“ಮೋಕ್ಷಿತ ಪೈ” ಈ ಹೆಸರು ಕಿರುತೆರೆಯಲ್ಲಿ ಬಹಳ ಸದ್ದು ಮಾಡುತ್ತಿದ್ದ ಹೆಸರು. ಆದರೆ ಇದೀಗ ಈ ನಟಿಯ ನೈಜ ನಟನೆಗೆ ಮರುಳಾಗಿ ಇಂದು ಪರ ಭಾಷೆ ಕಿರುತೆರೆ ಅಲ್ಲದೆ ದೊಡ್ಡ ಪರದೆಯಲ್ಲೂ ಕೂಡ ಅವಕಾಶಗಳು ಈ ನಟಿಯನ್ನು ಹುಡುಕಿಕೊಂಡು ಬರುತ್ತಿದೆ.ಈ ನಟಿ ಬಣ್ಣದ ಲೋಕಕ್ಕೆ ಬರಲು ಯಾವ ತಯಾರಿ ಹಾಗು ಇಚ್ಛೆ ಕೂಡ ಇರಲಿಲ್ಲ.ತಮ್ಮ ಮಧ್ಯಮ ವರ್ಗದ ಕುಟುಂಬದೊಂದಿಗೆ ಸುಂದರ ಜೀವನ ನಡೆಸುತ್ತಿದ್ದ ಮೊಕ್ಷಿತಾ ಪೈ ಅವರಿಗೆ ಒಂದು ದಿನ ಸ್ಯಾಂಡಲ್ವುಡ್ ನಲ್ಲಿ ‘ದಿಲೀಪ್ ರಾಜ್” ಎಂದು ಜನಪ್ರಿಯತೆ ಪಡೆದಿರುವ ನಾಟನಿಂದ ಕರೆ ಬರುತ್ತದೆ.

ಆಗಲು ಕೂಡ ತನ್ನ ನಟನೆಯ ಬಗ್ಗೆ ಯಾವ ತಯಾರಿಯು ಇಲ್ಲ ನಾನು ನಿಭಾಯಿಸಲು ಸಾಧ್ಯವಿಲ್ಲ ಎಂದು ಆ ಧಾರವಾಹಿಯನ್ನು ನಿರಾಕರಿಸಿದ್ದರು.ಆದರೆ ದಿಲೀಪ್ ರಾಜ್ ಮೊಕ್ಷಿತಾ ಅವರಿಗೆ ಧೈರ್ಯ ತುಂಬಿ ಅವರನ್ನು ಎಲ್ಲಾ ರೀತಿಯ ತರಬೇತಿಗಳನ್ನು ನೀಡಿ,ಜನರ ಮುಂದೆ ಪಾರು ಆಗಿ ಪರಿಚಯಿಸಿಕೊಟ್ಟರು.ಮೊಕ್ಷಿತಾ ಅವರಿಗೆ ಪಾರು ಧಾರವಹಿಯೇ ಮೊದಲು.ಬಣ್ಣದ ಲೋಕದ ಗಂಧ ಗಾಳಿ ತಿಳಿಯದೆ ಬೆಂಗಳೂರು ಪೇಟೆ ಬದುಕಿಗೆ ತೊಡಗಿಸಿಕೊಂಡ ಈಕೆಗೆ ಸಿಕ್ಕ ಪಾತ್ರ ಹಳ್ಳಿ ಹುಡುಗಿಯಾಗಿ.ಆದರೆ ತನ್ನ ಮೊದಲ ಪಾತ್ರದಲ್ಲಿಯೇ ಇಂದು ಮೊಕ್ಷಿತಾ ಸಾಕಷ್ಟು ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ಈ “ಪಾರು” ಧಾರಾವಾಹಿ ಶುರುವಾಗಿ 2 ವರ್ಷಗಳು ತುಂಬಿದೆ.ಹೀಗಿದ್ದರೂ ಕೂಡ ಈ ಧಾರಾವಾಹಿ ಉತ್ತಮ ಪ್ರದರ್ಶನ ಪಡೆದು ಮುನ್ನುಗುತ್ತಿದೆ.ಇನ್ನು ಈ ಪಾರು ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದೆ,”ವಿನಯಾ ಪ್ರಸಾದ್, ಎಸ್ ನಾರಾಯಣ್” ಸೇರಿದಂತೆ ಈ ಧಾರಾವಾಹಿಯಲ್ಲಿ ಸಾಕಷ್ಟು ವರ್ಷಗಳಿಂದಲೂ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು ಇದ್ದಾರೆ. ಇನ್ನು ಮೋಕ್ಷಿತಾ ಪೈ ಅವರು ಇವರೆಲ್ಲರ ಮದ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸು ಗೆದ್ದು ಇಂದು ಮನೆ ಮಗಳಾಗಿದ್ದಾರೆ.
ಇದೀಗ ಈ ನಟನೆಗೆ ಮರುಳಾಗಿ ಕನ್ನಡದ ದೊಡ್ಡ ಪರದೆಯಲ್ಲೂ ಕೂಡ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಈಗಾಗಲೇ ಮೋಕ್ಷಿತಾ ಪೈ ಅವರು ನಿರ್ಭಯಾ 2 ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಗಿದಿದ್ದು, ರಿಲೀಸ್ ಗೆ ತಯಾರಿ ನಡೆಸುತ್ತಿದ್ದಾರೆ. ಇನ್ನು ಇದರ ಬೆನ್ನಲ್ಲೇ “ದುನಿಯಾ ವಿಜಯ್” ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಮೋಕ್ಷಿತಾ ಪೈ ಅವರು ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಇದರ ಜೊತೆಗೆ ತಮಿಳಿನಲ್ಲೂ ತಮ್ಮ ಛಾಪು ಮೂಡಿಸಿದ್ದರು.
ಈ ನಟಿ ಜಿ ಕನ್ನಡದಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಅವತರಿಣಿಕೆಯಲ್ಲಿ ನಟಿಸುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ದಲ್ಲಿ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಲಿಯಲ್ಲಿ ರಿಮೇಕ್ ಆಗಿ ಮೂಡಿ ಬರುತ್ತಿದೆ. ತೆಲುಗಿನಲ್ಲಿ “ರಾಧಮ್ಮ ಕೂತುರು”, ತಮಿಳಿನಲ್ಲಿ “ಮೀನಾಕ್ಷಿ ಪೊಣ್ಣುಂಗ” ಎಂದು ಈ ಧಾರಾವಾಹಿ ಕಳೆದ ಎರಡು ತಿಂಗಳ ಹಿಂದೆ ಪ್ರಸಾರ ಆರಂಭಿಸಿತ್ತು. ಈ ಧಾರಾವಾಹಿ ತಮಿಳಿನ ಝೀ ವಾಹಿನಿಯಲ್ಲಿ ಮೂಡಿ ಬರುತ್ತಿದೆ.
ಮೋಕ್ಷಿತಾ ಪೈ ಇದರಲ್ಲಿ ಶಕ್ತಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ತಮಿಳಿನಲ್ಲೂ ಅಭಿಮಾನಿಗಳನ್ನು ಗಳಿಸಿದ್ದ ಮೋಕ್ಷಿತಾ ಪೈ ಈಗ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.ಅದೇನೆಂದರೆ ತಮಗೆ ಸಮಯದ ಅಭಾವ ಹೆಚ್ಚಾದುದರಿಂದ ಈ ತಮಿಳಿನ ಮೀನಾಕ್ಷಿ ಪೊಣ್ಣುಂಗ ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ವಿಚರವನ್ನು ಖುದ್ದಾಗಿ ಮೊಕ್ಷಿತಾ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.