ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ ಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಆಹಾರ, ಮನರಂಜನೆ, ಸಿನಿಮಾ, ಕ್ರೀಡೆ, ಬ್ಲಾಗ್ ಹೀಗೆ ಹಲವಾರು ವಿಷಯಗಳಲ್ಲಿ ಹಲವಾರು ಪ್ರತಿಭಾನ್ವಿತರು ಯೂಟ್ಯೂಬ್ ಚಾನೆಲ್ ನಡೆಸುವ ಮೂಲಕ ಜನಪ್ರಿಯತೆ ಹಾಗೂ ಆದಾಯ ಗಳಿಸುತ್ತಿದ್ದಾರೆ.ಈ ಯೂಟ್ಯೂಬ್ ನಿಂದ ಗಳಿಸಿದ ಹಣದಿಂದಲೇ ಬಂಗಲೆ, ಐಶಾರಾಮಿ ವಾಹನಗಳನ್ನು ಖರೀದಿಸದವರಿದ್ದಾರೆ.ಇದೀಗ, 11 ವರ್ಷದ ಬಾಲಕಿಯೊಬ್ಬಳು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಒಟ್ಟಾರೆ 410 ಕೋಟಿ ಆದಾಯ ಗಳಿಸಿರುವ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು,2011ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಜನಿಸಿದ ಶ್ಫಾ ಎಂಬ ಬಾಲಕಿಯ ಚಾನೆಲ್ ಈಗ ಸಕ್ಕತ್ ಫೇಮಸ್.ಈಕೆಯ ವಿಡಿಯೋಗಳು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಳ್ಳುತ್ತಿದೆ. 2015 ರಿಂದ ಈಕೆ ಜಾಗತಿಕ ಮಟ್ಟದ ಜನಪ್ರಿಯ ಯೂಟ್ಯೂಬರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ತನ್ನ ಚಾನೆಲ್ ನಲ್ಲಿ ಎಲ್ಸಾ ಮತ್ತು ಅನ್ನಾರ್ ವಿಷಯದಲ್ಲಿ ಅರಬ್ ಭಾಷರಯಲ್ಲಿ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದಾಳೆ. ತಾಯಿಯ ಬೆಂಬಲದೊಂದಿಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ 11ವರ್ಷದ ಶ್ಫಾ ಇದೀಗ ಯೂಟ್ಯೂಬ್ ನಿಂದ ಕೋಟಿ ಗಟ್ಟಲೆ ಹಣ ಸಂಪಾದಿಸುತ್ತಿದ್ದಾಳೆ.
ಅರಬ್ ದೇಶಕ್ಕೆ ಸೇರಿದ ಈ ಅದ್ಭುತ ಬಾಲಕಿ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ಗೆ ಸದ್ಯ 42 ಮಿಲಿಯನ್ ಚಂದಾದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬಾಲಕಿಯ ಕುಟುಂಬ ಯೂಟ್ಯೂಬ್ ಚಾನೆಲನ್ನೇ ಒಂದು ಲಾಭದಾಯಕ ಉದ್ಯಮ ಮಾಡಿಕೊಂಡಿದ್ದು, ಈಕೆಯ ಚಾನೆಲ್ನ ವಿಡಿಯೋಗಳು 22 ಶತಕೋಟಿ ವೀವ್ಸ್ ಗಳಿಸಿದೆ. ಇದರಿಂದ ಒಳ್ಳೆಯ ಆದಾಯವೂ ಬರುತ್ತಿದೆ. ವರದಿಗಳ ಪ್ರಕಾರ ಶ್ಫಾ ತನ್ನ ಚಾನೆಲ್ನಲ್ಲಿ ಅಪ್ಲೋಡ್ ಮಾಡುವ ಪ್ರತಿ ವಿಡಿಯೋದ 1000 ವೀವ್ಸ್ ಗೆ 1.21 ಡಾಲರ್ ಆದಾಯ ಗಳಿಸುತ್ತಿದ್ದಾಳೆ ಎನ್ನಲಾಗಿದೆ.
ಈಕೆ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ನ ಪ್ರತಿ 1000 ವೀಕ್ಷಣೆಗೆ 100ರೂ ಪಡೆಯುತ್ತಿದ್ದಾಳಂತೆ.ಈ ಪ್ರಕಾರ ಈಕೆ 30 ದಿನಗಳಿಗೆ ಒಟ್ಟು 1.28ಲಕ್ಷ ಡಾಲರ್ ಆದಾಯ ಗಳಿಸುತ್ತಿದ್ದಾಳೆ. ಈಕೆ 8 ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಮಾಡಿದ್ದು, 900 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾಳೆ.ಈಕೆಯ ನಿವ್ವಳ ಆದಾಯ 50 ಮಿಲಿಯನ್ ಡಾಲರ್ ಆಗಿದ್ದು ಭಾರತೀಯ ರೂಪಾಯಿಯಲ್ಲಿ ಇದನ್ನು ಹೇಳುವುದಾದರೆ ಸರಿಸುಮಾರು 410ಕೋಟಿ ರೂಪಾಯಿ.