ಸರಿಯಾಗಿ ವರ್ಷದ ಹಿಂದೆ ಈ ದಿನ ( ಅಕ್ಟೋಬರ್ 29 ) ಈ ಸಮಯಕ್ಕೆ ಪ್ರತಿಯೊಬ್ಬ ಕನ್ನಡಿಗನ ವಿಷಾದಕರ ದಿನ. ಕಾರಣ ಕನ್ನಡ ಚಿತ್ರರಂಗದ ನೆಚ್ಚಿನ ನಟವಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ದಿನ. ಕಳೆದವರ್ಷ ಪುನೀತ್ ಅಭಿಮಾನಿಗಳಿಗೆ ಅಪ್ಪು ಆಸ್ಪತ್ರೆ ಸೇರಿ ನಿಧನ ಹೊಂದಿದ ನಂತರ ಲಘು ಹೃದಯಾ*ಘಾ*ತವಾಗಿದೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯನ್ನು ಹರಡಲಾಗಿತ್ತು. ಆದರೆ ಸತ್ಯಾಂಶವನ್ನು ಬಹುಬೇಗನೆ ಹೊರಬಿಟ್ಟಿರಲಿಲ್ಲ. ಹೀಗೆ ಅಂದು ಅಪ್ಪು ನಿ*ಧ*ನದ ಸುದ್ದಿಯನ್ನು ಮುಚ್ಚಿಡಲು ಕಾರಣರು ಯಾರು ಎಂಬ ವಿಷಯ ಬಹಿರಂಗವಾಗಿದೆ. ಇತ್ತೀಚೆಗಷ್ಟೇ ನಡೆದ ಅಪ್ಪು ಕಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿಯ ಆರ್ ಅಶೋಕ್ ಪುನೀತ್ ರಾಜ್ ಕುಮಾರ್ ಅವರ ನಿ*ಧ*ನದ ದಿನವನ್ನು ನೆನಪಿಸಿಕೊಂಡರು.

ಈ ದಿನ ನಾನು ನಿಮಗೆಲ್ಲ ಆ ವಿಷಯವನ್ನು ತಿಳಿಸಲೇಬೇಕು ಎಂದು ಮಾತನಾಡಿದ ಆರ್ ಅಶೋಕ್ ಅಪ್ಪು ನಿ*ಧ*ನ ಹೊಂದಿದ್ದಾರೆ ಎಂಬ ವಿಷಯವನ್ನು 3 ಗಂಟೆಗಳ ಕಾಲ ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದೆವು ಎಂದು ತಿಳಿಸಿದರು. ಆರ್ ಅಶೋಕ್ ಡಾ ರಾಜ್ ಕುಮಾರ್ ಅವರು ನಿ*ಧ*ನ ಹೊಂದಿದಾಗ ಸುದ್ದಿಯನ್ನು ಬಹುಬೇಗನೆ ಜನರಿಗೆ ತಿಳಿಸಲಾಗಿತ್ತು. ಹಾಗಾಗಿಯೇ ಅಂದು ಹಲವಾರು ಅ*ಹಿತಕರ ಘಟನೆಗಳು ನಡೆದಿದ್ದವು.
ಈ ಬಾರಿಯೂ ಅದೇ ರೀತಿ ಮಾಡಿದ್ದರೆ ಪರಿಸ್ಥಿತಿ ನಮ್ಮ ಕೈನಲ್ಲಿ ಇರುತ್ತಿರಲಿಲ್ಲ, ಹೀಗಾಗಿಯೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ತಡವಾಗಿ ನಿ*ಧ*ನದ ಸುದ್ದಿಯನ್ನು ತಿಳಿಸಿದೆವು ಎಂದು ಆರ್ ಅಶೋಕ್ ತಿಳಿಸಿದರು. ಇನ್ನು ಅಪ್ಪು ನಿ*ಧ*ನದ ವಿಷಯ ತಮಗೆ ತಿಳಿದಾಗ ತಾವು ಸಿಎಂ ಕಚೇರಿಯಲ್ಲಿ ಕುಳಿತಿದ್ದೆವು ಎಂದು ಆರ್ ಅಶೋಕ್ ತಿಳಿಸಿದರು. ಆಗ ಮುಖ್ಯಮಂತ್ರಿಗಳು ಅಪ್ಪು ನಿ*ಧ*ನ ಹೊಂದಿದ್ದಾರಂತೆ ಎಂದು ಹೇಳಿದಾಗ ಬೆಳ್ಳಂಬೆಳಿಗ್ಗೆಯೇ ತಮಾಷೆ ಮಾಡಬೇಡಿ ಸುಮ್ಮನಿರಿ ಎಂದು ವಿಷಯವನ್ನು ತಳ್ಳಿ ಹಾಕಿದ್ದೆ, ನಾನು ನಂಬಲೇ ಇಲ್ಲ ಎಂದು ಅಶೋಕ್ ಹೇಳಿದರು.
ಆದರೆ ಮುಖ್ಯಮಂತ್ರಿಗಳು ಸುದ್ದಿ ನಿಜವಂತೆ ಎಂದು ಪದೇಪದೇ ಹೇಳಿದಾಗ ಕೂಡಲೇ ಆಸ್ಪತ್ರೆಯ ವೈದ್ಯರಿಗೆ ಕರೆಮಾಡಿ ಸುದ್ದಿಯನ್ನು ಖಚಿತಪಡಿಸಿಕೊಂಡೆ ಹಾಗೂ ಯಾವುದೇ ಕಾರಣಕ್ಕೂ ಸುದ್ದಿ ಹೊರಗಡೆ ಹೋಗಬಾರದು ಗೌಪ್ಯತೆ ಕಾಪಾಡಿ ಎಂದು ವೈದ್ಯರಿಗೆ ಸಲಹೆ ನೀಡಿದೆ ಎಂದು ಅಶೋಕ್ ತಿಳಿಸಿದರು.



