ಪ್ರಪಂಚದಲ್ಲಿ ಬದುಕು ಸಾಗಿಸುವುದಕ್ಕೆ ಹಲವು ಕೆಲಸಗಳಿದೆ. ಎಲ್ಲಾ ಕೆಲಸಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದರೆ ವೇ*ಶ್ಯಾವಾಟಿಕೆ ಕೆಲಸದ ಬಗ್ಗೆ ತೀವ್ರವಾದ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಈ ವೃತ್ತಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ವಾದ ಮಾಡುವ ಹಲವು ಜನರಿದ್ದಾರೆ. ಇನ್ನು ಕೆಲವರು ಈ ಕೆಲಸವನ್ನು ಲೀಗಲೈಸ್ ಮಾಡಬೇಕು ಎಂದು ಸಹ ಹೇಳುತ್ತಾರೆ. ಆದರೆ ಈ ವೃತ್ತಿಯಲ್ಲಿ ತೊಡಗಿಕೊಂಡಿರುವ ಪ್ರತಿ ಮಹಿಳೆಗೆ ಅವಮಾನ, ಕಷ್ಟ, ನೋವು ತಪ್ಪಿದ್ದಲ್ಲ. ಈ ಜಾಲಕ್ಕೆ ಸಿಲುಕಿಕೊಳ್ಳುವ ಎಲ್ಲರೂ ತಪ್ಪು ಮಾಡಿದವರೆ ಆಗಿರುವುದಿಲ್ಲ. ಒಬ್ಬೊಬ್ಬರ ಕಥೆ ಒಂದೊಂದು ರೀತಿ ಇರುತ್ತದೆ..

ಬಹಳಷ್ಟು ಜನರು ಮೋಸದಿಂದಲೇ ಇಲ್ಲಿ ಸಿಲುಕಿಕೊಂಡಿರುತ್ತಾರೆ. ತಮ್ಮ ಸ್ವಂತದವರೇ ಕೆಲಸದ ಆಸೆ ತೋರಿಸಿ, ಇಂಥ ಕಡೆಗಳಲ್ಲಿ ಮಾ*ರಾಟ ಮಾಡಿ ಹೋಗಿರುತ್ತಾರೆ. ಇಂಥ ಹಲವು ಕಥೆಗಳನ್ನು ಕೇಳುತ್ತಾ ಹೋದರೆ ನಮ್ಮ ಕಣ್ಣಾಲಿಗಳು ಒದ್ದೆಯಾಗುತ್ತದೆ. ಈ ಕೆಲಸದಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನ ಜನರು ಕೀಳಾಗಿ ಕಾಣುತ್ತಾರೆ, ಪ್ರಪಂಚದಲ್ಲಿ ಅವರಿಗೆ ಒಂದು ಸ್ಥಾನ ಮಾನ ಇರುವುದೇ ಇಲ್ಲ. ಆದರೆ ಮಾಡುವ ಕೆಲಸ ಇದು ಅನ್ನೋ ಕಾರಣಕ್ಕೆ ಅವರನ್ನು ಈ ರೀತಿ ಕಾಣುವುದು ತಪ್ಪು ಅನ್ನೋ ಸಂದೇಶವನ್ನ ಈ ಯೂಟ್ಯೂಬರ್ ಅನಿಷ್ ಭಟ್ ತಿಳಿಸಿದ್ದಾರೆ. ಈ ವಿಡಿಯೋ ಗೆ ಜನರಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.
ಈತ ಶೇರ್ ಮಾಡಿರುವ ವಿಡಿಯೋದಲ್ಲಿರುವ ಮಹಿಳೆಯ ಹೆಸರು ರಾಕ್ಸಿ, ಆಕೆ ಸಹ ಅನಿಷ್ ಅಭಿಮಾನಿ. ಅಭಿಮಾನಿಯನ್ನು ಆಕೆಯ ರೆಡ್ ಲೈಟ್ ಏರಿಯಾದ ಮನೆಯಲ್ಲಿ ಭೇಟಿ ಮಾಡಿ, ಆಕೆಯ ಕಥೆಯನ್ನು ತಿಳಿದುಕೊಂಡಿರುವುದರ, ಜೊತೆಗೆ ಆಕೆಗೆ ಸರ್ಪ್ರೈಸ್ ಸಹ ಕೊಟ್ಟಿರುವುದು ಈ ವಿಡಿಯೋ ವಿಶೇಷತೆ. ಅನಿಷ್ ಭಟ್ ಹೇಳಿರುವ ಪ್ರಕಾರ, ಆಕೆ 15 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾಳೆ, ಈಗ ತನ್ನದೇ ಆದ ಬಾಡಿಗೆ ಮನೆ ಮಾಡಿಕೊಂಡಿದ್ದಾಳೆ, ಅಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಾಳೆ. ತನ್ನ ಮಗಳನ್ನು ಈ ಗದ್ದಲಗಳಿಂದ ದೂರವಿಟ್ಟು, ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾಳೆ ಎಂದು ಬರೆದಿದ್ದಾರೆ ಅನಿಷ್.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಾಗೆಯೇ ಒಬ್ಬ ವ್ಯಕ್ತಿಗೆ ಗೌರವ ಕೊಡೋದಕ್ಕೆ ಅವರ ಕಥೆ ತಿಳಿದುಕೊಳ್ಳಲೇಬೇಕು ಅನ್ನೋ ಅಗತ್ಯವಿಲ್ಲ, ಮನುಷ್ಯರಾಗಿ ಎಲ್ಲರಿಗೂ ಗೌರವ ಕೊಡಬೇಕು ಎಂದಿದ್ದಾರೆ. ಈ ವಿಡಿಯೋದಲ್ಲಿ ರಾಕ್ಸಿ ತನ್ನ ಮನೆಯನ್ನು ತೋರಿಸಿ, ಅನಿಷ್ ಗೆ ಟೀ ಮಾಡಿಕೊಡುತ್ತಾರೆ, ತನಗೆ ಓದುವುದಕ್ಕೆ ತುಂಬಾ ಆಸಕ್ತಿ ಇರುವುದಾಗಿ ತಿಳಿಸುವ ರಾಕ್ಸಿ ತನ್ನ ಬಳಿ ಇರುವ ಅನೇಕ ಪುಸ್ತಕಗಳನ್ನು ಅನಿಷ್ ಗೆ ತೋರಿಸಿದ್ದಾಳೆ. ಹಾಗೆಯೇ ತನ್ನ ಕಣ್ಣೀರಿನ ಕಥೆಯನ್ನು ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಲ್ಲೇ ಆಕೆಯ ತಂದೆ ವಿಧಿವಶರಾದರು, ಕೆಲಸ ಕೊಡಿಸುತ್ತೀನಿ ಅಂತ ಹೇಳಿ ಚಿಕ್ಕಪ್ಪನೇ ಈ ಜಾಗಕ್ಕೆ ಕರೆದುಕೊಂಡು ಬಂದು ಆಕೆಯನ್ನು ಮಾ*ರಿ ಹೋಗಿದ್ದಾನೆ.
15 ವರ್ಷಗಳಿಂದ ಆಕೆ ಈ ಕೆಲಸವನ್ನು ಮಾಡಿಕೊಂಡಿದ್ದಾಳೆ, ಹಾಗೆಯೇ ರಾಕ್ಸಿ ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರ ಮೇಲೆ ಅ**ಚಾರ ಮಾಡುವವರಿಗೆ ಆ ಥರ ಮಾಡದೇ ತಮ್ಮ ಬಳಿ ಬನ್ನಿ ಎಂದು ಹೇಳಿದ್ದಾಳೆ. ಆಕೆಯ ಕಥೆಯನ್ನು ಕೇಳಿದ ನಂತರ ಆಕೆಗೆ ಏನು ಇಷ್ಟ ಎಂದು ಕೇಳಿದಾಗ, ಆಕೆ ಮೊದಲಿಗೆ ಏನನ್ನು ಹೇಳಲಿಲ್ಲ, ಬಳಿಕ ಸುಶಿ ಇತ್ತೀಚೆಗೆ ಇಷ್ಟ ಆಗ್ತಿದೆ, ತಿನ್ನಬೇಕು ಅನ್ನಿಸಿದೆ ಎಂದಿದ್ದಕ್ಕೆ, ಅನಿಷ್ ಒಂದು ಒಳ್ಳೆಯ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ, ಆಕೆಗೆ ಸುಶಿ ಕೊಡಿಸಿದ್ದಾರೆ.. ರಾಕ್ಸಿ ಕಥೆ ಕೇಳಿದ ನೆಟ್ಟಿಗರು, ಇವರಿಗೆ ಗೌರವ ಕೊಡಬೇಕು ಎನ್ನುತ್ತಿದ್ದಾರೆ. ಬದುಕು ಕಟ್ಟಿಕೊಳ್ಳಲು ಇವರಿಗೆಲ್ಲಾ ಒಳ್ಳೆಯ ಅವಕಾಶ ಸಿಗಬೇಕು, ಜನರು ಮೋಸ ಮಾಡುವುದನ್ನ ಬಿಡಬೇಕು ಎನ್ನುವ ಸಂದೇಶ ಸಿಗುತ್ತಿದೆ.