ನಟಿ ವೈಷ್ಣವಿ ವೈಯಕ್ತಿಕ ವಿಚಾರದಲ್ಲಿ ಸಡನ್ ಆಗಿ ಬಿರುಗಾಳಿ ಎದ್ದಿತ್ತು. ಹೆಣ್ಣು ನೋಡುವ ಶಾಸ್ತ್ರವಾದ ಮೇಲೆ ನಟ ವಿದ್ಯಾಭರಣ್ ಕ್ಯಾರೆಕ್ಟರ್ ಬಗೆಗಿನ ಆಡಿಯೋ ಒಂದು ವೈರಲ್ ಆಗಿತ್ತು.ಇದಾದ ಮೇಲೆ ನಟಿ ವೈಷ್ಣವಿ ಇದನ್ನು ಇಲ್ಲಿಗೆ ಬಿಟ್ಟು ಬಿಡೋಣಾ ಎಂದಿದ್ದರು. ಮಗಳು ಇನ್ನೆಲ್ಲಿ ಇದೇ ದುಃಖದಲ್ಲಿ ಕೂತು ಬಿಡುತ್ತಾಳೋ ಎಂದು ಪೋಷಕರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆಯನ್ನು ಮರೆಸುವಂತೆ ಆಕ್ಟೀವ್ ಆಗಿದ್ದಾರೆ ನಟಿ ವೈಷ್ಣವಿ.

ವೈಷ್ಣವಿ ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಟ್ಯಾಟೂ ಬಗೆಗಿನ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ದಿ ರೇಸಿಂಗ್ ವುಮೆನ್ ಸಿಂಬಲ್ ಟ್ಯಾಟೂ ಹಾಕಿಸಿಕೊಂಡು ಖುಷಿ ಪಟ್ಟಿದ್ದಾರೆ. ವೈಷ್ಣವಿ ಗೌಡ ಅವರು ತಮ್ಮ ಎಡಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ʻʻಇದು ನನ್ನ ಮೊದಲ ಟ್ಯಾಟೂ ಅನುಭವ’ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ ವೈಷ್ಣವಿ.
‘ಟ್ಯಾಟೂ ಹೆಸರು -ದಿ ರೈಸಿಂಗ್ ವುಮೆನ್ ಸಿಂಬಾಲ್ʼ ಇದರ ಅರ್ಥ ಡಿವೈನ್ ಫೀಮೆಲ್ ಎನರ್ಜಿ (ಚಂದ್ರ) ಮತ್ತು ಡಿವೈನ್ ಪುರುಷ ಶಕ್ತಿ (ಸೂರ್ಯ) ಸೇರಿಕೊಂಡು ಸೃಷ್ಟಿ ಮಾಡುವ ಡಿವೈನ್ ಯೂನಿಯನ್ ವಿತ್ ಸ್ಪಿರಿಟ್. ಎತ್ತರಕ್ಕೆ ಬೆಳೆದು ಜೀವನದಲ್ಲಿ ಮುಂದೆ ನಡೆಯಲು ಇದೊಂದು ದಾರಿ’ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ. ರೈಸಿಂಗ್ ವುಮನ್ ಚಿಹ್ನೆಯು ದೈವಿಕ ಸ್ತ್ರೀ ಶಕ್ತಿಯನ್ನು (ಚಂದ್ರ) ಪ್ರತಿನಿಧಿಸುತ್ತದೆ. ದೈವಿಕ ಪುಲ್ಲಿಂಗ ಶಕ್ತಿಯೊಂದಿಗೆ (ಸೂರ್ಯ) ವಿಲೀನಗೊಂಡು ಆತ್ಮದೊಂದಿಗೆ ದೈವಿಕ ವಿಲೀನವನ್ನು ಸೃಷ್ಟಿಸುತ್ತದೆ. ಇದು ಈ ಟ್ಯಾಟೂ ಅರ್ಥ ಎಂದು ನಟಿ ವಿವರಿಸಿ ಬರೆದಿದ್ದಾರೆ.