ಬ್ಯಾಂಕ್ ಕೆಲಸಗಳು ಆಗಾಗ ಬರುತ್ತಲೇ ಇರುತ್ತದೆ. ಅವುಗಳನ್ನು ಸರಿ ಮಾಡುವುದಕ್ಕೆ ಬ್ಯಾಂಕ್ ಗೆ ಹೋಗುತ್ತೇವೆ. ಆದರೆ ನಾವು ಬ್ಯಾಂಕ್ ಗೆ ಹೋಗುವುದಕ್ಕಿಂತ ಮೊದಲು ಬ್ಯಾಂಕ್ ಓಪನ್ ಇದೆಯಾ ಅಥವಾ ರಜಾ ಇದೆಯಾ ಎಂದು ತಿಳಿದುಕೊಂಡು ನಂತರ ಬ್ಯಾಂಕ್ ಗೆ ಹೋಗಿ ಕೆಲಸಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದೆ ಹೋದರೆ ಅಷ್ಟು ದೂರ ಹೋಗಿ, ಯಾವ ಕೆಲಸವೂ ನಡೆಯದೇ ವಾಪಸ್ ಬರಬೇಕಾಗುತ್ತದೆ. ಹಾಗಾಗಿ ಬ್ಯಾಂಕ್ ರಜೆಗಳ ಬಗ್ಗೆ ತಿಳಿದುಕೊಂಡು ನಂತರ ಹೋಗುವುದು ನಿಮ್ಮ ಸಮಯ ಉಳಿಸುವುದರ ಜೊತೆಗೆ ಕೆಲಸವನ್ನು ಬೇಗ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಹಾಗಿದ್ರೆ ಮುಂದಿನ ತಿಂಗಳು ಎಷ್ಟು ದಿವಸ ಬ್ಯಾಂಕ್ ರಜೆ ಇದೆ ಗೊತ್ತಾ?
ಇಂದು ನವೆಂಬರ್ 28, ಇನ್ನು 3 ದಿನಗಳಲ್ಲಿ ಈ ತಿಂಗಳು ಮುಗಿದೇ ಹೋಗುತ್ತದೆ. ಹೊಸ ತಿಂಗಳು, ಹಾಗು ಈ ವರ್ಷದ ಕೊನೆಯ ತಿಂಗಳು ಆಗಿರುವ ಡಿಸೆಂಬರ್ ತಿಂಗಳು ಶುರುವಾಗುತ್ತದೆ. ಸಧ್ಯಕ್ಕೆ ಬ್ಯಾಂಕ್ ಕಡೆಯಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಸುಮಾರು 17 ದಿವಸಗಳು ಬ್ಯಾಂಕ್ ರಜೆ ಇರಲಿದ್ದು, ಒಂದು ವೇಳೆ ನಿಮಗೆ ಬ್ಯಾಂಕ್ ಕೆಲಸಗಳು ಏನಾದರೂ ಇದ್ದರೆ, ಮೊದಲೇ ಪ್ಲಾನ್ ಮಾಡಿ ಮುಗಿಸಿಕೊಳ್ಳುವುದು ಒಳ್ಳೆಯದು. ಕರ್ನಾಟಕದಲ್ಲಿ ನೋಡುವುದಾದರೆ ಮುಂದಿನ ತಿಂಗಳು 8 ದಿವಸಗಳ ಕಾಲ ರಜೆ ಇದೆ, ಇನ್ನು ಮಿಜೋರಾಂ, ಗೋವಾ ಹರಿಯಾಣ ಈ ಊರುಗಳಲ್ಲಿ ಹೆಚ್ಚು ದಿವಸಗಳ ಕಾಲ ರಜೆ ಇರಲಿದೆ.

ಇನ್ನು ಡಿಸೆಂಬರ್ ನಲ್ಲಿ ಕ್ರಿಸ್ಮಸ್ ಹಬ್ಬ ಇರುವ ಕಾರಣ ಈ ದಿವಸ ಕೂಡ ದೇಶದ ಎಲ್ಲೆಡೆ ರಜೆ ಇರಲಿದೆ. ಹಾಗಿದ್ದಲ್ಲಿ ಯಾವ್ಯಾವ ಊರುಗಳಲ್ಲಿ ಎಷ್ಟೆಷ್ಟು ದಿವಸ ರಜೆ ಇರುತ್ತದೆ, ಯಾವೆಲ್ಲಾ ಕಾರಣಕ್ಕೆ ರಜೆಗಳು ಇರಲಿದೆ ಎಂದು ತಿಳಿಸುತ್ತೇವೆ ನೋಡಿ..
ಡಿಸೆಂಬರ್ 1, ತಿಂಗಳ ಮೊದಲ ದಿವಸ ಭಾನುವಾರ ಆಗಿರುವ ಕಾರಣ, ಈ ದಿನ ರಜೆ ಇರಲಿದೆ. ಡಿಸೆಂಬರ್ 3ರಂದು ಗೋವಾ ರಾಜ್ಯದಲ್ಲಿ ರಜೆ, ಈ ದಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ ಇರಲಿದೆ. ಇನ್ನು ಡಿಸೆಂಬರ್ 8ರಂದು ಕೂಡ ಎಲ್ಲರಿಗೂ ರಜೆ ಇರಲಿದ್ದು, ಭಾನುವಾರ ಆಗಿರುವುದರಿಂದ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರಲಿದೆ.
ಡಿಸೆಂಬರ್ 14ರಂದು ಕೂಡ ದೇಶದ ಎಲ್ಲಾ ಬ್ಯಾಂಕ್ ಗಳಲ್ಲಿ ರಜೆ ಇರಲಿದೆ, ಎರಡನೇ ಶನಿವಾರ ಆಗಿರುವುದರಿಂದ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಡಿಸೆಂಬರ್ 12ರಂದು ಮೇಘಾಲಯ ರಾಜ್ಯದ ಬ್ಯಾಂಕ್ ಗಳಿಗೆ ರಜೆ ಇರಲಿದೆ, ಇದಕ್ಕೆ ಕಾರಣ ಈ ದಿನ ಪಾ ತೊಗನ್ ನೆಂಗ್ ಮಿಂಜ ಸಾಂಗ್ಮಾ ಇರಲಿದೆ. ಡಿಸೆಂಬರ್ 15ರಂದು ಭಾನುವಾರ ಆಗಿರುವ ಕಾರಣ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಡಿಸೆಂಬರ್ 18ರಂದು ಪಂಜಾಬ್, ಹರಿಯಾಣ ಮತ್ತು ಮೇಘಾಲಾಯ ರಾಜ್ಯದ ಬ್ಯಾಂಕ್ ಗಳು ರಜೆ ಇರಲಿದೆ, ಇದಕ್ಕೆ ಕಾರಣ ಅಂದು ಗುರು ಘಾಸಿದಾಸ್ ಜಯಂತಿ ಆಗಿದೆ. ಡಿಸೆಂಬರ್ 19ರಂದು ಗೋವಾ ವಿಮೋಚನಾ ದಿವಸ ಆಗಿದ್ದು, ಗೋವಾ ರಾಜ್ಯದ ಬ್ಯಾಂಕ್ ಗಳಲ್ಲಿ ರಜೆ ಇರಲಿದೆ.
ಡಿಸೆಂಬರ್ 24ರಂದು ಮೇಘಾಲಯ, ಪಂಜಾಬ್, ನಾಗಾಲ್ಯಾನ್ಡ್, ಮಿಜೋರಾಂ ನಲ್ಲಿ ರಜೆ ಇದೆ, ಕಾರಣ ಕ್ರಿಸ್ಮಸ್ ಹಾಗೂ ಬಹದುರ್ ಬಲಿದಾನ ದಿನ. ಡಿಸೆಂಬರ್ 25ರಂದು ಕ್ರಿಸ್ಮಸ್ ಕಾರಣ ದೇಶದ ಎಲ್ಲಾ ಬ್ಯಾಂಕ್ ಗಳಿಗೆ ರಜೆ. ಡಿಸೆಂಬರ್ 26ರಂದು ಮೇಘಾಲಯ, ನಾಗಾಲ್ಯಾನ್ಡ್ ಹಾಗೂ ಇನ್ನು ಕೆಲವು ರಾಜ್ಯಗಳಲ್ಲಿ ರಜೆ. ಡಿಸೆಂಬರ್ 27ರಂದು ನಾಗಾಲ್ಯಾನ್ಡ್ ಬ್ಯಾಂಕ್ ಗಳಿಗೆ ರಜೆ, ಡಿಸೆಂಬರ್ 28ರಂದು 4ನೇ ಶನಿವಾರ ಆಗಿರುವುದರಿಂದ ರಜೆ, ಡಿಸೆಂಬರ್ 29ರಂದು ಭಾನುವಾರ ಹಾಗಾಗಿ ರಜೆ. ಡಿಸೆಂಬರ್ 20ರಂದು ಸಿಕ್ಕಿಂ ಮತ್ತು ಮೇಘಾಲಯದಲ್ಲಿ ರಜೆ ಇದಕ್ಕೆ ಕಾರಣ ಟಮು ಲೋಸರ್, ಯು ಕಿಯಾಂಗ್ ನಾಂಗ್ ಬಾ. ಡಿಸೆಂಬರ್ 31ರಂದು ಹೊಸ ವರ್ಷದ ಆಚರಣೆಗಾಗಿ ಮಿಜೋರಾಂ ನಲ್ಲಿ ರಜೆ ಇರಲಿದೆ.