ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸುದ್ದಿಯಾಗುತ್ತಿರುವ, ಹೆಸರು ಮಾಡುತ್ತಿರುವ ನಟಿ. ಕನ್ನಡದಿಂದ ಕೆರಿಯರ್ ಶುರು ಮಾಡಿದರೂ ಸಹ ಇವರು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿರುವುದು ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ. ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ದೀಪಾವಳಿ ಹಬ್ಬ ಆಚರಿಸಿರುವ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದು, ವಿಜಯ್ ದೇವರಕೊಂಡ ಅವರ ಮನೆಯಲ್ಲೇ ದೀಪಾವಳಿ ಆಚರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ನಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಿದ್ದು, ದೀಪಗಳನ್ನು ಹಿಡಿದಿರುವ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿ, ಎಲ್ಲರಿಗೂ ದೀಪಾವಳಿ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಪೋಸ್ಟ್ ಕ್ಯಾಪ್ಶನ್ ನಲ್ಲಿ ಫೋಟೋ ಕ್ರೆಡಿಟ್ ಆನಂದ್ ಎಂದು ಬರೆದು, ಥ್ಯಾಂಕ್ ಯು ಆನಂದ್ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿಯೇ ಹಲವರಿಗೆ ಫೋಟೋ ಕ್ಲಿಕ್ಕಿಸಿದ್ದು ಆನಂದ್ ದೇವರಕೊಂಡ ಎಂದು ಗೊತ್ತಾಗಿದೆ. ಆದರೆ ರಶ್ಮಿಕಾ ಅವರು ಕ್ಯಾಪ್ಶನ್ ನಲ್ಲಿ ಫೋಟೋ ಕ್ರೆಡಿಟ್ ಎಂದು ಬರೆದಿರುವುದನ್ನು ಡಿಲೀಟ್ ಮಾಡಿದ್ದಾರೆ.

ಫೋಟೋಗಳು ಹಾಗೂ ದೀಪಾವಳಿ ಹಬ್ಬದ ವಿಶಸ್ ಮಾತ್ರ ಹಾಗೆಯೇ ಇದೆ. ಇನ್ನು ನಟ ವಿಜಯ್ ದೇವರಕೊಂಡ ಕೂಡ ದೀಪಾವಳಿ ಹಬ್ಬದ ಆಚರಣೆ ಮಾಡಿರುವ ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ, ತಮ್ಮ ತಂದೆ ತಾಯಿ ಹಾಗೂ ತಮ್ಮನ ಜೊತೆಗಿರುವ ಫೋಟೋಸ್ ಗಳನ್ನು ಶೇರ್ ಮಾಡಿ, ಎಲ್ಲರಿಗೂ ದೀಪಾವಳಿ ಹಬ್ಬದ ವಿಶ್ ಮಾಡಿದ್ದಾರೆ. ಈ ಎರಡು ಫೋಟೋಸ್ ಗಳಲ್ಲಿ ಇರುವ ಸಾಮ್ಯತೆಯನ್ನು ಗುರುತಿಸಿರುವ ನೆಟ್ಟಿಗರು, ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಹಬ್ಬ ಆಚರಿಸಿದ್ದಾರೆ ಎನ್ನುತ್ತಿದ್ದಾರೆ.
ಇವರಿಬ್ಬರು ಒಂದೇ ಮನೆಯಲ್ಲಿ ಕುಟುಂಬದ ಜೊತೆಗಿದ್ದು, ಹಬ್ಬದ ಆಚರಣೆ ಮಾಡುತ್ತಿದ್ದಾರೆ ಎಂದಮೇಲೆ ಶೀಘ್ರದಲ್ಲೇ ಇಬ್ಬರು ಗುಡ್ ನ್ಯೂಸ್ ಕೊಡೋದು ಗ್ಯಾರೆಂಟಿ ಎನ್ನುತ್ತಿದ್ದಾರೆ ನೆಟ್ಟಿಗರು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ 2 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮರೆಡ್. ಈ ಎರಡು ಸಿನಿಮಾಗಳು ಕೂಡ ಈ ಜೋಡಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಸಿನಿಮಾಗಳ ಮೂಲಕ ಪರಿಚಯವಾದ ಇವರಿಬ್ಬರ ಸ್ನೇಹ, ಇಂದು ಲವ್ ವರೆಗು ಬಂದಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರು ಕೂಡ ಲವ್ ನಲ್ಲಿದ್ದಾರೆ ಮದುವೆಯಾಗುತ್ತಾರೆ ಎನ್ನುವ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ. ಈಗಲೂ ಕೂಡ ದೀಪಾವಳಿ ಹಬ್ಬದ ದಿವಸ ಇಬ್ಬರೂ ಜೊತೆಯಾಗಿ ಹಬ್ಬದ ಆಚರಣೆ ಮಾಡಿರುವುದು ಇವರಿಬ್ಬರ ಸಂಬಂಧ ಬಹಳ ಗಟ್ಟಿಯಾಗಿದೆ ಎಂದು ತಿಳಿಸುತ್ತಿದ್ದು, ಈ ಜೋಡಿ ಬೇಗ ಮದುವೆಯಾಗಿ ಸಿಹಿ ಸುದ್ದಿ ಕೊಡಲಿ ಎನ್ನುತ್ತಿದ್ದಾರೆ ನೆಟ್ಟಿಗರು…



