ಮೊದಲಿನಿಂದಲೂ ಸಿನಿಮಾ ರಂಗ ಮತ್ತು ಕ್ರಿಕೆಟ್ ರಂಗ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಒಬ್ಬರು ಇನ್ನೊಬ್ಬರಿಗೆ ಆಕರ್ಷಣೆ ಒಳಗಾಗುವುದು ಸರ್ವೇಸಾಮಾನ್ಯ ಎನಿಸಿದೆ. ವಿರಾಟ್ ಕೊಹ್ಲಿ,ರಾಹುಲ್ ಮಹಮ್ಮದ್ ಅಜರುದ್ದೀನ್ ಅಜಯ್ ಜಡೇಜಾ ಹೀಗೆ ಹಲವಾರು ಕ್ರಿಕೆಟಿಗರು ಸಿನಿಮಾ ರಂಗದ ನಾಯಕಿಯ ಬೆಡಗು ಬಿನ್ನಾಣಕ್ಕೆ ಮನಸ್ಸು ಹೋದರೆ ಮತ್ತೆ ಕೆಲವು ನಾಯಕರು ಅವರನ್ನು ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ಮತ್ತು ತಂಡದ ಕ್ಯಾಪ್ಟನ್ ಆಗಿರುವ ಸ್ಮೃತಿ ಮಂದಾನ ಪಲಾಸ್ ಮುಚ್ಚಾಲ್ ಎಂಬವರನ್ನು ಮದುವೆಯಾಗಲಿದ್ದಾರೆ.

ಈ ವಿಷಯವನ್ನು ಪಲಾಸ್ ಮಚ್ಚಾಲ್ ರವರೆ ಸ್ವತಃ ಖುದ್ದಾಗಿ ಹೇಳಿಕೊಟ್ಟಿದ್ದಾರೆ. ಈಗಾಗಲೇ ಪಾಲಿ ಹೊಟ್ಟಿನಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪಾಲಾಸ್ ಖ್ಯಾತ ಗಾಯಕಿ ಪಲಸ್ ಮುಚ್ಚಲ್ ರವರ ಸಹೋದರ. ಬಾಲಿವುಡ್ ನ ಅತ್ಯಂತ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.ಅರ್ಧ ಮತ್ತು ಕಾಮ್ ಚಾಲೂ ಹೈ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಇದೀಗ ರಾಜು ಬಾಜಿವಾಲ ಎಂಬ ಚಿತ್ರವನ್ನು ಕೂಡ ನಿರ್ದೇಶನ ಮಾಡುತ್ತಿದ್ದಾರೆ.
ಅಕ್ಟೋಬರ್ 17 ಶುಕ್ರವಾರ ಸ್ಟೇಟ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾವಿರಿಬ್ಬರು ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದು ಇದೀಗ ಮನೆಯವರ ಒಪ್ಪಿಗೆಯ ಮೇರೆಗೆ ಶೀಘ್ರದಲ್ಲಿಯೇ ಸ್ಮೃತಿ ಇಂದೋರ್ ನ ಸೊಸೆಯಾಗಲಿದ್ದಾರೆ ಎಂದು ಪಲಾಸ್ ಹೇಳಿಕೊಂಡಿದ್ದಾರೆ. ಇನ್ನು ಅದೇ ಸಮಯದಲ್ಲಿ ಇಂದೋರ್ ನಲ್ಲಿ ಅಕ್ಟೋಬರ್ 19ರಂದು ಇಂಗ್ಲೆಂಡ್ ಜೊತೆಗೆ ಮಹಿಳಾ ವಿಶ್ವಕಪ್ ನಡೆಯಲಿದ್ದು ಭಾರತ ತಂಡ ಗೆದ್ದು ವಿಷಯಕ್ಕೆ ಕೀರ್ತಿ ತಂದು ಕೊಡಲಿ ಎಂಬುದಾಗಿ ಹಾರೈಸಿದ್ದಾರೆ.



