ನಟಿ ರಮ್ಯಾ ಅವರು 2 ದಶಕದಿಂದ ಅದೇ ಕ್ರೇಜ್ ಉಳಿಸಿಕೊಂಡಿರುವ ನಟಿ. ರಮ್ಯಾ ಅವರು 2003ರಲ್ಲಿ ಅಪ್ಪು ಅವರ ಅಭಿ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರ ಮೊದಲ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಅದಾದ ಬಳಿಕ ರಮ್ಯಾ ಅವರು ತಿರುಗಿ ನೋಡಿದ್ದೆ ಇಲ್ಲ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದರು. ಹಾಗೆಯೇ ರಾಜಕೀಯ ರಂಗಕ್ಕೆ ಕೂಡ ಎಂಟ್ರಿ ಕೊಟ್ಟರು. ಆದರೆ ಎರಡರಿಂದ ಕೂಡ ದೂರವಾದರು. ಈಗ ರಮ್ಯಾ ನಟನೆಯನ್ನು ಮಾಡಿಲ್ಲ, ರಾಜಕಾರಣದಲ್ಲಿ ಕೂಡ ಸಕ್ರಿಯವಾಗಿಲ್ಲ. ಆದರೆ ಸಾರ್ವಜನಿಕವಾಗಿ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಮ್ಯಾ ಅವರು ಒಂದು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅವರ ಬಾಲ್ಯದ ಬಗೆಗಿನ ಕೆಲವು ವಿಚಾರಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ರಮ್ಯಾ ಅವರು ಸಿನಿಮಾದಲ್ಲಿ ನಟಿಸಿ ಬಹಳ ವರ್ಷಗಳಾಗಿದೆ, ಶಿವಣ್ಣ ಅವರ ಜೊತೆಗೆ ಆರ್ಯನ್ ಸಿನಿಮಾದಲ್ಲಿ ಹಾಗೆಯೇ ನಾಗರಹಾವು ಸಿನಿಮಾದಲ್ಲಿ ಅಭಿನಯಿಸಿದ್ದೇ ಕೊನೆ, ಅದಾದ ಬಳಿಕ ಇನ್ಯಾವುದೇ ಹೊಸ ಸಿನಿಮಾದಲ್ಲಿ ರಮ್ಯಾ ಅವರು ಅಭಿನಯಿಸಿಲ್ಲ. ಇನ್ನು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರು ಅದರಿಂದಲು ಹೊರಬಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ರಮ್ಯಾ ಕಂಬ್ಯಾಕ್ ಮಾಡುತ್ತಾರೆ ಎಂದು ಸಹ ಹೇಳಲಾಗಿತ್ತು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನ್ನುವ ಸಿನಿಮಾದಲ್ಲಿ ರಮ್ಯಾ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿತ್ತು, ಆದರೆ ಅದಕ್ಕೆ ಸಂಬಂಧಿಸಿದ ವಿಷಯವೇ ಬೇರೆ ಆಗಿತ್ತು. ಆ ಸಿನಿಮಾದ ಪ್ರೊಮೋಷನ್ ಗಾಗಿ ಮಾತ್ರ ರಮ್ಯಾ ಅವರು ಬಣ್ಣ ಹಚ್ಚಿದ್ದಾರೆ, ಸಿನಿಮಾದಲ್ಲಿ ಇರುವುದಿಲ್ಲ ಎಂದು ಸ್ವತಃ ಅವರೇ ತಿಳಿಸಿ, ಕೇಸ್ ಸಹ ಹಾಕಿದರು.
ಇನ್ನು ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ಕೂಡ ರಮ್ಯಾ ಅವರೇ ನಟಿಸಬೇಕಿತ್ತು, ಆದರೆ ಅದರಿಂದಲೂ ದೂರ ಉಳಿದರು, ನಿರ್ಮಾಣದ ಜವಾಬ್ದಾರಿಯನ್ನು ಮಾತ್ರ ತೆಗೆದುಕೊಂಡರು ರಮ್ಯಾ. ಇನ್ನು ಡಾಲಿ ಧನಂಜಯ್ ಅವರ ಜೊತೆಗೆ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆ ಎನ್ನಲಾಯಿತು, ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಇಂದಲೂ ದೂರವೇ ಉಳಿದಿದ್ದಾರೆ. ಒಟ್ಟಿನಲ್ಲಿ ರಮ್ಯಾ ನಟನೆಗೆ ಕಂಬ್ಯಾಕ್ ಮಾಡುತ್ತಾರೆ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಶೆಯೇ ಆಗಿದೆ. ಸ್ವಲ್ಪ ಸಮಯ ಸಾರ್ವಜನಿಕ ಜೀವನದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಅವರು ಇದೀಗ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ನಡೆದ ನಟಿ ರಕ್ಷಿತಾ ಅವರ ತಮ್ಮನ ಮದುವೆ ರಿಸೆಪ್ಶನ್ ಗೆ ರಮ್ಯಾ ಅವರು ಬಂದಿದ್ದರು, ಬಹಳ ವರ್ಷಗಳ ನಂತರ ರಮ್ಯಾ ಮತ್ತು ರಕ್ಷಿತಾ ಇಬ್ಬರನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.

ಹೀಗೆ ರಮ್ಯಾ ಅವರು ಆಗಾಗ ಕೆಲವು ವಿಚಾರಕ್ಕೆ ಸುದ್ದಿಯಾಗುತ್ತಾರೆ. ಇದೀಗ ರಮ್ಯಾ ಅವರು ಚಂದನವನದ ಮತ್ತೊಬ್ಬ ನಟಿ ಶುಭ್ರ ಅಯ್ಯಪ್ಪ ಅವರು ಹೊಸದಾಗಿ ಶುರು ಮಾಡಿರುವ ಪಾಡ್ ಕಾಸ್ಟ್ ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಂದೆ ಇಲ್ಲದೆಯೇ ತಾವು ಪಟ್ಟ ಕಷ್ಟಗಳು ಇದೆಲ್ಲದರ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಶುಭ್ರ ಅಯ್ಯಪ್ಪ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ, ಆದರೆ ಇವರು ನಟಿಸಿದ್ದು ಬಹಳ ಕಡಿಮೆ ಸಿನಿಮಾಗಳಲ್ಲಿ. ಶಿವಣ್ಣ ಅವರ ಜೊತೆಗೆ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು ಶುಭ್ರ ಅಯ್ಯಪ್ಪ. ಇದೀಗ ಇವರು ಹೊಸದಾಗಿ ಪಾಡ್ ಕಾಸ್ಟ್ ಇಂಟರ್ವ್ಯೂ ಶುರು ಮಾಡಿದ್ದು, ರಮ್ಯಾ ಅವರು ಅತಿಥಿಯಾಗಿ ಬಂದಿದ್ದಾರೆ. ಇವರ ಇಂಟರ್ವ್ಯೂ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ರಮ್ಯಾ ಅವರು ಈ ಬಾರಿ ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ್ದಾರೆ, ರಮ್ಯಾ ಅವರು ತಮ್ಮ ತಂದೆಯನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು, ಅವರ ತಾಯಿ ಸಿಂಗಲ್ ಪೇರೆಂಟ್, ಊಟಿಯಲ್ಲಿ ಇದ್ದಾಗ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಂತೆ ರಮ್ಯಾ ಅವರ ತಾಯಿ. ಚಿಕ್ಕಂದಿನಲ್ಲಿ ರಮ್ಯಾ ಅವರು ತುಂಬಾ ಮಾತನಾಡುತ್ತಾ ಇದ್ದರಂತೆ, ಆದರೆ ಅಪ್ಪನನ್ನು ಕಳೆದುಕೊಂಡು, ಅಪ್ಪನ ಪ್ರೀತಿ ಇಲ್ಲದೆಯೇ ಬಹಳ ಸೈಲೆಂಟ್ ಆಗಿಬಿಟ್ಟರಂತೆ. ಎಲ್ಲರೂ ಅವರವರ ತಂದೆಯ ಬಗ್ಗೆ ಹೇಳಿಕೊಳ್ಳುವಾಗ, ರಮ್ಯಾ ಅವರು ತಮ್ಮ ತಾಯಿಯ ಹೆಸರನ್ನು ಹೇಳುತ್ತಿದ್ದರಂತೆ. ರಮ್ಯಾ ಅವರಿಗೆ ಸರ್ ನೇಮ್ ಇಲ್ಲ ಎನ್ನುವುದು ಅವರ ಶಾಲೆಯ ಬೇರೆ ಮಕ್ಕಳಿಗೆ ವಿಚಿತ್ರ ಎನ್ನಿಸುತ್ತಿತ್ತಂತೆ. ಇನ್ನು ಜಾಸ್ತಿ ಮಾತನಾಡುತ್ತಿದ್ದ ರಮ್ಯಾ ಅವರು, ಎಲ್ಲರ ಜೊತೆ ಮಾತನಾಡಿದರೆ ವೈಯಕ್ತಿಕ ವಿಚಾರ ಹೇಳಿಕೊಳ್ಳಬೇಕಾಗುತ್ತದೆ ಎಂದು..
ಮಾತನಾಡೋದನ್ನೇ ಕಡಿಮೆ ಮಾಡಿಬಿಟ್ಟರಂತೆ. ಅದರಲ್ಲೂ ಚಿತ್ರರಂಗಕ್ಕೆ ಬಂದಮೇಲೆ ರಮ್ಯಾ ಅವರು ಯಾರ ಜೊತೆಗೂ ಜಾಸ್ತಿ ಮಾತನಾಡುತ್ತಾ ಇರಲಿಲ್ಲವಂತೆ, ಅಂತರ್ಮುಖಿಯಾಗಿ ತಮ್ಮ ಪಾಡಿಗೆ ತಾವು ಇರುತ್ತಿದ್ದರಂತೆ. ಹೀಗೆ ಸೈಲೆಂಟ್ ಆಗಿದ್ದು ನಟಿ ರಮ್ಯಾ. ಅಪ್ಪನ ಪ್ರೀತಿ ಸಿಗದೇ, ಅಪ್ಪ ಇಲ್ಲದೇ ಬೆಳೆದಿದ್ದು ಜೀವನದಲ್ಲಿ ಬಹಳ ಕಷ್ಟ ನೋಡಿರೋದಾಗಿ ಹೇಳಿದ್ದಾರೆ ರಮ್ಯಾ. ಇನ್ನು ಈಗ ಅವರ ಮದುವೆ ವಿಚಾರ ಕೂಡ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ ಎನ್ನುವ ವಿಷಯ ಕೂಡ ನಮಗೆ ಗೊತ್ತೇ ಇದೆ. ಯಾರ್ ಯಾರ ಜೊತೆಗೂ ಮದುವೆ ಆಗುತ್ತಿದೆ ಎಂದು ಸುದ್ದಿ ಹಬ್ಬಿಸಿ ಬಿಡುತ್ತಾರೆ, ಅದರಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂದಿದ್ದಾರೆ ರಮ್ಯಾ. ಇನ್ನು ಶೀಘ್ರದಲ್ಲೇ ಚಿತ್ರರಂಗಕ್ಕೆ ಕಂಬ್ಯಾಕ್ ಕೂಡ ಮಾಡುವುದಾಗಿ ತಿಳಿಸಿದ್ದಾರೆ. ರಮ್ಯಾ ಫ್ಯಾನ್ಸ್ ಗೆ ಇದು ಒಂದು ರೀತಿ ಗುಡ್ ನ್ಯೂಸ್..



