ಸದಾ ಬಟ್ಟೆಯ ವಿಚಾರದಲ್ಲಿ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಇದೀಗ ಹೊಸ ಅವತಾರದಲ್ಲಿ ಕ್ಯಾಮರಾ ಕಣ್ಣಿಗೆ ಫೋಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ಅಕ್ವೇರಿಯಂ ಬಟ್ಟೆ ಧರಿಸಿದ್ದ ಉರ್ಫಿ ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ದೇಹ ಮುಚ್ಚಿಕೊಂಡಿದ್ದಾರೆ. ಈ ವಿಚಿತ್ರ ಬಟ್ಟೆ ತೊಟ್ಟಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿರು ಗರಂ ಆಗಿದ್ದಾರೆ. ಅಷ್ಟಕ್ಕೂ ಬಾಳೆ ಹಣ್ಣಿನ ಸಿಪ್ಪೆಯ ಬಟ್ಟೆ ಹೇಗಿದೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ರೆ ಈ ಸ್ಟೋರಿ ಓದಿ.

https://www.instagram.com/reel/Cyh-P0ESZWx/?utm_source=ig_web_copy_link&igshid=MzRlODBiNWFlZA==
ಬಟ್ಟೆ ವಿಚಾರದಲ್ಲಿ ಸದಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಉರ್ಫಿ, ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದಾರೆ. ಉರ್ಫಿ ಅವತಾರ ನೋಡಿ ಧರಿಸೋಕೆ ಬೇರೆ ಏನು ಸಿಗಲಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಒಟಿಟಿಯಿಂದ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್ನಲ್ಲಿಯೂ ಅವರು ಭಾಗವಹಿಸಿದ್ದರು.
ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ದಿನಕ್ಕೊಂದು ವಿಚಿತ್ರ ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಉರ್ಫಿ ಜಾವೇದ್ ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡಿದ್ದಾರೆ. ಇದೇ ಕಾರಣದಿಂದ ನಟಿ ನಿರಂತರವಾಗಿ ಟ್ರೋಲ್ ಕೂಡ ಆಗುತ್ತಿದ್ದಾರೆ.