ಇಂದು ಎಲ್ಲಾ ಅಭಿಮಾನಿಗಳ ಪಾಲಿನ ಡಿಬಾಸ್ ಆಗಿ ನಟ ದರ್ಶನ್ ಅವರು ಮಿಂಚುತ್ತಿದ್ದಾರೆ. ದರ್ಶನ್ ಅಂದ್ರೆ ಎಲ್ಲಾ ಅಭಿಮಾನಿಗಳಿಗೆ ಪ್ರಾಣ, ಏನೇ ನಡೆದರು ದರ್ಶನ್ ಅವರನ್ನು ಅಭಿಮಾನಿಗಳು ಬಿಟ್ಟುಕೊಡೋದಿಲ್ಲ. ಎಲ್ಲಾ ಪರಿಸ್ಥಿತಿಗಳಲ್ಲಿ ಸಹ ದರ್ಶನ್ ಅವರ ಜೊತೆಗೆ ಅಭಿಮಾನಿಗಳು ನಿಲ್ಲುತ್ತಾರೆ. ಇವರಿಗೆ ಇರುವಂಥ ಮಾಸ್ ಫ್ಯಾನ್ ಬೇಸ್ ಈಗಿನ ಬೇರೆ ಕನ್ನಡ ನಟರಿಗೆ ಇಲ್ಲ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳು ದರ್ಶನ್ ಅವರನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ. ಇಂದು ಡಿಬಾಸ್ ಆಗಿರುವ ದರ್ಶನ್ ಅವರು ಬೆಳೆದು ಬಂದ ಹಾದಿ ಸುಲಭದ ಹಾದಿ ಅಂತೂ ಆಗಿರಲಿಲ್ಲ. ಸಾಕಷ್ಟು ಕಷ್ಟಗಳು, ಅವಮಾನಗಳು ಎಲ್ಲವನ್ನು ಸಹಿಸಿಕೊಂಡು ದರ್ಶನ್ ಅವರು ಈ ಹಂತವನ್ನು ತಲುಪಿದ್ದಾರೆ. ಅವರ ಕೆರಿಯರ್ ಶುರುವಿನ ದಿನಗಳ ಒಂದು ಘಟನೆ ಬಗ್ಗೆ ಇಂದು ತಿಳಿಯೋಣ..
ನಟ ದರ್ಶನ್ ಅವರು ಸ್ಟಾರ್ ಆಗೋ ಮೊದಲು ಬಹಳ ಕಷ್ಟ ಪಟ್ಟಿದ್ದಾರೆ. ಕನ್ನಡದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಮಗ ಆಗಿದ್ದರು ಸಹ, ಇವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶ ಸಿಗಲಿಲ್ಲ. ದರ್ಶನ್ ಅವರು ಕೆರಿಯರ್ ಶುರು ಮಾಡಿದ್ದು ಲೈಟ್ ಬಾಯ್ ಆಗಿ. ಬಿ.ಸಿ ಗೌರಿ ಶಂಕರ್ ಅವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಮಹಾಭಾರತ ಎನ್ನುವ ಧಾರಾವಾಹಿಯಲ್ಲಿ ನಟಿಸಿದರು. ಶಿವ ರಾಜ್ ಕುಮಾರ್ ಅವರ ದೇವರ ಮಗ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು, ತಮಿಳಿನ ಒಂದು ಸಿನಿಮಾದಲ್ಲಿ ಸಹ ಕಾಣಿಸಿಕೊಂಡರು. ಬಳಿಕ ಕನ್ನಡದಲ್ಲಿ ಇವರಿಗೆ ಎಲ್ಲಾರ ಮನೆ ದೋಸೆನು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಸಿನಿಮಾ ನಂತರ ಭೂತಯ್ಯನ ಮಕ್ಕಳು ಸೇರಿದಂತೆ ಇನ್ನು ಒಂದೆರಡು ಸಿನಿಮಾಗಳಲ್ಲಿ ನಟಿಸಿದರು.

ದರ್ಶನ್ ಅವರು ಎಲ್ಲಾರ ಮನೆ ದೋಸೆನು ಸಿನಿಮಾದಲ್ಲಿ ನಟಿಸಿದ್ದು ವಿಲ್ಲನ್ ಪಾತ್ರದಲ್ಲಿ. ಈ ಸಿನಿಮಾದಲ್ಲಿ ಶ್ರುತಿ ಅವರು, ರಾಮ್ ಕುಮಾರ್ ಅವರು, ಉಮಾಶ್ರೀ ಅವರು, ಮೋಹನ್ ಅವರು, ಭಾವನಾ ಅವರು, ಶ್ರೀನಿವಾಸ್ ಮೂರ್ತಿ ಅವರು ಹೀಗೆ ಸಾಕಷ್ಟು ದೊಡ್ಡ ಕಲಾವಿದರೇ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಅವರು ಅಭಿನಯಿಸುವಾಗ, ಅವರಿಗೆ ಸ್ಟಾರ್ ನಟನಿಂದ ಆದ ಅವಮಾನದ ಬಗ್ಗೆ ಇತ್ತೀಚೆಗೆ ರಘುರಾಮ್ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಘುರಾಮ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳನ್ನು ಶೇರ್ ಮಾಡುತ್ತಾರೆ, ಯಾರಿಗೂ ಗೊತ್ತಿರದ ವಿಚಾರಗಳನ್ನು ಸಹ ರಿವೀಲ್ ಮಾಡುತ್ತಾರೆ, ಕಲಾವಿದರು ಮತ್ತು ತಂತ್ರಜ್ಞರ ಸಂದರ್ಶನಗಳನ್ನು ಸಹ ಮಾಡುತ್ತಾರೆ..

ಹೀಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಾಕಷ್ಟು ಒಳ್ಳೆಯ ಕಾಂಟೆಂಟ್ ಗಳನ್ನು ಜನರಿಗೆ ಕೊಡುತ್ತಲೇ ಬಂದಿದ್ದಾರೆ. ಇದೀಗ ಇವರು ದರ್ಶನ್ ಅವರಿಗೆ ಸಂಬಂಧಿಸಿದ ಹಾಗೆ ಈ ಒಂದು ವಿಚಾರವನ್ನು ತಿಳಿಸಿದ್ದಾರೆ. ಎಲ್ಲಾರ ಮನೆ ದೋಸೆನು ಸಿನಿಮಾ ಶೂಟಿಂಗ್ ನಡೆಯುವಾಗ, ರಘುರಾಮ್ ಅವರು ತಾರೆಗಳ ತೋಟ ಎನ್ನುವ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರಂತೆ. ಆಗಷ್ಟೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದ ದರ್ಶನ್ ಅವರ ಸಂದರ್ಶನ ಮಾಡಬೇಕು ಎಂದು ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದರಂತೆ. ಆಗ ದರ್ಶನ್ ಅವರು ಸೂಟ್ ಧರಿಸಿ ಸ್ಟೈಲ್ ಆಗಿ ಬಂದಿದ್ದರು. ಕೇಶವಣ್ಣ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದರು,, ನಮ್ಮ ತೂಗಣ್ಣನ ಮಗ ಅಲ್ವಾ ಎಂದು ಬಹಳ ಸಂತೋಷ ಪಟ್ಟಿದ್ದರು.
ದರ್ಶನ್ ಅವರಿಗೆ ಚೆನ್ನಾಗಿ ಮೇಕಪ್ ಮಾಡಿ, ಸುಂದರವಾಗಿ ಕಾಣಿಸುವಂತೆ ಮಾಡಿದ್ದರು. ದರ್ಶನ್ ಅವರು ಹಾಗೆಯೇ ಬಂದು, ಚೆನ್ನಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದೆಲ್ಲವು ಆದ ನಂತರ ಸೆಟ್ ಗೆ ಬಂದ ಸ್ಟಾರ್ ಹೀರೋ ಒಬ್ಬರು, ಯಾರಿದು ಎಂದು ಕೇಳಿದ್ದಾರೆ, ಆಗ ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಎಂದು ಹೇಳಿದ್ದಕ್ಕೆ, ತುಂಬಾ ಬೆಳ್ಳಗಿದ್ದಾರೆ, ಅಷ್ಟು ಮೇಕಪ್ ಯಾಕೆ ಮಾಡಿದ್ದೀರಾ? ಸ್ವಲ್ಪ ಡಲ್ ಮಾಡಿ ಎಂದು ಹೇಳಿದರಂತೆ. ಆಗ ಕೇಶವಣ್ಣ ಅವರಿಗೆ ತುಂಬಾ ಬೇಸರ ಆಗಿ, ನಾನು ಮಾಡೋದಿಲ್ಲ ಅವನು ಚೆನ್ನಾಗಿ ಕಾಣಿಸಬೇಕು ಅಂತ ಮೇಕಪ್ ಮಾಡಿರೋದು ಎಂದು ಹೇಳಿ, ಕಣ್ಣೀರು ಹಾಕಿ ಅವರ ಅಸಿಸ್ಟೆಂಟ್ ಕೈಯಲ್ಲಿ ಸರಿ ಮಾಡಿಸಿದ್ದರಂತೆ. ಕೇಶವಣ್ಣ ಅವರ ಈ ಮಾತುಗಳನ್ನ ಕೇಳಿ ದರ್ಶನ್ ಅವರು ತುಂಬಾ ಭಾವುಕರಾಗಿದ್ದರಂತೆ.

ಅಂದು ಈ ಘಟನೆ ನಡೆದ ಬಳಿಕ ದರ್ಶನ್ ಅವರು ಕಣ್ಣೀರು ಹಾಕಿದ್ದರು, ಅದಕ್ಕೆ ನಾನೇ ಸಾಕ್ಷಿ ಎಂದು ರಘುರಾಮ್ ಅವರು ಹೇಳಿದ್ದಾರೆ. ದರ್ಶನ್ ಅವರ ಬಗ್ಗೆ ಈ ಥರದ ಘಟನೆಗಳ ಬಗ್ಗೆ ಕೇಳಿದರೆ ಅವರು ಎಷ್ಟು ಕಷ್ಟಪಟ್ಟು ಇಲ್ಲಿಯವರೆಗೂ ಬೆಳೆದು ಬಂದಿದ್ದಾರೆ ಎಂದು ಗೊತ್ತಾಗುತ್ತದೆ. ಎಲ್ಲಾರ ಮನೆ ದೋಸೆನು ಸಿನಿಮಾ ನಂತರ ಇನ್ನು ಒಂದೆರಡು ಸಿನಿಮಾಗಳಲ್ಲಿ ದರ್ಶನ್ ಅವರು ನಟಿಸಿದರು, ಬಳಿಕ ಅವರಿಗೆ ಮೆಜೆಸ್ಟಿಕ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೆಜೆಸ್ಟಿಕ್ ಸಿನಿಮಾದ ಆ ದಾಸ ಪಾತ್ರ ದರ್ಶನ್ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕೀರ್ತಿ ತಂದುಕೊಟ್ಟಿತು ಎಂದು ನಮಗೆಲ್ಲ ಗೊತ್ತೇ ಇದೆ. ಈ ಒಂದು ಸಕ್ಸಸ್ ನಂತರ ದರ್ಶನ್ ಅವರು ಹಿಂದಿರುಗಿ ನೋಡಿದ್ದೆ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಸಿನಿಮಾಗಳು ಹಿಟ್ ಆಗ ತೊಡಗಿದವು.
ದರ್ಶನ್ ಅವರು ಚಾಲೆಂಜಿಂಗ್ ಸ್ಟಾರ್ ಆಗು ಬೆಳೆದಿದ್ದು ಈ ರೀತಿಯಾಗಿ, ದರ್ಶನ್ ಅವರಿಗೆ ಸಿಕ್ಕಿರುವ ಫ್ಯಾನ್ ಬೇಸ್ ಸಹ ಅದೇ ರೀತಿ ಇದೆ. ಏನೇ ಆದರೂ ಸಹ ಅವರ ಅಭಿಮಾನಿಗಳು ದರ್ಶನ್ ಅವರನ್ನು ಬಿಟ್ಟುಕೊಡುತ್ತಿಲ್ಲ. ಇಂದು ಡಿಬಾಸ್ ಎಂದು ಅವರನ್ನು ಕರೆಯುತ್ತಾರೆ, ದರ್ಶನ್ ಅವರು ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಎಂದು ಹೇಳಿದರು ಸಹ ತಪ್ಪಲ್ಲ. ಕೆಲವು ವಿಚಾರಗಳಲ್ಲಿ ತಪ್ಪು ನಡೆದಿದೆ, ಆದರೆ ಅಷ್ಟೇ ಚೆನ್ನಾಗಿ ಒಳ್ಳೆಯ ಕೆಲಸಗಳು ಸಹ ನಡೆದಿದೆ, ಅವಮಾನಗಳನ್ನು ಸಹ ದರ್ಶನ್ ಅವರು ಅನುಭವಿಸಿದ್ದಾರೆ. ಅದೇ ಕಾರಣಕ್ಕೆ ದರ್ಶನ್ ಅವರು ಇಂದು ಅಭಿಮಾನಿಗಳ ಮನಸ್ಸಿನಲ್ಲಿ ಅಷ್ಟು ದೊಡ್ಡ ಸ್ಥಾನ ಸಂಪಾದನೆ ಮಾಡಿಕೊಂಡಿದ್ದಾರೆ. ದರ್ಶನ್ ಅವರ ಕ್ರೇಜ್ ಸದಾ ಹೀಗೆ ಇರಲಿ ಎಂದು ಹಾರೈಸೋಣ.