R.C.B ಅಭಿಮಾನಿಗಳ ಪಾಲಿಗೆ ಸಧ್ಯಕಂತೂ ಸಿಹಿ ಸುದ್ದಿ ಸಿಗುತ್ತಿದೆ. ನಮ್ಮ ನಿಮ್ಮೆಲ್ಲರ ಮೆಚ್ಚಿನ R.C.B ಮಾಜಿ ಆಟಗಾರ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಮಾಯಾಂಕ್ ಅಗರ್ ವಾಲ್ ರವರನ್ನು R.C.B ಗೆ ಮತ್ತೆ ಕರೆತರಲು R.C.B ಮೇನೇಜ್ಮೆಂಟ್ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಸಧ್ಯ ವೀಡಿಯೋ ರಿಪೋರ್ಟ್ ಗಳಿಂದ ಹೊರಬೀಳುತ್ತಿದೆ. ಹೌದು ಏಕೆಂದರೆ R.C.B ಮೇನೇಜ್ಮೆಂಟ್ ನ ಐ ಪಿ ಎಲ್ ಸೀಜನ್ ನಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಹೊರಟಿದೆ.

ಈಗಾಗಲೇ ಕೋಚಿಂಗ್ ಸ್ಟಾಫ್ ಗಳನ್ನು ಸಹ ಬದಲಾಯಿಸುವ R.C.B ಮ್ಯಾನೇಜ್ಮೆಂಟ್ ಈಗ ತಂಡದ ಘಟಾನುಘಟಿ ಆಟಗಾರರನ್ನು ರಿಲೀಸ್ ಮಾಡಿ ಹೊಸ ಆಟಗಾರರನ್ನು ತಂಡದತ್ತ ಕರೆ ತರಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಈಗ R.C.B ಮ್ಯಾನೇಜ್ಮೆಂಟ್ R.C.Bಯ ಮಾಜಿ ಆಟಗಾರನಾದ ಮಾಯಾಂಕ್ ಅಗರ್ವಾಲ್ ರವರನ್ನು ಕಮ್ ಬ್ಯಾಕ್ ಮಾಡಲು ಹೇಳುತ್ತಿದೆ. ಎಂಬ ಮಾಹಿತಿಗಳು ಸದ್ಯ ಲಭ್ಯವಾಗುತ್ತಿದೆ.

2011ರಲ್ಲಿ R.C.Bಯ ಮುಖಾಂತರವೇ ಐಪಿಎಲ್ ಗೆ ಎಂಟ್ರಿ ನೀಡಿದ್ದ ಮಾಯಾಂಕ್ ಅಗರ್ವಾಲ್ ರವರು ನಂತರ R.C.B ಇವರನ್ನು ರಿಲೀಸ್ ಮಾಡಿದ ಬಳಿಕ ಡೆಲ್ಲಿ ಕ್ಯಾಪಿಟಲ್ , ಪುಣೆ , ಪಂಜಾಬ್ ಕಿಂಗ್ಸ್, ಹೈದ್ರಾಬಾದ್ ಸೇರಿದಂತೆ ಹಲವು ಪ್ರೇಂಚಸಿಗಳ ಪರ ಆಡಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
ಸದ್ಯ R.C.B ಮ್ಯಾನೇಜ್ಮೆಂಟ್ ಮಾಯಾಂಕ್ ಅಗರ್ವಾಲ್ ರವರನ್ನು ಟ್ರೇಡಿಂಗ್ ಮೂಲಕ ಹೈದ್ರಾಬಾದ್ ತಂಡದಿಂದ R.C.B ಗೆ ಕರೆತಂದು ತನ್ನ ಬ್ಯಾಟಿಂಗ್ ಲೈನ್ ಅಪ್ ಅನ್ನು ಇನ್ನಷ್ಟು ಸ್ಟ್ರಾಂಗ್ ಆಗಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತೆ R.C.B ಟ್ರೆಂಡಿಂಗ್ ಆಟಗಾರರ ಅಪ್ಡೇಟನ್ನು ಕೆಲವೇ ದಿನಗಳಲ್ಲಿ ಅಫಿಶಿಯಲ್ ಆಗಿ ಹೊರಬಿಳಲಿದ್ದು ಅಲ್ಲಿಯವರೆಗೆ ನಾವು ಕೂಡ ಕಾದು ನೋಡಬೇಕಾದ ಅವಶ್ಯಕತೆ ಇದೆ.