ಮನುಷ್ಯ ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಕಷ್ಟ ಪಟ್ಟು ನಡೆದು ಬಂದ ದಾರಿಯನ್ನು ಮರೆಯಬಾರದು ಎಂಬ ಮಾತಿದೆ. ಈ ಮಾತಿಗೆ ತಕ್ಕಂತೆ ಇಲ್ಲೊಬ್ಬ ಶ್ರೀಮಂತ ಯುವಕನೊಬ್ಬ 44 ಲಕ್ಷದ Audi ಕಾರಲ್ಲಿ ಬಂದು ಹರಿವೆ ಸೊಪ್ಪು ಮಾರುತ್ತಿದ್ದಾನೆ. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ಯುವಕ ಯಾರು?, ಈತನ ಹಿನ್ನಲೆ ಏನು ಎಂಬುದಕ್ಕೆ ಈ ವರದಿ ಮತ್ತು ವಿಡಿಯೋ ನೋಡಿ.

https://www.instagram.com/reel/CxngCBxBumk/?utm_source=ig_web_copy_link
ಈ ದೃಶ್ಯದಲ್ಲಿರುವ ಯನ್ನು ವಕ ಮೂಲತಃ ಕೇರಳ ರಾಜ್ಯದವನು. Audi ಎ4 ಕಾರಿನಲ್ಲಿ ಬಂದು ರಸ್ತೆ ಬದಿ ಹರಿವೆ ಸೊಪ್ಪು ಮಾರುತ್ತಾನೆ. ಎಲ್ಲರಂತೆ ತಾನು ಕೂಡ ಸಿಂಪಲ್ ಎಂಬಂತೆ ವ್ಯವಹಾರಕ್ಕೆ ಒತ್ತು ನೀಡುತ್ತಾನೆ. ಅಂದಹಾಗೆಯೇ ವೆರೈಟಿ ಫಾರ್ಮರ್ ಎಂದೇ ಹೆಸರು ಪಡೆದುಕೊಂಡಿರುವ ಸುಜಿತ್ ಎಸ್ಪಿ ಭಿನ್ನವಾದ ಜೀವನ ಶೈಲಿ ನಡೆಸುತ್ತಿದ್ದಾರೆ. 36 ವರ್ಷ ವಯಸ್ಸಿನ ಸುಜಿತ್ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ನಾನಾ ಸಾಧನೆಯನ್ನು ಮಾಡಿದ್ದಾರೆ.
ಕೃಷಿಯಿಂದಲೇ ಈ ಯವಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಸುಜಿತ್ ಅವರು ಕೃಷಿಯಲ್ಲಿ ಸಕ್ಸಸ್ ಕಂಡು ಬರೋಬ್ಬರಿ 44 ಲಕ್ಷ ರೂಪಾಯಿಯ Audi ಕಾರು ಚಲಾಯಿಸುತ್ತಾರೆ. ಸುಜಿತ್ ದುಬಾರಿ ಕಾರು, ಸುಖ ವಿಲಾಸಿ ಜೀವನವನ್ನು ಅನುಭವಿಸುತ್ತಿದ್ದರು ತನ್ನನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದ ಕೃಷಿ ಮತ್ತು ವ್ಯಾಪಾರವನ್ನು ಎಂದಿಗೂ ಕಡೆಗಣಿಸಿಲ್ಲ. ಇಂದಿಗೂ ಮಾರುಕಟ್ಟೆಗೆ ಬಂದು ಸೊಪ್ಪು ಮಾರುತ್ತಾರೆ ಅನ್ನೋದೇ ವಿಶೇಷ.