ಯತ್ನಾಳ್ ಹಾಗೂ ಶಿವಾನಂದ ಪಾಟೀಲ್ ಮಧ್ಯೆ ಬಹಿರಂಗ ವಾಕ್ಸಮರ ನಡೆಯುತ್ತಲೇ ಇದೆ. ಈಗಾಗಲೇ ಸವಾಲು ಸ್ವೀಕಾರ ಮಾಡಿರುವ ಸಚಿವ ಶಿವಾನಂದ ಪಾಟೀಲ್ ಯತ್ನಾಳ್ ರಾಜಿನಾಮೆಗೆ ಆಗ್ರಹಿಸಿದ್ದಾರೆ. ಅವರು ಆಡಿದ್ದ ಮಾತಿನಲ್ಲೇ ತಿವಿದಿದ್ದ ಶಿವಾನಂದ ಪಾಟೀಲ್ ಅವರೂ ರಾಜಿನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದಿದ್ದರು. ಇದ್ಯಾವುದಕ್ಕೂ ಯತ್ನಾಳ್ ತಲೆಕೆಡಿಸಿಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತು ಬರುವ ಪೋಸ್ಟ್ ಗಳಿಗೂ ಕ್ಯಾರೆ ಎಂದಿರಲಿಲ್ಲ ಯತ್ನಾಳ್.
ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಒಂದು ಕಡೆ ಸಚಿವ ಸಚಿವರ ನಡುವೆ ಈ ವಾಕ್ಸಮರ ನಡೆಯುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ವರ್ಸಸ್ ಕಾಂಗ್ರೆಸ್ ರೀತಿ ಆಗಿದೆ. ಅದಕ್ಕೂ ಮುಂದುವರೆದು ಲಿಂಗಾಯತ ಸಮುದಾಯದ ಚುಕ್ಕಣಿ ಕುರಿತು ಈ ವಾಕ್ಸಮರಗಳು ಮುಂದುವರೆದಿವೆ. ಆಗ್ಗಾಗ್ಗೆ ಸಣ್ಣ ಕಿಡಿ ಎದ್ದೇಳುತ್ತಿತ್ತು. ಆದರೆ ಯತ್ನಾಳ್ ಪೈಗಂಬರ್ ಬಗ್ಗೆ ಮಾತನಾಡಿದ ಬಳಿಕವಂತೂ ದೊಡ್ಡ ಜ್ವಾಲೆಯೇ ಹತ್ತಿ ಉರಿಯಿತು.

ಆ ಜ್ವಾಲೆ ರಾಜಿನಾಮೆ ವರೆಗೂ ಬಂದು ನಿಂತಿದೆ. ಅಷ್ಟೆ ಅಲ್ಲ ಸಚಿವ ಎಂಬಿ ಪಾಟೀಲ್ ಗೂ ತಾಗಿದೆ. ಈಗಾಗಲೇ ಅವರೂ ಕೂಡ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಹೈ ಕಮಾಂಡ್ ಗೆ ದೂರು ನೀಡುವ ತನಕ ಹೋಗಿದ್ದಾರೆ. ಇದರ ಮಧ್ಯೆ ಯತ್ನಾಳ್ ಸವಾಲು ಸ್ವೀಕಾರ ಮಾಡಿ ಶಾಸಕ ಸ್ಥಾನಕ್ಕೆ ರಾಜುನಾಮೆ ನೀಡಿದ್ದ ಶಿವಾನಂದ ಪಾಟೀಲ್ ಯತ್ನಾಳ್ ರಾಜಿನಾಮೆಗೆ ಆಗ್ರಹಿಸಿದ್ದರು.
ಅವರು ರಾಜಿನಾಮೆ ಕೊಟ್ಟು ವಾರವೇ ಕಳೆದರೂ ಯತ್ನಾಳ್ ಮಾತ್ರ ಈ ಬಗ್ಗೆ ಉರಿರೆತ್ತಿರಲಿಲ್ಲ. ನನಗೂ ಇದಕ್ಕೂ ಸಂಬಂಧ ಇಲ್ಲ ಏನೋ ಅನ್ನೋ ರೀತಿ ಇದ್ದ ಶಾಸಕ ಈಗ ಮತ್ತೆ ಶಿವಾನಂದ ಪಾಟೀಲ್ ವಿರುದ್ಧ ಹರಿ ಹಾಯ್ದಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿರೋ ಅವರು ನಾನು ಯಾವ ಮಗನಿಗೂ ಹೆದರೋವ್ನಲ್ಲ. ಇಂತ ಚಾಲೆಂಜ್ ಗರ ಹೆದರೋ ಮಗ ಅಲ್ಲ ಎಂದಿದ್ದಾರೆ.

ರಾಜಿನಾಮೆ ಕೊಟ್ರೆ ಅವ ಕೊಡಲಿ. ನಾನ್ಯಾಕೆ ಕೊಡಲಿ. ಸುಮ್ನೆ ಚುನಾವಣೆ ಮಾಡೋದಾ, ಅವರಿಗೆ ತಿಂಡಿ ಇದೆ. ನನಗಲ್ಲ. ಯತ್ನಾಳ್ ವಿರುದ್ಧ ನಿಲ್ಲಬೇಕು ಅಂದ್ರೆ ನಿಲ್ಲು. ಬಾಗೇವಾಡಿಗೆ ರಾಜಿನಾಮೆ ಕೊಡು. ಇನ್ನೊಬ್ಬ ಮಹಾಪುರುಷ ಹುನಗುಂದಕ್ಕೆ ಹೇಳಿದ್ದ. ನೀವು ರಾಜಿನಾಮೆ ಕೊಡಿ ನಾನು ಬಂದು ಚುನಾವಣೆಗೆ ನಿಲ್ತೀನಿ. ಜನ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ನಿಮಗೆ ಕೆಲಸ ಇಲ್ಲ ಅಂದರೆ ನಮಗೂ ಇಲ್ವಾ..? ದುಡ್ಡು ಹೆಚ್ಚಾಗಿದೆ ನಿಮಗೆ. ಭ್ರಷ್ಟಾಚಾರದ ಹಣ ಹೆಚ್ಚಾಗಿದೆ. ಅದಕ್ಕೆ ಇಂತ ಚಾಲೆಂಜ್ ಹಾಕ್ತಾರೆ. ಇಂತ ಸವಾಲಿಗೆ ಹೆದರೋ ಮಗನೇ ಅಲ್ಲ. ಅಥವಾ ಎಲ್ಲಾದ್ರೂ ಹೋಗಿ ಕೂರೋವ್ನು ಅಲ್ಲ.
ನಾನು ಸ್ಪೀಕರ್ ಗೆ ಸ್ಪಷ್ಟವಾಗಿ ಹೇಳಿದ್ದೇನೆ. ರಾಜಿನಾಮೆ ಕೊಟ್ಟ ನಂತರ ಆ ಬೋರ್ಡ್ ಮೇಲೆ ಬರಬೇಕು. ಬಸವನ ಬಾಗೇವಾಡಿ, ಹುನಗುಂದ ಖಾಲಿ ಇರೋ ಸ್ಥಾನಗಳು ಅಂತ. ಇವರಿಗೆ ಬೇಕಾದ ಹಾಗೆ ಮಾಡಿದ್ರೆ ಒಪ್ಪೊಕಾಗಲ್ಲ ಅಂತ ಖಾರವಾಗಿ ಮಾತನಾಡಿದ್ದಾರೆ. ಸದ್ಯ ಈ ಗದ್ದಲ ಇಲ್ಲಿಗೆ ನಿಲ್ಲೋ ಹಾಗೆ ಕಾಣ್ತಾ ಇಲ್ಲ.



