ಬಾಲಿವುಡ್ ನ ಬಿಗ್ ಸ್ಟಾರ್ ಗಳ ಪೈಕಿ “ಶಾರುಖ್ ಖಾನ್” ಕೂಡ ಒಬ್ಬರು.ಈತ 50ರ ವಯ್ಸಿನಲ್ಲಿಯೂ ಪರಿಪೂರ್ಣ ನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡು ಬಾಕ್ಸ್ ಆಫೀಸ್ ದೊಳೆಬ್ಬಿಸುವ ಶಕ್ತಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಇದಕೆಲ್ಲಾ ಕಾರಣ ಎಂದರೆ ಇವರ ನಟನಾ ಶಕ್ತಿ.ಇವರ ನೈಜ ನಟನೆಗೆ ಸೋಲದವರಿಲ್ಲ.ಎಲ್ಲರೂ ಕೂಡ ಮೈಮರೆತು ತೆರೆಯ ಮೇಲೆ ಬರುವ ದೃಶ್ಯಗಳನ್ನು ತಮ್ಮ ಜೀವನದಲ್ಲಿ ನಮ್ಮವರಿಗೆ ನಡೆಯುತ್ತದೆ ಎಂಬ ಭಾವನೆಯನ್ನು ಹುಟ್ಟಿಸುವ ಶಕ್ತಿ ಇವರ ನಟನೆಗೆ ಇದೆ ಎಂದು ಹೇಳಬಹುದು. ಹಾಗೆಯೇ ಇಂದಿಗೂ ಕೂಡ ತಮ್ಮ ಪ್ರತಿ ಸಿನಿಮಾದಲ್ಲೂ ಕೂಡ ತನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಇವರ ನಟನೆಯಲ್ಲಿ ಎಲ್ಲರಿಗೂ ಅತಿ ಹೆಚ್ಚು ಮೆಚ್ಚುಗೆ ಸೂಚಿಸುವ ಸಹ ಕಲವಿಧರು ಎಂದರೆ ಅದು ಕಾಜಲ್.ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಆ ಸಿನಿಮಾ ಬಾಕ್ಸ್ ಆಫೀಸ್ ಹಿಡಿದು ನಿಲ್ಲಿಸಲಾಗದಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ.ಈ ಜೋಡಿಗಳಿಗೇ ತೊಂಬತ್ತರ ಧಶಕದಲ್ಲಿ ಅಲ್ಲದೆ ಇಂದಿಗೂ ಕೂಡ ಬಿ ಟೌನ್ ನಲ್ಲಿ ಬೆಲೆ ಇದೆ.ಇದು ಈ ಜೋಡಿಗಳ ನಟನೆಗೆ ಇರುವ ತಾಕತ್ತು ಎಂಬುದು ಖುಷಿಯಾದ ವಿಚಾರ.ಇನ್ನು ನಟ ಶಾರುಖ್ ಖಾನ್ ಅವರು ಯಾರಿಗೂ ಇಂದಿನ ವರೆಗೂ ತಿಳಿಯದ ವಿಚಾರವೊಂದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಆ ವಿಚಾರ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ನಟ ಶಾರುಖ್ ಅವರು ಎಲ್ಲರಿಗೂ ತಿಳಿದಿರುವ ಹಾಗೆಯೇ ಅವರು ಹುಟ್ಟಿನಿಂದಲೂ ದೆಹಲಿಯಲ್ಲಿ ಯೇ ಬೆಳದಿದ್ದಾರೆ ಎಂದು ಭಾವಿಸಿದ್ದರು.ಆದರೆ ಇಲ್ಲಿ ಎಲ್ಲರಿಗೂ ಅಚ್ಚರಿ ಪಡುವ ವಿಚಾರವೊಂದು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವ ಮುಕಾಂತರ ಎಲ್ಲರಿಗೂ ತಿಳಿಸಿದ್ದಾರೆ.ನಟ ಶಾರುಖ್ ಖಾನ್ ಮಂಗಳೂರಿನವರು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಈ ವಿಚಾರ ತಿಳಿದು ನಿಮಗೆಲ್ಲರಿಗೂ ಅಚ್ಚರಿ ಆಗುವುದು ಸಹಜ.ಮತ್ತಷ್ಟು ಮಾಹಿತಿಗಾಗಿ ಮುಂದಿನ ಸಾಲುಗಳನ್ನು ಓದಿ.
ನಮ್ಮ ಬಾಲಿವುಡ್ ಮಂದಿಗೂ ನಮ್ಮ ಕನ್ನಡಿಗರಿಗೂ ಅವಿನಾಭಾವ ಸಂಬಂಧ ಇದೆ ಎಂದರೆ ತಪ್ಪಾಗಲಾರದು. ಬಾಲಿವುಡ್ ನಲ್ಲಿ ಟಾಪ್ ಹೆಸರು ಮಾಡಿರಿವ “ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ,ಐಶ್ವರ್ಯ ರೈ” ಕೂಡ ಮಂಗಳೂರಿನವರೇ. ಇದೀಗ ಶಾರುಖ್ ಕೂಡ ಮಂಗಳೂರಿನವರು ಎಂದು ತಿಳಿದುಬಂದಿದೆ.1965ರ ನವೆಂಬರ್ 2ರಂದು ದೆಹಲಿಯಲ್ಲಿ ಜನಿಸಿದ್ದ ಶಾರುಖ್ ಖಾನ್ ಅವರನ್ನು ಅವರ ತಾಯಿ ಮಂಗಳೂರಿಗೆ ಕರೆತಂದಿದ್ದರು. ಆ ಸಮಯದಲ್ಲಿ ಸುಮಾರು ಐದು ವರ್ಷಗಳ ಕಾಲ ಮಂಗಳೂರಿನಲ್ಲಿಯೇ ಶಾರುಖ್ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದರು.ಶಾರುಖ್ ಅವರ ತಂದೆ “ಇಫ್ತಿಖರ್ ಅಹ್ಮದ್” 1960ರ ದಶಕದಲ್ಲಿ ಮಂಗಳೂರಿನಲ್ಲಿ ಮುಖ್ಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು.
ಈ ಕಾರಣದಿಂದ ಶಾರುಖ್ ತಮ್ಮ ಐದುವರ್ಷದ ಬಾಲ್ಯವಸ್ಥೆ ಯನ್ನು ನಮ್ಮ ಕಡಲತಿರಗಳ್ಳಲ್ಲಿ ಕಳೆದಿದ್ದಾರೆ.ಈ ವಿಚಾರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವುದಲ್ಲದೆ ಕೆಲ ಕಾರ್ಯಕ್ರಮಗಳಿಗೆಂದು ಬೆಂಗಳೂರಿಗೆ ಬಂದಾಗ.ನನ್ನ ಜೀವನದಲ್ಲಿ ಬೆಂಗಳೂರು ಕೂಡ ಬಹಳ ಇಷ್ಟವಾದ ಜಗಳಗಳಲ್ಲಿ ಒಂದು ಎಂದು ತಿಳಿಸಿದ್ದಾರೆ.ಅಲ್ಲದೆ ಬೆಂಗಳೂರಿನಲ್ಲಿ ಕಳೆದ ಕಾಲ ನೆನಪಿರದಿದ್ದರು. ನನಗೆ ಬೆಂಗಳೂರಿನ “ನಂದಿದುರ್ಗ ರೋಡ್, ಜಯಮಹಲ್ ಬಡಾವಣೆ ಹಾಗೂ ಪ್ಯಾಲೇಸ್ ರೋಡ್” ಸದಾ ನೆನಪಿನಲ್ಲಿರುವಂತ ಸ್ಥಳಗಳು ನೆನಪಿನಲ್ಲಿ ಇರುತ್ತದೆ ಎಂದಿದ್ದಾರೆ.ಶಾರುಖ್ ಅವರಿಗೆ ಕನ್ನಡ ಬರದಿದ್ದರೂ ಅವರ ತಾಯಿ ಕನ್ನಡ ಚೆನ್ನಾಗಿ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.