ದೀಪಿಕಾ ಪಡುಕೋಣೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಗಾಧ ಸೌಂದರ್ಯ, ಅತ್ಯುತ್ತಮ ನಟನೆಯಿಂದ ಇಂದು ಹಾಲಿವುಡ್ನ ತನಕ ತನ್ನ ಛಾಪು ಮೂಡಿಸಿರುವ ಕನ್ನಡತಿ. ಆದರೆ ಆಕೆ ಕನ್ನಡದಲ್ಲಿ ಉಪೇಂದ್ರ ಅವರೊಂದಿಗೆ ‘ಐಶ್ವರ್ಯ’ ಚಿತ್ರದಲ್ಲಿ ನಟಿಸಿದ ನಂತರ ಅವರ ತಂದೆ ಪ್ರಕಾಶ್ ಪಡುಕೋಣೆ ಅವರಿಗೆ ತಿಂಬಾ ಭಯವಾಗಿತ್ತಂತೆ. ಮಗಳ ಬಗ್ಗೆ ಇವರಿಗೆ ಈ ಭಯ ಇದ್ದದ್ದು ಯಾಕೆ?, ಇದಕ್ಕೆ ಕಾರಣ ಏನು ಎಂಬುದನ್ನು ನೋಡೋಣ ಬನ್ನಿ.

ಪಡುಕೋಣೆಯವರಾದ ದೀಪಿಕಾ ಪಡುಕೋಣೆ ಕನ್ನಡದಲ್ಲ ‘ಐಶ್ವರ್ಯ’ ಸಿನಿಮಾದಲ್ಲಿ ನಟಿಸಿದ ನಂತರ ಬಾಲಿವುಡ್ನಲ್ಲಿ ಆಫರ್ ಬಂದಿತ್ತು ಇದೇ ಕಾರಣಕ್ಕೆ ಅವರು ವಿಮಾನ ಹತ್ತಿ ಮುಂಬೈ ಕಡೆಗೆ ಹೋದರು. ಇಂದು ದೀಪಿಕಾ ಪಡುಕೋಣೆ ಬಾಲಿವುಡ್ನ ನಂ.1 ನಟಿಯಾಗಿದ್ದರೂ, ಇಡೀ ವಿಶ್ವವೇ ತಿರುಗಿ ನೋಡುವಂತ ಸಾಧಕಿಯಾಗಿದ್ದರೂ ಕೂಡ ಆಗಿನ ಸಮಯಕ್ಕೆ ಅವರ ತಂದೆ ಹಾಗೂ ಕುಟುಂಬಿಕರು ಹೆದರಿದ್ದರಂತೆ.
ಈ ಬಗ್ಗೆ ಮಾತನಾಡಿರುವ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ, ‘ದೀಪಿಕಾಗೆ ಮಾಡೆಲಿಂಗ್ ನಲ್ಲಿ ಸಾಕಷ್ಟು ಆಸಕ್ತಿ ಇತ್ತು. ಅದೇ ಸಮಯಕ್ಕೆ ಅವಳಿಗೆ ಸಿನಿ ರಂಗದ ಮೇಲೂ ಆಸಕ್ತಿ ಹೆಚ್ಚಿತು. ಮೊದಲು ಕನ್ನಡದಲ್ಲೇ ನಟಿಸಿದಳು ಆ ಹೊತ್ತಿಗೆ ಬಾಲಿವುಡ್ನಿಂದಲೂ ಆಫರ್ ಬಂತು. ಅದೇ ಕ್ಷ ಆಕೆ ಮುಂಬೈ ಕಡೆಗೆ ಹೊರಟಳು. ಮುಂಬೈ ಆಕೆಗೆ ಹೊಸ ಜಾಗ, ಬಾಲಿವುಡ್ ಆಕೆಗೆ ಹೊಸ ಇಂಡಸ್ಟ್ರಿ ಜೊತೆಗೆ ಅಲ್ಲಿನ ಜನರೂ ಕೂಡ ಹೊಸಬರೆ. ಈ ಕಾರಣದಿಂದ ನಾವು ಅಂದು ಭಯಪಟ್ಟಿದ್ದೆವು. ಆದರೆ ಇಂದು ಆಕೆಯ ಸಾಧನೆ ಕಂಡು ಖುಷಿಯಾಗಿದೆ’ ಎಂದು ತಮ್ಮ ಮಗಳನ್ನು ಹಾಡಿ ಹೊಗಳಿದ್ದಾರೆ.



