ಅಸ್ಸಾಂ ಟೀ ಎಸ್ಟೇಟ್ ಗಳಲ್ಲಿ ರಾಜನಂತೆ ಬಾಳಿದ್ದ ಭಾರತದ ಹಿರಿಯ ಸಾಕಾನೆ ಭಾರತದ ಹಾಗೂ ವಿಶ್ವದ ಅತ್ಯಂತ ಹಿರಿಯ ಸಾಕಾನೆ ಬಿಜುಲಿ ಪ್ರಸಾದ್ ಸೋನಿಯತ್ ಪುರದಲ್ಲಿ ಸೋಮವಾರ ಮೃತಪಟ್ಟಿದೆ. ಈ ಸಾಕಾನೆಗೆ 89 ವರ್ಷ ವಯಸ್ಸಾಗಿತ್ತು. ಚಿಕ್ಕ ಮರಿಯಿದ್ದಾಗ ಬಾರ್ ಗಾಂಗ್ ಚಹಾ ತೋಟಕ್ಕೆ ಬಂದಿದ್ದ ಈ ಆನೆಯನ್ನು ಅಲ್ಲಿಯೇ ಸಾಕಲಾಗಿತ್ತು. ಆನೆಯು ಎಸ್ಟೇಟಿನ ಹೆಮ್ಮೆಯಾಗಿತ್ತು.

ಹತ್ತು ವರ್ಷಗಳ ಹಿಂದೆ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡಿದ್ದ ಆನೆ ಆಹಾರ ಸೇವಿಸಲಾಗದೆ ಕೃಶಕವಾಗಿತ್ತು. ವೈದ್ಯರ ಸಲಹೆ ಮೇರೆಗೆ ಅಕ್ಕಿ, ಸೋಯಾಬಿನ್ ಸೇರಿದಂತೆ ಹೆಚ್ಚು ಪ್ರೋಟಿನ್ ಇರುವ ಆಹಾರವನ್ನು ನೀಡಲಾಗುತ್ತಿತ್ತು. ದಿನವೊಂದಕ್ಕೆ ಈ ಆನೆ 25ಕೆ.ಜಿ. ಆಹಾರ ಸೇವಿಸುತ್ತಿತ್ತು.ನಿನ್ನೆಯಷ್ಟೇ ಈ ಆನರ ವಯೋ ಸಹಜ ಖಾಯಿಲೆಯಿಂದ ಮೃತಪಟ್ಟಿದೆ.
ಸಾಮಾನ್ಯವಾಗಿ ಏಷ್ಯಾಟಿಕ್ ಆನೆಗಳು 60-65 ವರ್ಷಗಳ ಕಾಲ ಜೀವಿಸುತ್ತದೆ. ಉತ್ತಮ ಆರೈಕೆ ಮಾಡಿದರೆ ಕೆಲವು ಆನೆಗಳು 80 ವರ್ಷಗಳ ಕಾಲ ಜೀವಿಸುತ್ತದೆ. ಆದರೆ ಬಿಜಲಿ ಪ್ರಸಾದ್ ತನ್ನ ಜೀವಿತಾವಧಿಯನ್ನು ಮೀರಿ 89 ವರ್ಷಗಳ ಕಾಲ ಬದುಕಿದ್ದು ವಿಸ್ಮಯವೇ ಸರಿ. ಸದ್ಯ, ಪ್ರೀತಿಯ ಆನೆಯನ್ನು ಕಳೆದುಕೊಂಡಿರುವ ಬೆಹಾಲಿ ಟೀ ಎಸ್ಟೇಟ್ ಬಿಕೋ ಎನ್ನುತ್ತಿದೆ.