್ನುವಂತೆ ಜೈಲುವಾಸದಿಂದ ಕೊಂಚ ಬ್ರೇಕ್ ಸಿಕ್ಕಿದೆ. ಮೊನ್ನೆಯಷ್ಟೇ ಕೋರ್ಟ್ ನಲ್ಲಿ ದರ್ಶನ್ ಅವರಿಗೆ 45 ದಿನಗಳ ಅಂದರೆ 6 ವಾರಗಳ ಬೇಲ್ ನೀಡಲಾಗಿದೆ. ಇದರಿಂದ ದರ್ಶನ್ ಅವರ ಅಭಿಮಾನಿಗಳಿಗೆ ಸಂತೋಷವೇನೋ ಆಗಿದೆ. ಆದರೆ ಇದೀಗ ದರ್ಶನ್ ಅವರಿಗೆ ಲಿವರ್ ಸಮಸ್ಯೆ ಇದೆ ಎನ್ನುವ ಒಂದು ಕಹಿಯಾದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಹೌದು, ನಟ ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ ನಲ್ಲಿ ಜೈಲಿಗೆ ಹೋದ ನಂತರ ಹೊರಗಿನ ಅಭಿಮಾನಿಗಳು ತಮ್ಮ ಡಿಬಾಸ್ ಯಾವಾಗ ಹೊರಗೆ ಬರುತ್ತಾರೆ, ಸಿನಿಮಾ ಶೂಟಿಂಗ್ ನಲ್ಲಿ ಯಾವಾಗ ಪಾಲ್ಗೊಳ್ಳುತ್ತಾರೆ? ಸಿನಿಮಾ ಯಾವಾಗ ತೆರೆಕಾಣುತ್ತದೆ ಎಂದು ಹಂಬಲಿಸುತ್ತಿದ್ದಾರೆ. ದರ್ಶನ್ ಅವರು ಇದೀಗ 100 ದಿನಕ್ಕಿಂತ ಹೆಚ್ಚಿನ ಸಮಯ ಜೈಲಿನಲ್ಲಿ ಕಳೆದು, ಇದೀಗ ಜಾಮೀನಿನ ಮೂಲಕ ಹೊರಬಂದಿದ್ದಾರೆ.


ನಿನಟ ದರ್ಶನ್ ಅವರಿಗೆ ಬೆನ್ನುನೋವು ಹೆಚ್ಚಾಗಿದ್ದು, ಅದರಿಂದ ಅವರಿಗೆ ಟ್ರೀಟ್ಮೆಂಟ್ ಬೇಕು, ದರ್ಶನ್ ಅವರಿಗೆ ಸರ್ಜರಿ ಆಗಬೇಕು ಎನ್ನುವ ಕಾರಣಕ್ಕೆ ಕೋರ್ಟ್ ಇಂದ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ ಅವರು ಮೊನ್ನೆ ರಾತ್ರಿ ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಬಂದಿದ್ದು, ಅವರನ್ನು ಬರಮಾಡಿಕೊಳ್ಳಲು ಅಭಿಮಾನಿಗಳ ಸಾಗರವೇ ಕಾದಿತ್ತು ಎಂದರೂ ತಪ್ಪಲ್ಲ. ಪ್ರಸ್ತುತ ನಟ ದರ್ಶನ್ ಅವರಿಗೆ ಆಸ್ಪತ್ರೆಯಲ್ಲಿ ಟೆಸ್ಟ್ ಗಳನ್ನು ಮಾಡಲಾಗುತ್ತಿದೆ.
ಅವರಿಗೆ ಬೆನ್ನು ನೋವು ಅತಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಸರ್ಜರಿ ಮಾಡುವ ಅವಶ್ಯಕತೆ ಇದೆ. ಸರ್ಜರಿಗಾಗಿ ಬಂದಿರುವ ದರ್ಶನ್ ಅವರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಈ ವೇಳೆ ಅವರಿಗೆ ಲಿವರ್ ಸಮಸ್ಯೆ ಕೂಡ ಇದೆ ಎನ್ನುವ ಸುದ್ದಿಯೊಂದು ವೈರಲ್ ಆಗುತ್ತಿದೆ. ಹೌದು, ಇಂಥದ್ದೊಂದು ಸುದ್ದಿ ವೈರಲ್ ಆಗಿರುವುದೇನೋ ನಿಜ, ಆದರೆ ನಿಜಕ್ಕೂ ದರ್ಶನ್ ಅವರಿಗೆ ಈ ಥರದ ಸಮಸ್ಯೆ ಏನಾದರೂ ಇದೆಯಾ? ವೈದ್ಯರು ಅಧಿಕೃತವಾಗಿ ತಿಳಿಸಿದ್ದಾರಾ?
ಈ ಬಗ್ಗೆ ಹೇಳುವುದಾದರೆ, ನಟ ದರ್ಶನ್ ಅವರಿಗೆ ಬೆನ್ನಿನ ಸಮಸ್ಯೆ ಇರುವ ಕಾರಣ ಬಿಜಿಎಸ್ ಆಸ್ಪತ್ರೆಯಲ್ಲಿ ಟೆಸ್ಟ್ ನಡೆಯುತ್ತಿದ್ದು, ಲಿವರ್ ಫಂಕ್ಷನ್ ಟೆಸ್ಟ್ ಕೂಡ ಮಾಡಲಾಗಿದೆ. ಆದರೆ ದರ್ಶನ್ ಅವರಿಗೆ ಲಿವರ್ ಗೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಇಲ್ಲ. ಇದು ಯಾರೋ ಕಿಡಿಗೇಡಿಗಳು ಬೇಕೆಂದೇ ಹಬ್ಬಿಸಿರುವ ಸುದ್ದಿ ಆಗಿದ್ದು, ಡಿಬಾಸ್ ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ..