ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್ ದಿನ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹಂಚಿಕೊಂಡಿದ್ದ ವಿಡಿಯೋ ಒಂದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಹಬ್ಬದ ಪ್ರಯುಕ್ತ ಕ್ರೀಡೆ ಹಾಗೂ ಸಿನಿ ರಂಗದ ಮುಸಲ್ಮಾನ್ ದಿಗ್ಗಜರು ತಮ್ಮ ಸಾಮಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದರೆ ಇದೀಗ, ಕುರ್ಬಾನ್ ನೀಡಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬರೋಬ್ಬರಿ 4ಕೋಟಿ ರೂಪಾಯಿಯ ಗೂಳಿ ಖರೀದಿಸಿದ್ದು, ಗೂಳಿಯೊಂದಿಗಿನ ವಿಡಿಯೋ ಸಕ್ಕತ್ ವೈರಲ್ ಆಗಿದೆ.

ಬಕ್ರೀದ್ ಹಬ್ಬದ ಸಲುವಾಗಿ ಆಚರಿಸುವ ಕುರ್ಬಾನಿ ಪ್ರಯುಕ್ತ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ 4 ಕೋಟಿ ರೂ.ಬೆಲೆಯ ಬೃಹತ್ ಗೂಳಿಯೊಂದನ್ನು ಖರೀದಿಸಿದ್ದಾರೆ. ಪಾಕಿಸ್ತಾನದ ಕರೆನ್ಸಿಯಲ್ಲಿ ಈ ಗೂಳಿಯ ಬೆಲೆಯನ್ನು 4 ಕೋಟಿ ಎಂದು ಅಂದಾಜಿಸಲಾಗಿದೆ. ಅಫ್ರಿದಿ ಈ ಗೂಳಿಯನ್ನು ಬಡವರಿಗೆ ನೀಡಿದ್ದು, ಈ ಗಜಗಾತ್ರದ ಗೂಳಿಯೊಂದಿಗೆ ಅವರು ತೋಟದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ದಶಕಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಆಟಗಾರ ಎನಿಸಿಕೊಂಡಿದ್ದ ಶಾಹಿದ್ ಅಫ್ರಿದಿ ಕುರ್ಬಾನಿಗಾಗಿ ಈ ದೊಡ್ಡ ಗೂಳಿಯನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ದುಬಾರಿ ಬೆಲೆಗೆ ಅವರು ಈ ಗೂಳಿಯನ್ನು ಖರೀದಿಸಿದ್ದು, ಆ ಗೂಳಿಯೊಂದಿಗೆ ನಡೆದು ಹೋಗುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಶಾಹಿದ್ ಅಫ್ರಿದಿ ತಾವು ಖರೀದಿಸಿದ ದುಬಾರಿ ಬೆಲೆಯ ಗೂಳಿಯೊಂದಿಗೆ ನಡೆದು ಹೋಗುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ತಿಳಿಸುತ್ತಿದ ನಂತರ ಈ ವಿಡಿಯೋ ವೈರಲ್ ಆಗಿದೆ. ಜೊತೆಗೆ ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಕೆಲವರು ವಿವಿಧ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ. ಕೆಲವರು ಅಫ್ರಿದಿಗೆ ಶುಭಾಶಯ ಹೇಳಿದ್ದಾರೆ, ಮತ್ತೆ ಕೆಲವರು ಗೂಳಿಯನ್ನು ಬಲಿ ಕೊಟ್ಟಿರಾ? ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಶಾಹಿದ್ ಅಫ್ರಿದಿ ಮರುತ್ತರ ನೀಡಿಲ್ಲ.



