ಪ್ರತಿದಿನ ಬೆಳಗ್ಗೆ ಏಳುತ್ತಿದ್ದಂತೆ ದೇವರ ಮಂತ್ರ ಜಪಿಸಿ, ದೇವರ ಫೋಟೋ ನೋಡಿ ಈ ದಿನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಗ್ರಹಗತಿಗಳು ನಿಮ್ಮ ಪರವಾಗಿದ್ದರೆ ಖಂಡಿತ ದಿನ ಚೆನ್ನಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಸಮಸ್ಯೆ ಬೆನ್ನೇರುತ್ತದೆ. ಇಂದು 5 ಡಿಸೆಂಬರ್ 2024, ಗುರುವಾರ. ಈ ದಿನ 12 ರಾಶಿಗಳಿಗೆ ದಿನ ಹೇಗಿರಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ದಿನ ಭವಿಷ್ಯ ನೋಡಿ.
ಮೇಷ ರಾಶಿ
ಕೆಲಸದ ಹೊರೆ ಹೆಚ್ಚಾಗಲಿದೆ. ನಿಮ್ಮಿಂದ ಕೆಲವರು ಹಣಕಾಸಿನ ಸಹಾಯ ಬಯಸುತ್ತಾರೆ. ಯಾರಿಗೂ ಸಾಲ ಕೊಟ್ಟು ಹಣ ಕಳೆದುಕೊಳ್ಳದಿರಿ. ನಿಮ್ಮನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಜನರಿಂದ ದೂರ ಉಳಿಯಿರಿ. ಇಂದು ಪ್ರಮುಖ ಭೂ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಿರಿ, ಆತ್ಮೀಯರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಪ್ರಾಮಾಣಿಕ ಪ್ರೀತಿಯನ್ನು ಅನುಮಾನಿಸದಿರಿ. ಇದು ಮುಂದೆ ನಿಮ್ಮ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗುವಂತೆ ಮಾಡಬಹುದು.
ವೃಷಭ ರಾಶಿ
ತಾಯಿಯ ಕಡೆಯಿಂದ ಧನಸಹಾಯ ದೊರೆಯಲಿದೆ. ಸ್ನೇಹಿತರ ಸಹಾಯದಿಂದ ನಿಮಗೆ ಹೊಸ ಸಂಪರ್ಕ ದೊರೆಯಲಿದೆ. ಕಚೇರಿಯಲ್ಲಿ ಕೆಲಸದ ವಾತಾವರಣ ಚೆನ್ನಾಗಿರಲಿದೆ. ಇಂದು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂಬಂಧಗಳ ಪ್ರಾಮುಖ್ಯತೆ ಅರ್ಥವಾಗುತ್ತದೆ. ನಿಮ್ಮ ಸಂಗಾತಿ ಹಾಗೂ ನಿಮ್ಮ ನಡುವಿನ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆ ಕಾಡಲಿದೆ.
ಮಿಥುನ ರಾಶಿ
ಆರೋಗ್ಯದ ಕಡೆ ಗಮನ ನೀಡಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭಿರವಾಗಿರಬಹುದು. ಪರಿಚಿತ ಜನರಿಂದ ನೀವು ತೊಂದರೆಗೆ ಒಳಗಾಗಬಹುದು ಎಚ್ಚರದಿಂದಿರಿ. ಪ್ರೇಮಿಯೊಂದಿಗೆ ಪ್ರಾಮಾಣಿಕತೆಯಿಂದ ಇರಿ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ದಿನ ಚೆನ್ನಾಗಿದೆ. ಕುಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯಲಿದ್ದೀರಿ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕಟಕ ರಾಶಿ
ಯೋಗ ಮತ್ತು ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ಇಡೀ ದಿನ ನೀವು ಲವಲವಿಕೆಯಿಂದ ಇರುವಿರಿ. ಖರ್ಚು ಕಡಿಮೆ ಮಾಡಿ ಉಳಿತಾಯದ ಕಡೆ ಗಮನ ಹರಿಸಿ. ಜನರನ್ನು ನೀವು ಮಾತಿನಂದಲೇ ಮೋಡಿ ಮಾಡುವಿರಿ. ಅವಕಾಶಗಳು ನಿಮ್ಮನ್ನು ಹುಡುಕಿ ಬರಲು ಕಾಯಬೇಡಿ, ನೀವೇ ಅವಕಾಶಗಳನ್ನು ಹುಡುಕಿ ಹೋಗಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಸಿಂಹ ರಾಶಿ
ನಿಮ್ಮ ತಂದೆ ನೀಡುವ ಸಲಹೆಯನ್ನು ಪರಿಗಣಿಸಿ. ಆತ್ಮೀಯ ಸ್ನೇಹಿತರೊಂದಿಗೆ ಕಾಲ ಕಳೆಯಲಿದ್ದೀರಿ. ವೃತ್ತಿ ಜೀವನ ಚೆನ್ನಾಗಿದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಜಗಳ, ಕಿರಿಕಿರಿ ಅನುಭವಿಸಲಿದ್ದೀರಿ. ಬ್ಯುಸಿ ಕೆಲಸಗಳ ನಡುವೆ ಸಂಗಾತಿಯನ್ನು ಕಡೆಗಣಿಸಿ ದೂರು ಮಾಡಿಕೊಳ್ಳದಿರಿ. ಏನೇ ಪರಿಸ್ಥಿತಿ ಇದ್ದರೂ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ. ಆರೋಗ್ಯದತ್ತ ಹೆಚ್ಚಿನ ಕಾಳಜಿ ಅಗತ್ಯ.
ಕನ್ಯಾ ರಾಶಿ
ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಿಂದಾಗಿ ನೀವೇ ಟೀಕೆಗೆ ಒಳಗಾಗುವಿರಿ. ಆತ್ಮೀಯರೊಂದಿಗೆ ಪಾರ್ಟಿಗಾಗಿ ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಉಳಿತಾಯ ಮಾಡುವತ್ತ ಕೂಡಾ ಗಮನ ನೀಡಿ. ಮಕ್ಕಳ ಶಾಲಾ ಚಟುವಟಿಕೆಗಳಿಗೆ ಸಹಾಯ ಮಾಡುವಿರಿ. ಪ್ರೇಮಿಯಿಂದ ನಿರಾಶೆ ಅನುಭವಿಸುವಿರಿ. ವೈವಾಹಿಕ ಜೀವನದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಿ.
ತುಲಾ ರಾಶಿ
ಈ ದಿನ ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳಲ್ಲಿ ಬಹಳ ಆಸಕ್ತಿ ತೋರಲಿದ್ದೀರಿ. ದೀರ್ಘಾವಧಿಯ ಹೂಡಿಕೆಗಳಿಗೆ ಇಂದು ಉತ್ತಮ ದಿನ. ನಿಮ್ಮ ಆಕರ್ಷಕ ವ್ಯಕ್ತಿತ್ವದಿಂದ ನೀವು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ಆರ್ಥಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ್
ವೃಶ್ಚಿಕ ರಾಶಿ
ಯೋಗ ಮತ್ತು ಧ್ಯಾನ ಮಾಡುವುದರಿಂದ ನೀವು ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ. ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸಂಗಾತಿಯೊಂದಿಗೆ ವಾದ ಮಾಡುವುದರಿಂದ ಮನೆಯ ವಾತಾವರಣ ಹಾಳಾಗಬಹುದು. ಆದ್ದರಿಂದ ತಾಳ್ಮೆಯಿಂದ ಇರಿ. ವೃತ್ತಿಯಲ್ಲಿ ನಿಮ್ಮ ಪ್ರತಿಭೆಯನ್ನು ಸಾಬೀತು ಮಾಡುವ ಸಮಯ ಇದು. ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಇನ್ನಷ್ಟು ಶ್ರಮಿಸಬೇಕು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುವಿರಿ.
ಧನು ರಾಶಿ
ಇಂದಿನ ಉಳಿತಾಯ ನಾಳಿನ ಸುಂದರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಹಣವನ್ನು ಮನಸೋ ಇಚ್ಛೆ ಖರ್ಚು ಮಾಡದೆ ಎಚ್ಚರಿಕೆಯಿಂದ ನಿಭಾಯಿಸಿ. ಧನು ರಾಶಿಯ ವ್ಯಾಪಾರಿಗಳು ಸ್ನೇಹಿತರಿಂದಲೇ ತೊಂದರೆ ಒಳಗಾಗಬಹುದು. ಇತರರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ ಉಂಟಾಗಬಹುದು. ಏನೇ ಪರಿಸ್ಥಿತಿ ಇದ್ದರೂ ತಾಳ್ಮೆಯಿಂದ ನಿಭಾಯಿಸಿ. ಉದ್ಯೋಗ ಅಥವಾ ವಿದ್ಯಾಭ್ಯಾಸದ ಕಾರಣ ಮನೆಯಿಂದ ದೂರ ಇರುವವರು ಕುಟುಂಬದ ಸದಸ್ಯರನ್ನು ಭೇಟಿ ಮಾಡಬಹುದು. ದಂಪತಿ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಮಕರ ರಾಶಿ
ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಒಂದಕ್ಕಿಂದ ಹೆಚ್ಚು ಆದಾಯದ ಮೂಲವಿರುತ್ತದೆ. ಆತ್ಮೀಯರೊಂದಿಗಿನ ವೈಯಕ್ತಿಕ ಮನಸ್ತಾಪಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡದೆ, ಒಬ್ಬರಿಗೊಬ್ಬರು ಕುಳಿತು ಸಮಸ್ಯೆ ನಿವಾರಿಸಿಕೊಳ್ಳಿ. ಇಲ್ಲದಿದ್ದರೂ ನಿಮಗೆ ಇನ್ನಷ್ಟು ಸಮಸ್ಯೆ ಹೆಚ್ಚಾಗುತ್ತದೆ. ದೂರ ಪ್ರಯಾಣಕ್ಕೆ ಇದು ಉತ್ತಮ ದಿನವಲ್ಲ. ಸಂಗಾತಿಯೊಂದಿಗೆ ಖುಷಿಯಾಗಿರುವಿರಿ.
ಕುಂಭ ರಾಶಿ
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಆದರೆ ವಿಶ್ರಾಂತಿಯೇ ಎಲ್ಲದಕ್ಕೂ ಪರಿಹಾರವಾಗಿದೆ. ಬೆಲೆಬಾಳುವ ವಸ್ತುಗಳ ಬಗ್ಗೆ ಕಾಳಜಿ ವಹಿಸಿ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸಿ. ಸ್ನೇಹಿತರ ಸಹಾಯ ದೊರೆಯಲಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಗಾತಿಯೊಂದಿಗೆ ಮನಸ್ಥಾಪ ಉಂಟಾಗಬಹುದು. ಆದರೆ ಸಂಜೆ ಆಗುತ್ತಿದ್ದಂತೆ ಎಲ್ಲವೂ ಸರಿ ಆಗಲಿದೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಜಾಗರೂಕರಾಗಿರಿ.
ಮೀನ ರಾಶಿ
ಪರಿಚಯಸ್ಥರಿಗೆ ನೀವು ಕೊಟ್ಟಿದ್ದ ಸಾಲ ವಾಪಸ್ ಬರುವುದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ದೂರ ಪ್ರಯಾಣ ಸಾಧ್ಯತೆ ಇದೆ. ಬಿಡುವಿನ ಸಮಯದಲ್ಲಿ ಆಧ್ಯಾತ್ಮಿಕತೆಯತ್ತ ಒಲವು ತೋರುತ್ತೀರಿ. ಇದರಿಂದ ಮಾನಸಿಕವಾಗಿ ನೀವು ಬಹಳ ಖುಷಿಯಾಗಿರುತ್ತೀರಿ. ಆರೋಗ್ಯ ಸುಧಾರಿಸಲಿದೆ. ಸಂಗಾತಿಯು ನಿಮಗೆ ಎಲ್ಲಾ ವಿಚಾರದಲ್ಲೂ ಬೆಂಬಲವಾಗಿ ನಿಲ್ಲಲಿದ್ದಾರೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.