ಮಗು ಹುಟ್ಟಿದಾಗಿನಿಂದ ವೃದ್ಧಾವಸ್ಥೆಯವರೆಗೂ ಕೂಡ, ಈ ಹಾಲು ತುಂಬಾ ಅಮೃತ ಸಮಾನ. ಮಗು ಆರು ತಿಂಗಳವರೆಗೆ ಸ್ಥನತಾನವೆ ಶ್ರೇಷ್ಠ. ಹಾಲನ್ನು ಮಕ್ಕಳು ಎಷ್ಟು ಕುಡಿಯಬೇಕು? ದೊಡ್ಡವರಾದ ಮೇಲೆ ಕುಡಿಯಲೇ ಬೇಕಾ? ಅದರಿಂದ ಆಗುವ ಪರಿಣಾಮಗಳೇನು? ಕುಡಿಯದೆ ಆಗುವ ದುಷ್ಪರಿಣಾಮಗಳು! ಆಯುರ್ವೇದದಲ್ಲಿ ಆರು ತಿಂಗಳವರೆಗೆ ಅವಸ್ಥೆಯನ್ನು ಕ್ಷೀರ ಅಂತ ಕರೆಯುತ್ತೇವೆ. ಹಾಲು ಮಾತ್ರ ಸೇವಿಸುವ ಅಂತ ಹೇಳುತ್ತೇವೆ. ಸ್ವಲ್ಪ ದೊಡ್ಡದಾದ ಮೇಲೆ ಕ್ಷೀರ ಅನ್ನ ಅಂದರೆ ಹಾಲು ಅನ್ನ ಅಂತ ಕರೆಯುತ್ತೇವೆ. ನಂತರ 16 ವರ್ಷ ತನಕ ಬಾಲ್ಯಾವಸ್ಥೆ ಅಂತ ಕರೀತೀವಿ. ಅಲ್ಲಿ ಅನ್ನದ ಅವಸ್ಥೆ ಅಂತ ಕರೆಯುತ್ತೇವೆ.
ಈ ಕ್ಷೀರ ಅಂದರೆ ಹಾಲು ಕೆಲವು ಗೋಕ್ಷಿರ ಅಂತಾನೂ ತೆಗೆದುಕೊಳ್ಳುತ್ತೇವೆ. ಇದು ಮಧುರವಾಗಿರುತ್ತದೆ. ಎಲ್ಲಾ ಧಾತುಗಳಿಗೆ ಪೌಷ್ಟಿಕವಾಗಿರುತ್ತದೆ. ಆದರೆ ಇಂದು ಮಧುರವಾಗಿದ್ದರೂ ಗುರುವಾಗಿರುವುದರಿಂದ ಹೆವಿ ಟು ಡೈಜೆಸ್ಟ್ ಜೀರ್ಣಕ್ರಿಯೆ ಕಷ್ಟ. ಇಂತಹ ಸಮಯದಲ್ಲಿ ಅಂದರೆ ಮಕ್ಕಳು ಹಾಲನ್ನು ಕುಡಿಯದೆ ಇದ್ದರೆ ಅದಕ್ಕೆ ಹಣ್ಣುಗಳನ್ನು ಅಥವಾ ಸಿಹಿಯಾಗಿ ಮಾಡಿಕೊಡುವುದರಿಂದ ಮಕ್ಕಳ ಡೈಜೇಶನ್ ಗೆ ಕಷ್ಟವಾಗುವಂತೆ ನಾವು ಮಾಡಿಕೊಟ್ಟ ಹಾಗೆ ಆಗುತ್ತದೆ.
ಮಕ್ಕಳಿಗೆ ಇಷ್ಟವಾದ ಬೆಣ್ಣೆ ತುಪ್ಪಾವನ್ನು ಕೊಟ್ಟು ಅಂದರೆ ಅನ್ನದ ಜೊತೆಗೆ ಹಾಲನ್ನು ಮಿಶ್ರ ಮಾಡಿ ಕೊಡುವುದರಿಂದ ಸಹಾಯಕಾರಿ ಆಗುತ್ತದೆ. ಹಾಲನ್ನು ಫೋರ್ಸ್ ಮಾಡಿಕೊಟ್ಟರೆ ಅದು ದೂರವೇ ಹೋಗುತ್ತದೆ. ಹೊರತು ಇಷ್ಟಪಡುವುದಿಲ್ಲ ಮತ್ತು ಈ ಹಣ್ಣು ಸಂಯೋಗ ವಿರುದ್ಧ ಎಂದು ಹೇಳುತ್ತೇವೆ. ಹಣ್ಣು ಮತ್ತು ಹಾಲು ಮಿಶ್ರಿತದ ಪರಿಣಾಮ ಮಕ್ಕಳಿಗೆ ಒಳ್ಳೆಯ ಯಾಗಿರುವುದಿಲ್ಲ. ಹಾಲು,ಹಣ್ಣು ಎಷ್ಟೇ ಪೋಷಕವಾದರೂ ಅವರನ್ನು ಜೊತೆಯಾಗಿ ಸಣ್ಣ ಮಕ್ಕಳಿಗೆ ನೀಡಲೇಬಾರದು.
ಇದರಿಂದ ಅನೇಕ ರೀತಿಯ ರೋಗಗಳು ಸಂಭವಿಸುತ್ತದೆ. ಇದನ್ನು ವಿರುದ್ಧದ ಆಹಾರ ಅಂತಾನೇ ಕರೆಯಬಹುದು. ಇದರಿಂದ ಉತ್ಪತ್ತಿಯಾಗುವ ರೋಗಗಳು ಅಂದರೆ, ಜೀರ್ಣ ಸಂಬಂಧಿ ರೋಗಗಳು, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಕಂಡು ಬರಬಹುದು. ಪರಿಮಳ ವಾಸನೆಗೋಸ್ಕರ ಹಾಲಿಗೆ ಚಕ್ಕೆ,ಲವಂಗವನ್ನು ಹಾಕಿ ಪುಡಿ ಮಾಡಿ ಮಿಶ್ರ ಮಾಡಿ ಕೊಡಬಹುದು. ಅಲ್ಲಿ ಪೌಷ್ಟಿಕತೆ ದೊರೆಯದಿದ್ದರೆ, ಬೇರೆ ರೀತಿಯ ಡ್ರೈ ಫ್ರೂಟ್ಸ್ ಗಳನ್ನು ಮಕ್ಕಳಿಗೆ ಕೊಡುವುದು.
ಮೂರು,ನಾಲ್ಕು ಬಾದಾಮಿಗಳನ್ನು ಕೊಡುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ. ಹಾಗಾಗಿ ಯಾವುದು ಇಷ್ಟವಿಲ್ಲವೋ ಅವುಗಳನ್ನು ಫೋರ್ಸ್ ಮಾಡುವುದರಿಂದ ಆಗುವ ಲಾಭಕ್ಕಿಂತ ಆಗುವ ನಷ್ಟವೇ ಜಾಸ್ತಿ.
ಧನ್ಯವಾದಗಳು