ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ 4 ವರ್ಷಕ್ಕೆ ವಿಚ್ಛೇದನ ಪಡೆದ ಜೋಡಿ. ಇವರಿಬ್ಬರ ಮದುವೆ ಜೋರಾಗಿ ನಡೆದು, ಎಲ್ಲರೂ ಕೂಡ ಇವರಿಬ್ಬರನ್ನು ಆದರ್ಶ ಜೋಡಿ ಆಗುತ್ತಾರೆ ಎಂದುಕೊಂಡಿದ್ದರು. ಆದರೆ ಎಲ್ಲರೂ ಅಂದುಕೊಂಡಿದ್ದಕ್ಕೆ ವಿರುದ್ಧವಾಗಿಯೇ ನಡೆಯಿತು ಈ ಜೋಡಿ ಲೈಫ್ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರ. ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಇವರಿಬ್ಬರ ವಿಚ್ಛೇದನದ ಸುದ್ದಿ ದಿಢೀರ್ ಎಂದು ಜೋರಾಗಿ ಸದ್ದು ಮಾಡುವುದಕ್ಕೆ ಶುರುವಾಯಿತು. ಇಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ಕೋರ್ಟ್ ಗೆ ಬಂದು, ವಿಚ್ಛೇದನ ಪಡೆದರು. ಈ ಜೋಡಿ ಮತ್ತೆ ಒಂದಾಗುತ್ತಾರಾ? ಜರ್ನಲಿಸ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ನಿವೇದಿತಾ ಗೌಡ ಉತ್ತರ ಕೊಟ್ಟಿದ್ದು ಹೀಗೆ.. ಅವರು ಹೇಳಿದ್ದೇನು ಎಂದು ತಿಳಿಯೋಣ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿನ್ನೆಯಷ್ಟೇ ಒಂದು ಪ್ರೆಸ್ ಮೀಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ಪ್ರೆಸ್ ಮೀಟ್ ಕರೆದಿದ್ದರು, ಇಬ್ಬರು ಸುಂದರವಾಗಿ ಕಾಣಿಸಿಕೊಂಡರು. ಈ ಪ್ರೆಸ್ ಮೀಟ್ ಕರೆಯಲು ಮುಖ್ಯ ಕಾರಣ ಚಂದನ್ ನಿವೇದಿತಾ ಜೊತೆಯಾಗಿ ನಟಿಸುತ್ತಿರುವ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇವರಿಬ್ಬರು ವಿಚ್ಛೇದನ ಪಡೆಯುವುದಕ್ಕಿಂತ ಮೊದಲೇ ಸೆಟ್ಟೇರಿದ್ದ ಸಿನಿಮಾ ಇದು. ಆಗ ಸ್ವಲ್ಪ ಭಾಗದ ಚಿತ್ರೀಕರಣ ನಡೆದಿತ್ತು, ಈಗ ಉಳಿದ ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಂದನ್ ನಿವೇದಿತಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಸ್ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಂದನ್ ಹಾಗೂ ನಿವೇದಿತಾ ಆಕ್ಟ್ ಮಾಡುತ್ತಿರುವ ವಿಡಿಯೋ ನೋಡಿದ ಜನರು ಬೇರೆಯದೇ ಅರ್ಥ ಕೊಟ್ಟರು..

ಮೊದಲಿಗೆ ಯಾರಿಗೂ ಕೂಡ ಇದು ಸಿನಿಮಾ ಶೂಟಿಂಗ್ ಎಂದು ಗೊತ್ತಿರಲಿಲ್ಲ. ಚಂದನ್ ನಿವೇದಿತಾ ಮತ್ತೆ ಒಂದಾಗಿದ್ದಾರೆ, ಇದು ಬಹಳ ಸಂತೋಷದ ಸುದ್ದಿ ಎಂದೇ ಎಲ್ಲರೂ ಭಾವಿಸಿದ್ದರು. ವೈರಲ್ ಆದ ಆ ವಿಡಿಯೋ ಕೂಡ ಅದೇ ರೀತಿ ಇತ್ತು. ಚಂದನ್ ಅವರನ್ನು ನೋಡಿದ ತಕ್ಷಣವೇ ನಿವೇದಿತಾ ಗೌಡ ಭಾವುಕರಾಗಿ ಕಣ್ಣೀರು ಹಾಕುತ್ತಾ, ಚಂದನ್ ಅವರ ಬಳಿ ಬಂದು ಅವರ ಕೈಯನ್ನು ಹಿಡಿದುಕೊಂಡು, ಭಾವುಕರಾಗಿ ನೋಡುತ್ತಾರೆ. ಈ ವಿಡಿಯೋ ನೋಡಿದರೆ ಯಾರಿಗೆ ಆದರೂ ಈ ಜೋಡಿ ಮತ್ತೆ ಒಂದಾಗಿದ್ದಾರೆ ಎಂದೇ ಅನ್ನಿಸುವುದು. ಆದರೆ ಇದು ಸಿನಿಮಾ ಶೂಟಿಂಗ್ ಒಂದರ ವಿಡಿಯೋ ಎಂದು ನಂತರ ಗೊತ್ತಾಗಿದೆ. ಗೊತ್ತಾದ ಬಳಿಕ ಕೆಲವರು ಟ್ರೋಲ್ ಮಾಡಿದ್ದು ಇದೆ. ಒಟ್ಟಿನಲ್ಲಿ ಇವರಿಬ್ಬರು ಏನೇ ಮಾಡಿದರೂ ಕೂಡ ಸದಾ ಸುದ್ದಿಯಲ್ಲೇ ಇರುತ್ತಾರೆ..
ಇನ್ನು ಚಂದನ್ ಶೆಟ್ಟಿ ಹೀರೋ ಆಗಿ, ನಿವೇದಿತಾ ಗೌಡ ಹೀರೋಯಿನ್ ಆಗಿ ನಟಿಸುತ್ತಿರುವ ಸಿನಿಮಾ ಇದು. ಈ ಸಿನಿಮಾ ಇಂದ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆ ದಿನದ ಶೂಟಿಂಗ್ ಎಲ್ಲವೂ ಮುಗಿದ ನಂತರ ಪ್ರೆಸ್ ಮೀಟ್ ನಲ್ಲಿ ನಿವೇದಿತಾ ಹಾಗೂ ಚಂದನ್ ಕಾಣಿಸಿಕೊಂಡಿದ್ದು, ಜರ್ನಲಿಸ್ಟ್ ಗಳು ಇಬ್ಬರಿಗೂ ಹಲವು ಪ್ರಶ್ನೆಗಳಬನು ಕೇಳಿದ್ದು, ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ. ಚಂದನ್ ನಿವೇದಿತಾ ಮತ್ತೆ ಒಂದಾಗುತ್ತಾರಾ ಎನ್ನುವ ಬಗ್ಗೆ ಎಲ್ಲರಲ್ಲೂ ಒಂದು ಪ್ರಶ್ನೆ ಇದೆ. ಆ ಪ್ರಶ್ನೆಯನ್ನು ನಿವೇದಿತಾ ಅವರಿಗೆ ಒಬ್ಬರು ಜರ್ನಲಿಸ್ಟ್ ಕೇಳಿದ್ದು, ಆ ಪ್ರಶ್ನೆಗೆ ಆಕೆ ಕೊಟ್ಟಿರುವ ಉತ್ತರ ನಿಜಕ್ಕೂ ಶಾಕಿಂಗ್ ಆಗಿದೆ. ನಿವೇದಿತಾ ಗೌಡ ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಈಗಿನ ಕಾಲದಲ್ಲಿ ಬಹುತೇಕ ಜನರದ್ದು ದುಡುಕು ನಿರ್ಧಾರಗಳೇ. ಹಲವರು ದಿಢೀರ್ ಎಂದು ಮದುವೆ ಆಗುತ್ತಾರೆ ಅದೇ ರೀತಿ ದಿಢೀರ್ ಎಂದು ವಿಚ್ಛೇದನವನ್ನು ಪಡೆಯುತ್ತಾರೆ. ಎಲ್ಲವೂ ಆ ಕ್ಷಣಕ್ಕೆ ಅನ್ನಿಸುವ ನಿರ್ಧಾರಗಳು. ಇದರಿಂದ ಬದುಕು ಹಾಳಾಗುವ ಸಾಧ್ಯತೆ ಸಹ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಜೋಡಿಗಳು, ವಿಚ್ಛೇದನ ಪಡೆದ ನಂತರ ಕೂಡ, ಅವರಲ್ಲಿರುವ ಪ್ರೀತಿ ಕಡಿಮೆಯಾಗದೆ, ಒಬ್ಬರಿಗೊಬ್ಬರು ಎಷ್ಟು ಮುಖ್ಯವಾಗಿದ್ದಾರೆ ಎನ್ನುವುದು ಅರ್ಥವಾಗಿ, ಇಬ್ಬರೂ ಮತ್ತೆ ಒಂದಾಗುತ್ತಾರೆ. ಇಂಥ ಹಲವು ಘಟನೆಗಳು ನಡೆದಿದೆ, ಹಲವು ಉದಾಹರಣೆಗಳು ಕೂಡ ಇದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಚಾರದಲ್ಲಿ ಕೂಡ ಇದೇ ರೀತಿ ಆಗಬಹುದು ಎನ್ನುವ ನಿರೀಕ್ಷೆ ಜನರಲ್ಲಿ ಇತ್ತು. ಅದಕ್ಕೆ ನಿವೇದಿತಾ ಅವರಿಗೆ ಈ ಪ್ರಶ್ನೆ ಕೇಳಲಾಗಿದೆ.
ಇದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ, “ಬೇರೆಯವರು ಒಂದಾಗಿರುವುದಕ್ಕೆ ಹಲವು ಕಾರಣ ಇರಬಹುದು. ಅವರಿಬ್ಬರ ನಡುವೆ ಪ್ರೀತಿ ಹೆಚ್ಚಾಗಿ ಇರಬಹುದು. ನಮ್ಮ ನಡುವೆ ಆ ಬಾಂಡಿಂಗ್ ಇದೆ, ಎಷ್ಟೊಂದು ವರ್ಷ ಜೊತೆಯಾಗಿ ಇದ್ವಿ ಅಂದಮೇಲೆ ಆ ಬಾಂಡಿಂಗ್ ಇದ್ದೇ ಇರುತ್ತದೆ. ಆದರೆ ನಾವು ದೂರ ಆಗಿದ್ದು ನಮ್ಮಲ್ಲಿ ಹೊಂದಾಣಿಕೆ ಇಲ್ಲ ಎನ್ನುವ ಕಾರಣಕ್ಕೆ. ಮತ್ತೆ ಒಂದಾಗುತ್ತೀವಿ ಅಂತ ಹೇಳೋದಕ್ಕೆ ಆಗೋದಿಲ್ಲ..” ಎಂದು ಹೇಳಿದ್ದಾರೆ ನಿವೇದಿತಾ ಗೌಡ. ಈ ಮೂಲಕ ತಾವಿಬ್ಬರು ಮತ್ತೆ ಒಂದಾಗೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಜೋಡಿಯನ್ನು ಇಷ್ಟ ಪಡುವವರಿಗೆ ಈ ಉತ್ತರ ನಿರಾಶೆ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಜೋಡಿ, ಬೇರೆ ಆಗಿದ್ದು ಜನರಿಗೆ ಶಾಕ್ ಹಾಗೂ ಆಶ್ಚರ್ಯ ಎರಡನ್ನು ತಂದಿತ್ತು. ಈ ಹೊಸ ವಿಡಿಯೋ ನೋಡಿ ಹೊಸ ನಿರೀಕ್ಷೆ ಸಹ ಶುರುವಾಗಿತ್ತು .

ಆದರೆ ಇವರಿಬ್ಬರು ಎಲ್ಲರಿಗಿಂತ ಡಿಫರೆಂಟ್ ಅನ್ನೋದನ್ನ ಒಪ್ಪಲೇಬೇಕು. ವಿಚ್ಛೇದನ ಪಡೆಯಲು ಬಂದಾಗ ಕೈ ಕೈ ಹಿಡಿದುಕೊಂಡು ಬಂದರು. ಹಾಗೆಯೇ ವಿಚ್ಛೇದನದ ಬಗ್ಗೆ ಸ್ಪಷ್ಟನೆ ಕೊಡುವುದಕ್ಕಾಗಿ ಪ್ರೆಸ್ ಮೀಟ್ ಕರೆದಾಗಲು ಜೊತೆಯಾಗಿ ಬಂದರು. ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು, ಟ್ರೋಲ್ ಮಾಡಬೇಡಿ ಎಂದಿದ್ದರು. ಈಗ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಬೇರೆ ಸೆಲೆಬ್ರಿಟಿ ಜೋಡಿಗಳಲ್ಲಿ ಈ ರೀತಿ ಕಂಡುಬರುವುದು ಬಹಳ ಕಡಿಮೆ. ಏನೇ ಆದರೂ ಇವರಿಬ್ಬರು ಜೊತೆಯಾಗಿ ನಟಿಸುತ್ತಿರುವ ಸಿನಿಮಾಗೆ ಯಶಸ್ಸು ಸಿಗಲಿ ಇಬ್ಬರಿಗೂ ಚಿತ್ರರಂಗದಲ್ಲಿ ನಟರಾಗಿ ಒಳ್ಳೆಯ ನೆಲೆ ಸಿಗಲಿ ಎಂದು ವಿಶ್ ಮಾಡೋಣ..