ಬೆಳಗ್ಗೆಯೋ, ಸಂಜೆಯೋ ನಾವು-ನೀವು ಒಂದು ಹೋಟೆಲ್ಗೆ ಹೋಗಿ ಒಂದು ಪ್ಲೇಟ್ ಇಡ್ಲಿ ತಿಂದ್ರೆ ಎಷ್ಟು ಬಿಲ್ ಬರಬಹುದು. 30 ಇಲ್ಲಾ 50 ಆಥವಾ 100, ಜಾಸ್ತಿಯಂದ್ರೆ 200 ರೂಪಾಯಿ. ಆದ್ರೆ 1 ಪ್ಲೇಟ್ ಇಡ್ಲೆಗೆ 1,200 ರೂಪಾಯಿ ಅಂದ್ರೆ ನೀವು ನಂಬ್ತೀರಾ. ನಂಬಿಕೆ ಬರದಿದ್ರೂ ನೀವು ಇದನ್ನ ನಂಬಲೇ ಬೇಕು. ಒಂದು ಪ್ಲೇಟ್ ಇಡ್ಲಿಗೆ ಇಷ್ಟೊಂದು ಬೆಲೆನಾ, ಇದೇನು ಚಿನ್ನದ ಇಡ್ಲಿನಾ? ಅಂತ ಕೇಳಿದ್ರೆ. ಹೌದು, ಇದು ಚಿನ್ನದ್ದೇ ಇಡ್ಲಿ. ಡೌಟ್ ಇದ್ರೆ ಈ ವರದಿ ಪೂರ್ತಿ ಓದಿ.

ನಮ್ಮದು ವಿವಿಧತೆ ತುಂಬಿ ತುಳುಲಾಡುವ ದೇಶ. ಇಲ್ಲಿ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಮುಖ್ಯವಾಗಿ ಆಹಾರ ಪದ್ದತಿಯ ಹಿನ್ನಲೆಯಿದೆ. ನೀವೆಲ್ಲ ಹೈದರಾಬಾದ್ ನಲ್ಲಿ ವರ್ಲ್ಡ್ ಫೇಮಸ್ ಬಿರಿಯಾನಿ ಸಿಗೋದು ಕೇಳಿರಬಹುದು. ಅದೇ ಹೈದರಾಬಾದ್ ನಲ್ಲಿ ಇದೀಗ ಚಿನ್ನದ ಇಡ್ಲಿ ಸಿಗುತ್ತಿದೆ. ರೇಟ್ 1200 ಆದ್ರೂ ಜನ ಮುಗಿಬಿದ್ದು ಇದನ್ನ ಖರೀದಿ ಮಾಡಿ ಚಿನ್ನದ ಇಡ್ಲಿಯ ರುಚಿ ನೋಡುತ್ತಿದ್ದಾರೆ.
ಹೈದರಾಬಾದ್ ಭಾಗ್ಯ ನಗರದಲ್ಲಿರುವ ಕೆಫೆಯೊಂದರಲ್ಲಿ ಸದ್ಯ, ಈ ಚಿನ್ನದ ಇಡ್ಲಿ ಸಕ್ಕತ್ ಫೇಮಸ್. ಹಾಗಂತ ಇಲ್ಲಿ ಕೇವಲ ಚಿನ್ನದ ಇಡ್ಲಿ ಮಾತ್ರ ಅಲ್ಲ. ಬಂಗಾರದ ಜಾಮೂನ್, ದೋಸೆ, ಗುಲಾಬ್ ಜಾಮೂಮ್ ಸೇರಿದಂತೆ ಜನರ ನೆಚ್ಚಿನ ತಿಂಡಿಗಳು ಲಭ್ಯವಿದೆ. ಈ ಚಿನ್ನದ ಇಡ್ಲಿ ಫೇಮಸ್ ಆಗಿದ್ದೇ ತಡ ಜನರೆಲ್ಲ ಕೆಫೆ ಮುಂದೆ ಮುಗಿ ಬೀಳುತ್ತಿದ್ದಾರೆ. ನೀವೂ ಕೂಡ ಒಮ್ಮೆ ಹೈದರಾಬಾದ್ ಕಡೆ ಹೋದ್ರೆ ಈ ಚಿನ್ನದ ತಿನಿಸುಗಳನ್ನ ತಿಂದು ರುಚಿ ನೋಡಿ.