ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಿ, ಸರ್ಕಾರ ತೀರ್ಮಾನ ಕೈಗೊಂಡಿದೆ. ಸಂಪುಟ ಸಭೆಯಲ್ಲಿ ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ತಕ್ಷಣದಿಂದಲೇ ಹೆಸರು ಬದಲಾವಣೆ ಜಾರಿಯಾಗಿದೆ. ಹೆಸರು ಬದಲಾವಣೆ ವಿಚಾರವಾಗಿ ಬಾರೀ ವಿರೋಧ ಕೇಳಿ ಬಂದಿತ್ತು. ಆದರೂ ಡಿಕೆ ಶಿವಕುಮಾರ್ ಅವರ ಒತ್ತಡದಿಂದ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲೂ ಡಿಕೆ ಹಾಗೂ ಹೆಚ್ ಡಿಕೆ ನಡುವೆ ರಾಮನಗರದ ವಾರ್ ಜೋರಾಗ್ತಾ ಇದೆ.
2024 ರ ಜುಲೈನಲ್ಲಿ ಈ ಪ್ರಸ್ತಾವನೆಯನ್ನ ಸಚಿವ ಸಂಪುಟದ ಮುಂದೆ ಇಡಲಾಗಿತ್ತು. ಬಳಿಕ ಸಂಪುಟ ಕೂಡ ಒಪ್ಪಿಗೆ ನೀಡಿತ್ತು. ಬಳಿಕ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನ ಕೇಂದ್ರ ಗೃಹ ಇಲಾಖೆ ಕಳುಹಿಸಿತ್ತಾದರೂ ಅದನ್ನ ಕೇಂದ್ರ ತಿರಸ್ಕಾರ ಮಾಡಿತ್ತು. ಪ್ರಸ್ತಾವನೆ ಮುಂದುವರೆಸದೇ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಇದರ ಹಿಂದೆ ಬಿಜೆಪಿ ಹಾಗೂ ಕುಮಾರಸ್ವಾಮಿ ಕೈವಾಡ ಇದೆ ಅಂತಲೂ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಶತಾಯಗತಾಯ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡಲು ಡಿಕೆಶಿ ಅಂಡ್ ಟೀಮ್ ನಿರ್ಧಾರ ಮಾಡಿತ್ತು.

ರಾಮನಗರ ಜಿಲ್ಲೆಗೆ ಮರುನಾಮಕರಣ ಹೇಗೆ ಮಾಡಬೇಕೆಂದು ಗೊತ್ತಿದೆ. ನಾನು ಮಾಡೇ ಮಾಡ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಡಿ ಕೆ ಶಿವಕುಮಾರ್ ಶಪಥ ಮಾಡಿದ್ರು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮರುಮಂಡನೆ ಮಾಡಿ, ಬೆಂಗಳೂರು ದಕ್ಷಣಿ ಜಿಲ್ಲೆಯೆಂದು ಮರುನಾಮಕರಣ ಮಾಡಲಾಗಿದೆ.ಜಿಲ್ಲಾ ಮುಖ್ಯ ಸ್ಥಳ ರಾಮನಗವಾಗಿಯೇ ಇರಲಿದೆ.
ಇತ್ತ ಸರ್ಕಾರದ ಈ ನಿರ್ಧಾರಕ್ಕೆ ಈಗ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಗೆ ಮಾತಿನಲ್ಲೇ ಜಾಡಿಸಿದ್ದಾರೆ. ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಆಗಿದೆ. ಎಲ್ಲರ ಮನೆಗೆ ಚಿನ್ನದ ತಗಡು ಕೊಡ್ತಾರಾ. ರಾಮನಗರ ಜಿಲ್ಲೆಗೆ ಏನು ಕೊಡುಗೆ. ನಾನು ರಾಮನ ಹೆಸರು ಇಟ್ಟಿದ್ದೇ ಅಂತಾ ಹೇಳಲ್ಲ. ಆದ್ರೆ, ಇವರು ಬದಲಾವಣೆ ಮಾಡಿ ಏನು ಸಾಧನೆ ಅಂತಾ ಹೇಳಲ್ಲ. ಕೆಂಗಲ್ ಹನುಮಂತಯ್ಯ ಹೆಸರು ಇಟ್ಟಿದ್ರೆ ಆಗ್ತಿತ್ತು. ಮೂರು ಜನ ಸಿಎಂ ಕೊಟ್ಟ ತಾಲೂಕು ರಾಮನಗರ. ವಿರೋಧ ಮಾಡುವವರು ಅಂದೇ ಯಾಕೆ ಮಾಡಲಿಲ್ಲ. ರಾಮನಗರಕ್ಕೆ ಒಂದು ಇತಿಹಾಸ ಇದೆ. ಬೆಂಗಳೂರಿಗೆ ಎಂಟು ದಿಕ್ಕುಗಳಿವೆ. ರಾಮನಗರ ಜಿಲ್ಲೆ ಆದಾಗಿನಿಂದಲೂ ಮನೆ ಬಾಗಿಲಿಗೆ ಕೆಲಸ ಆಗ್ತಿತ್ತು

ಕೇಂದ್ರ ಸರ್ಕಾರಕ್ಕೆ ಹೆಸರು ಬದಲಾವಣೆ ವಿಚಾರವೂ ನನಗೆ ಗೊತ್ತಿಲ್ಲ. ಈಗ ಇವರು ಇಟ್ಟಿದ್ದಾರೆ, ಎಷ್ಟು ದಿನ ಇವರು ಇರ್ತಾರೆ. ಮುಂದೆ ಬದಲಾವಣೆ ಆಗುತ್ತೆ, ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಹಲವಾರು ಕಾರ್ಯಕ್ರಮ ಕೊಟ್ಟಿದ್ದೇನೆ. ಹಲವಾರು ಕೊಡುಗೆ ಕೊಟ್ಟಿದ್ದೇನೆ. ಈ ಡಿಕೆ ಶಿವಕುಮಾರ್ ಗೆ ಏನು ಗೊತ್ತು. ನಾನು ಏನು ಕೊಡುಗೆ ಕೊಟ್ಟಿದ್ದೇನೆ ಅಂತ.
ಇವರ ಕೊಡುಗೆ ಏನು ಹಾಗಾದ್ರೆ. ಏನು ಕೊಟ್ಟಿದ್ದಾರೆ ಇವರು ಅಂತ ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಈ ರಾಮನಗರ ವಿಚಾರವಾಗಿ ಡಿಕೆಶಿ ಹಾಗೂ ಹೆಚ್ ಡಿಕೆ ನಡುವೆ ವಾರ್ ಜೋರಾಗ್ತಾ ಇದೆ. ಇವರೇನು ಇಲ್ಲೇ ಇರ್ತಾರಾ ನೋಡೋಣ ಅನ್ನೊ ಮೂಲಕ ಮುಂದೆ ಅವರ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹೆಸರು ಬದಲಾವಣೆ ಮಾಡುವ ಸೂಚನೆ ಕೊಟ್ಟಂತಾಗಿದೆ.



