ಮುಂದಿನ ಮೂರು ತಿಂಗಳಲ್ಲಿ ಭಾರತ ಹಾಗು ಪಾಕಿಸ್ತಾನ ಐದು ಬಾರಿ ಮುಖಾಮುಖಿ ಆಗಬಹುದು , ಏಷ್ಯಾ ಕಪ್ ಹಾಗು ವರ್ಲ್ಡ್ ಕಪ್ ಫೈನಲ್ಸ್ ಗೆ ಈ ತಂಡಗಳು ತಲುಪಿದರೆ ಖಂಡಿತವಾಗಿ ಇದು ಸಾಧ್ಯವಾಗುತ್ತದೆ , ಇಲ್ಲಿ ನಾವು ಯಾವ ಐದು ಪಾಕಿಸ್ತಾನಿ ಪ್ಲೇಯರ್ಸ್ ಗಳು ಭಾರತ ತಂಡಕ್ಕೆ ಡೇಂಜರ್ ಅಗಲಿದ್ದಾರೆ ಅವರ ಬಗ್ಗೆ ತಿಳಿಸುತ್ತೇವೆ ಮೊದಲ ಹೆಸರು ಪಾಕಿಸ್ತಾನದ ನಾಯಕ ಬಾಬರ್ ಆಜಾಮ್ , ಇವರು ಕಳೆದ 2 ವರ್ಷಗಳಲ್ಲಿ 17 ಏಕದಿನ ಪಂದ್ಯಗಳಲ್ಲಿ 69 ರ ಸರಾಸರಿಯಲ್ಲಿ 1104 ರನ್ಸ್ ಗಳಿಸಿದ್ದಾರೆ , ಅದರಲ್ಲಿ 4 ಶತಕಗಳು ಸೇರಿವೆ , ಅವರ ಫಾರ್ಮ್ ಅದ್ಭುತವಾಗಿದೆ , ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಕೂಡ ರನ್ಸ್ ಗಳಿಸಿದ್ದಾರೆ , ಇದು ಕೂಡ ಭಾರತ ತಂಡಕ್ಕೆ ತಲೆ ನೋವಾಗಲಿದೆ.

ಪಾಕಿಸ್ತಾನದ ಎರಡನೇ ಶಕ್ತಿ ಶಹೀನ್ ಷ ಅಫ್ರಿದಿ , ಎಡಗೈ ವೇಗಿ , ಇವರು ಕಳೆದ 2 ವರ್ಷಗಳಲ್ಲಿ 8 ಏಕದಿನ ಪಂದ್ಯಗಳಲ್ಲಿ 17 ವಿಕೆಟ್ ಗಳನ್ನೂ ಪಡೆದಿದ್ದಾರೆ , 4 ಫಾರ್ 63 ಇವರ ಬೆಸ್ಟ್ ಫಿಗರ್ ಆಗಿದೆ , ಇವರ ಎಕಾನಮಿ 6 ಕ್ಕಿಂತ ಕಮ್ಮಿ ಇದೆ , ಭಾರತಹ್ದ ಬ್ಯಾಟ್ಸ್ ಮ್ಯಾನ್ ಗಳು ಎಡಗೈ ವೇಗಿಗಳ ಮುಂದೆ ಕಷ್ಟ ಪಡ್ತಾರೆ ಅದಕ್ಕಾಗಿ ಇವರು ಡೇಂಜರ್ ಆಗಲಿದ್ದಾರೆ ಪಾಕಿಸ್ತಾನದ ಮೂರನೇ ಶಕ್ತಿ ಹ್ಯಾರಿಸ್ ರೌಫ್ , ಫಾಸ್ಟ್ ಬೌಲರ್ ಆಗಿದ್ದಾರೆ , ಇವರು ಕಳೆದ 2 ವರ್ಷಗಳಲ್ಲಿ 14 ಏಕದಿನ ಪಂದ್ಯಗಳಲ್ಲಿ 25 ವಿಕೆಟ್ ಗಳನ್ನೂ ಪಡೆದಿದ್ದಾರೆ .

4 ಫಾರ್ 77 ಇವರ ಬೆಸ್ಟ್ ಫಿಗರ್ ಆಗಿದೆ , ಇವರ ಎಕಾನಮಿ 6 ಕ್ಕಿಂತ ಕಮ್ಮಿ ಇದೆ , ಇವರು ಕೂಡ ಭಾರತದ ಬ್ಯಾಟ್ಸ್ ಮ್ಯಾನ್ ಗಳಿಗೆ ತೊಂದರೆ ಕೊಡಬಲ್ಲರು ಪಾಕಿಸ್ತಾನದ ನಾಲ್ಕನೇ ಶಕ್ತಿ ನಸೀಮ್ ಷಾ , ಸ್ವಿಂಗ್ ಬೌಲರ್ ಆಗಿದ್ದಾರೆ , ಇವರು ಕಳೆದ 2 ವರ್ಷಗಳಲ್ಲಿ 8 ಏಕದಿನ ಪಂದ್ಯಗಳಲ್ಲಿ 23 ವಿಕೆಟ್ ಗಳನ್ನೂ ಪಡೆದಿದ್ದಾರೆ , 5 ಫಾರ್ 33 ಇವರ ಬೆಸ್ಟ್ ಫಿಗರ್ ಆಗಿದೆ , ಇವರ ಎಕಾನಮಿ 5 ಕ್ಕಿಂತ ಕಮ್ಮಿ ಇದೆ , ಪಾಕಿಸ್ತಾನದ ಐದನೇ ಶಕ್ತಿ ಬ್ಯಾಟ್ಸಮನ್ ಫಕರ್ ಜಮಾನ್ ಇವರು ಕಳೆದ 2 ವರ್ಷಗಳಲ್ಲಿ 17 ಏಕದಿನ ಪಂದ್ಯಗಳಲ್ಲಿ 51 ರ ಸರಾಸರಿಯಲ್ಲಿ 823 ರನ್ಸ್ ಗಳಿಸಿದ್ದಾರೆ , ಅದರಲ್ಲಿ 4 ಶತಕಗಳು ಸೇರಿವೆ.
ಇವರ ಫಾರ್ಮ್ ಕೂಡ ಅದ್ಭುತವಾಗಿದೆ , ಇವರ ಜೊತೆಗೆ ಮೊಹಮದ್ ರಿಜ್ವಾನ್ , ಇಮಾಮ ಉಲ್ ಹಕ್ ಇನ್ನ ಹಲವು ಉತ್ತಮ ಆಟಗಾರವು ಇದ್ದಾರೆ , ಅವರು ಕೂಡ ಅದ್ಬುತ ಪ್ರದರ್ಶನ ಕೊಡಬಹುದು. ಆದರೆ ಭಾರತ ತಂಡ ಯಾವುದಕ್ಕೂ ಕಮ್ಮಿ ಇಲ್ಲ , ಮೊದಲಿನಿಂದಲೂ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿಕೊಂಡು ಬಂದಿದೆ , ಈ ಸಲ ಕೂಡ ಏಷ್ಯಾ ಕಪ್ ಹಾಗು ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನವನ್ನು ಸದೆಬಡಿಯುವ ಶಕ್ತಿ ಹೊಂದಿದೆ , ಅದಕ್ಕಾಗಿ ಮುಂದೆ ಬರುವ ಐದು ಪಂದ್ಯಗಳಲ್ಲಿ ಭಾರತ ಪಾಕಿಸ್ತಾವನ್ನು ಮಣಿಸಲಿ ಎಂದು ಆಶಿಸೋಣ