ಇತ್ತೀಚಿಗೆ ಸಿನಿಮಾ ಸೆಲೆಬ್ರಿಟಿಗಳಲ್ಲಿ ವಿ*ಚ್ಛೇ*ದನ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೋರ್ವ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಮೇಕಾ, ಊಹಾ ದಾಂಪತ್ಯ ಜೀವನದ ಕುರಿತು ಕೆಲ ಊಹಾಪೋಹಗಳು ಹರಿದಾಡುತ್ತಿವೆ. ನಟ ಶ್ರೀಕಾಂತ್ ಮೇಕಾ ಮತ್ತು ಊಹಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ತಮ್ಮ ಪತ್ನಿಗೆ ಅವರು ವಿಚ್ಛೇದನ ನೀಡಲಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಡುತ್ತಿವೆ. ಶ್ರೀಕಾಂತ್ ಮತ್ತು ಊಹಾ 1997 ರಲ್ಲಿ ವಿವಾಹವಾದರು. ದಂಪತಿಗೆ ರೋಷನ್, ರೋಹನ್ ಮತ್ತು ಮೇಧಾ ಹೆಸರಿನ ಮೂವರು ಮಕ್ಕಳಿದ್ದಾರೆ. ಶ್ರೀಕಾಂತ್ ಮೂಲತಃ ಕರ್ನಾಟಕದವರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಸದ್ಯ ಅವರು ತೆಲುಗು ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ ಶ್ರೀಕಾಂತ್ ಮೇಕಾ ಅವರ ಫ್ಯಾನ್ಸ್ ಅಂತೂ ಇದು ನಿಜನಾ, ಸುಳ್ಳಾ ಎಂಬ ಗೊಂದಲಕ್ಕೂ ಒಳಗಾಗಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ನಟ ಶ್ರೀಕಾಂತ್ ಮೇಕಾ ತೆರೆ ಎಳೆದಿದ್ದಾರೆ.

ನಟ ಶ್ರೀಕಾಂತ್ ವದಂತಿ ಕುರಿತಾಗಿ ತೆಲುಗಿನ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ತಮ್ಮ ಪತ್ನಿ ಊಹಾ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿದ್ದಾರೆ. ‘ತನ್ನ ವೈಯಕ್ತಿಕ ಜೀವನದ ಬಗ್ಗೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿರುವುದು ಇದೇ ಮೊದಲೇನಲ್ಲ’ ಎಂದು ಶ್ರೀಕಾಂತ್ ಹೇಳಿದ್ದಾರೆ.
‘ಈ ಹಿಂದೆ ನನ್ನ ಸಾವಿನ ಕುರಿತಾಗಿಯೂ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ಇಡೀ ನನ್ನ ಕುಟುಂಬ ಆತಂಕಗೊಂಡಿತ್ತು’ ಆರ್ಥಿಕ ತೊಂದರೆಯಿಂದಾಗಿ ವಿ*ಚ್ಛೇ*ದನ ನೀಡುತ್ತಿದ್ದಾರೆ ಎಂದು ಹಬ್ಬಿಸಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಆತಂಕಗೊಂಡಿದ್ದು, ಅವಳಿಗೆ ಕಳುಹಿಸಲಾದ ಮೆಸೇಜ್ಗಳನ್ನು ನನಗೆ ತೋರಿಸಿದ್ದಾಳೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಮಾಧಾನ ಮಾಡಿದೆ’ ಎಂದು ಶ್ರೀಕಾಂತ್ ಹೇಳಿದರು.
ಕೆಲವು ಚಿಲ್ಲರೆ ವೆಬ್ಸೈಟ್ಗಳು ಮತ್ತು ಯೂಟ್ಯೂಬ್ ಚಾನೆಲ್ಗಳು ಪ್ರಸಾರ ಮಾಡುತ್ತಿರುವ ಈ ಸುದ್ದಿಯ ಬಗ್ಗೆ ಸಂಬಂಧಿಕರು ಕರೆ ಮಾಡಿ ಕೇಳುತ್ತಿದ್ದರೆ, ವಿವರಣೆ ನೀಡಲು ದೊಡ್ಡ ತೊಂದೆಯಾಗುತ್ತದೆ. ನಿನ್ನೆಯಷ್ಟೇ ನಾನು ಚೆನ್ನೈಗೆ ಬಂದೆ. ನಾವು ಅರುಣಾಚಲಂಗೆ ದೇವರ ದರ್ಶನಕ್ಕೆ ಹೋಗುತ್ತಿದ್ದೇವೆ. ಇಂತಹ ಸಮಯದಲ್ಲಿ ಬರುತ್ತಿರುವ ಈ ಸುದ್ದಿ ಬೇಸರ ತರಿಸಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.