ಮಾಜಿ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಕಿಶೋರ್ ಬಿಳಿಗಲಿ ಹಾಗೂ ಸಂಯುಕ್ತಾ ಹೆಗ್ಡೆ ಮಾಡಿರುವ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಸಿಬಿಸಿ ಬಟ್ಟೆ ಧರಿಸಿ ಇಬ್ಬರು ಜಂಗ್ಲಿ ಚಿತ್ರದಲ್ಲಿ ಸೋನು ನಿಗಮ್ ಹಾಡಿರುವ ‘ನೀನೆಂದರೆ ನನ್ನೊಳಗೆ’ ಹಾಡಿಗೆ ಮಾದಕ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಕಂಡಿರುವ ನೆಟ್ಟಿಗರು ‘ಇದು ಡರ್ಟಿ ಡ್ಯಾನ್ಸ್, ಸಂಯುಕ್ತಾಗೆ ಡ್ರೆಸ್ಸಿಂಗ್ ಸೆನ್ಸ್’ ಇಲ್ಲ ಎಂದು ಗರಂ ಆಗಿದ್ದಾರೆ.

https://www.instagram.com/reel/CxvGGjFvnmT/?utm_source=ig_web_copy_link
ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುವ ಸಂಯುಕ್ತಾ ಹೆಗ್ಡೆ ಇದೀಗ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ವೈರಲ್ ಆಗುತ್ತಿರುವ ಡರ್ಟಿ ಡ್ಯಾನ್ಸ್ ಕಂಡು ನೆಟ್ಟಿಗರು ತರಹೆವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ಕಮೆಂಟ್ ಮಾಡಿರುವ ನೆಟ್ಟಿಗರು, ‘ಪ್ರತಿ ಬಾರಿಯೂ ಇಂಥದ್ದೇ ಡ್ರೆಸ್ ಧರಿಸುತ್ತೀರ. ಮೈ ತುಂಬಾ ಬಟ್ಟೆ ಹಾಕಿ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲವೇ? ನಟಿಯಾಗಿ ನೀವು ಎಲ್ಲರಿಗೂ ಮಾದರಿ ಆಗಿರಬೇಕು. ಆದರೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಸೀಸನ್ 7ರ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರತಿಭೆ ಕಿಶನ್ ಬಿಳಗಲಿ. ಕಿಶನ್ ಒಳ್ಳೆ ಡ್ಯಾನ್ಸರ್ ಕೂಡಾ. ಹಿಂದಿಯ ಡ್ಯಾನ್ಸ್ ದಿವಾನೆ ಸೇರಿದಂತೆ ಅನೇಕ ರಿಯಾಲಿಟಿ ಶೋಗಳನ್ನು ಕಿಶನ್ ಭಾಗವಹಿಸಿದ್ದಾರೆ. ಇನ್ನು ಕೊನೆಯದಾಗಿ ಕನ್ನಡದ ‘ತುರ್ತು ನಿರ್ಗಮನ’ ಸಿನಿಮಾದಲ್ಲಿ ನಟಿಸಿದ್ದ ಸಂಯುಕ್ತಾ ಇದೀಗ ಕಿಶನ್ ಜೊತೆಗಿನ ‘ಡರ್ಟಿ ಡ್ಯಾನ್ಸ್’ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ.