ಕನ್ನಡ ಚಿತ್ರರಂಗದ ಸ್ಟಾರ್ ಸಿಂಗರ್ ಪೈಕಿ ಸಂಜಿತ್ ಹೆಗ್ಡೆ ಕೂಡ ಒಬ್ಬರು, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರೆ ಚಿತ್ರರಂಗದಲ್ಲೂ ಅಪಾರ ಬೇಡಿಕೆಯುಳ್ಳ ಹಾಡುಗಾರರಾಗಿದ್ದಾರೆ. ಇಷ್ಟು ದಿನ ಹಾಡಿನ ಮೂಲಕ ಕಮಾಲ್ ಮಾಡಿದ್ದ ಸಂಜಿತ್ ಹೆಗ್ಡೆ, ಇದೀಗ ತಮ್ಮ ವಿಭಿನ್ನ ಫ್ಯಾಷನ್ ಮೂಲಕ ಸಾಕಷ್ಟು ಸದ್ದು ಮಾಡಿದ್ದಾರೆ. ಇತ್ತೀಚಿಗೆ ಗೀಜಿಗ ಹಕ್ಕಿ ಎನ್ನುವ ಹಾಡು ಸೂಪರ್ ಹಿಟ್ ಆಗಿರುವ ಬೆನ್ನಲ್ಲೇ ಸಂಜಿತ್ ಹೆಗ್ಡೆ, ಸ್ಟೈಲ್ ಹಾಗೂ ಸ್ಟೇಟ್ ಮೆಂಟ್ ಕೂಡ ಸಾಕಷ್ಟು ವೈರಲ್ ಆಗಿದೆ.ಜಂಡರ್ ನಿಯಮವನ್ನ ಉಲ್ಲಂಘನೆ ಮಾಡಿ ನೆಕ್ಲೆಸ್ ಧರಿಸಿ ಹಾಡಿದ್ದು, ಈ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸಂಜಿತ್ ಹೆಗ್ಡೆ ಜೇಂಡರ್ ರೂಲ್ಸ್ ಬ್ರೇಕ್ ಮಾಡಿ ನೆಕ್ಲೆಸ್ ಧರಿಸಿದ್ದು ಅಭಿಮಾನಿಗಳು ಮಾತ್ರ ಸಂಜಿತ್ ಲುಕ್ ಗೆ ಕಂಪ್ಲೀಟ್ ಬೋಲ್ಡ್ ಆಗಿದ್ದಾರೆ. ಜೀ ವಾಹಿನಿಯ ಸರಿಗಮಪ ಶೋನಲ್ಲಿ ಭಾಗವಹಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಸಂಜಿತ್ ಹೆಗ್ಡೆ, ನಂತರದ ದಿನಗಳಲ್ಲಿ ಸಂಜಿತ್ ಹೆಗ್ಡೆಗೆ ಕನ್ನಡ ಸಿನಿಮಾಗಳ ಹಾಡು ಹಾಡಲು ಅವಕಾಶಗಳು ಸಿಕ್ಕಿತು. ಇದೀಗ ಕನ್ನಡ ಮಾತ್ರವಲ್ಲದೆ ಪಂಚ ಭಾಷೆಯಲ್ಲಿ ಹಾಡುವ ಹಾಡುಗಾರನಾಗಿದ್ದು, ಕೇವಲ ಹಾಡುಗಾರಿಕೆ ಮಾತ್ರವಲ್ಲದೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.ಸಂಜಿತ್ ಹೆಗ್ಡೆ ಹಾಡಿದ ಗೀಜಗ ಹಕ್ಕಿ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದೆ. ಕೇವಲ ನೆಕ್ಲೆಸ್ ಮಾತ್ರವಲ್ಲದೆ ಸಂಜಯ್ ಹೆಗ್ಡೆಯ ಔಟ್ ಪಿಟ್ ಕೂಡ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ಸಂಜಿತ್ ಹೆಗ್ಡೆ ಕನ್ನಡ ಚಿತ್ರರಂಗದ ಉದಾಯೋನ್ಮಕ ಹಾಡುಗಾರನಾಗಿದ್ದು, ಇತ್ತೀಚಿಗೆ ಬಾಲಿವುಡ್ ವೆಬ್ ಸಿರೀಸ್ ನಲ್ಲಿ ನಟಿಸೋ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಸಂಗೀತದ ಜೊತೆ ಜೊತೆಗೆ ನಟನೆಯ ಮೂಲಕ ಸಾಗುತ್ತಿರುವ ಸಂಜಿತ್ ಹೆಗ್ಡೆ ಮುಂಬರುವ ದಿನಗಳಲ್ಲಿ ಸಂಪೂರ್ಣ ನಟನಾಗಿಯು ಕಾಣಿಸಿಕೊಳ್ಳೋ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ನಟನೆ ಸಂಗೀತದ ಜೊತೆಗೆ ಒಂದಿಷ್ಟು ವಿವಾದವನ್ನು ಈಗಾಗಲೇ ಮಾಡಿಕೊಂಡಿದ್ದು, ಸಂಜಿತ್ ಬಗ್ಗೆ ಹಲವರಿಗೆ ಇದೆ ಕಾರಣಕ್ಕೆ ಅಸಮಾಧಾನ ಕೂಡ ಇದೆ ಎನ್ನಲಾಗಿದೆ.
ಸರಿಗಮಪ ಸಿಂಗಿಂಗ್ ಶೋ ಮೂಲಕ ಎಂಟ್ರಿಕೊಟ್ಟ ಸಂಜಿತ್ ಸರಿಗಮಪ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದರು.ಸಂಜಿತ್ ಧರಿಸಿ ಡ್ರೆಸ್ ಹಾಗೂ ನಕ್ಲೆಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗೋಲ್ಡನ್ ಪ್ಯಾಚ್ ವರ್ಕ್ ಪ್ಯಾಂಟ್, ಕೋಟ್, ಸ್ಟೈಲ್ ಶರ್ಟ್ ಧರಿಸಿ ಸಂಚಿತ್ ಸ್ಟೈಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಂಜೆಜ್ ಕ್ರಿಸ್ಟಲ್ ಪಿಂಯ್ಜ್ ನಕ್ಲೆಸ್ ತೊಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಸಾಕಷ್ಟು ನಕಾರಾತ್ಮಕ ಕಾಮೆಂಟ್ ಮಾಡಿ ಸಂಜಿತ್ ಹೆಗ್ಡೆಯನ್ನ ತರಾಟೆಗೆ ತಗೆದುಕೊಂಡಿದ್ದಾರೆ.
ಸಂಜಿತ್ ಹೆಗ್ಡೆ ನಿಜಕ್ಕೂ ಹೆಣ್ಣಾಗಿ ಬದಲಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನ ಹಲವರು ಕೇಳಿದ್ದು, ಈ ಬಗ್ಗೆ ಸಂಜಿತ್ ಹೆಗ್ಡೆ ತಲೆ ಕೆಡಿಸಿಕೊಳ್ಳದೆ ತಮ್ಮ ಬಗ್ಗೆ ಮಾತನಾಡುವವರಿಗೆ ಉತ್ತರ ಕೊಡಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಇದೀಗ ಸಂಜಿತ್ ಹೆಗ್ಡೆ ನ್ಯೂ ಲುಕ್ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಕೆಲ ದಶಕಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ಟೈಲ್ ಹಲವರ ಗಮನ ಸೆಳೆಯುವ ಮೂಲಕ ನ್ಯೂ ಟ್ರೆಂಡ್ ಹುಟ್ಟುಹಾಕಿತ್ತು. ಆದರೆ ಇದೀಗ ಸಂಜಿತ್ ಹೆಗ್ಡೆ ಲುಕ್ ಕೂಡ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ.