ಸೌತ್ ಇಂಡಿಯಾದಲ್ಲಿ ಭಾರಿ ಹೆಸರು ಮಾಡಿದ 90ರ ದಶಕದ ಖ್ಯಾತ ನಟಿಯರಲ್ಲಿ ಮೀನಾ ಅವರು ಕೂಡ ಒಬ್ಬರು. ಈಗ ಆಗೊಮ್ಮೆ ಈಗೊಮ್ಮೆ ಅಪರೂಪವಾಗಿ ಮೀನಾ ಅವರು ನಟನೆ ಮಾಡುತ್ತಾರೆ, ಇತ್ತೀಚೆಗೆ ಇವರು ಗಂಡನನ್ನು ಕಳೆದುಕೊಂಡರು. ಪ್ರಸ್ತುತ ಮಗಳ ಜೊತೆಗೆ ನಟಿ ಮೀನಾ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಒಂಟಿತನದಲ್ಲಿ ಇರಲು ಸಾಧ್ಯ ಆಗದೇ ಮೀನಾ ಅವರು ತಮಿಳಿನ ಖ್ಯಾತ ನಟನ ಜೊತೆಗೆ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಆ ನಟ ಯಾರು? ಈ ಮದುವೆ ಸುದ್ದಿ ನಿಜಾನ? ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..

ನಟಿ ಮೀನಾ ಅವರು ಬಾಲನಟಿಯಾಗಿ ನಟನೆಯ ವೃತ್ತಿಯನ್ನು ಶುರು ಮಾಡಿದರು. ಬಳಿಕ ತಮಿಳಿನಲ್ಲಿ ಹೀರೋಯಿನ್ ಆಗಿ ನಟನೆ ಶುರು ಮಾಡಿದರು. ಇವರು ತಮಿಳಿನಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲಯಾಳಂ ಈ ಎಲ್ಲಾ ಭಾಷೆಗಳಲ್ಲಿ ಸಹ ನಟಿಸಿದ್ದಾರೆ. 90ರ ದಶಕದ ದೊಡ್ಡ ಸ್ಟಾರ್ ಹೀರೋಯಿನ್ ಗಳಲ್ಲಿ ಮೀನಾ ಅವರು ಕೂಡ ಒಬ್ಬರು. ಆಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ಮೀನಾ ಅವರು ತೆರೆ ಹಂಚಿಕೊಂಡಿದ್ದಾರೆ. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು.
ಕನ್ನಡದಲ್ಲಿ ಸಹ ಮೀನಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಅವರೊಡನೆ ಪುಟ್ನಂಜ, ಜಾಣ, ಮೊಮ್ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಜೋಡಿ ಎಲ್ಲರ ಮೆಚ್ಚಿನ ಜೋಡಿಗಳಲ್ಲಿ ಒಂದು. ಅಷ್ಟೇ ಅಲ್ಲದೇ ವಿಷ್ಣುವರ್ಧನ್ ಅವರು, ಅಂಬರೀಶ್ ಅವರು ಇವರೆಲ್ಲರ ಜೊತೆಗೆ ಕೂಡ ಕನ್ನಡದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇನ್ನು ಬೇರೆ ಎಲ್ಲಾ ಭಾಷೆಗಳಲ್ಲಿ ಕೂಡ ಸ್ಟಾರ್ ನಟರ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆರಿಯರ್ ನ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಮದುವೆಯಾದರು.

ಇವರು ಮದುವೆಯಾಗಿದ್ದು ಕರ್ನಾಟಕದ ಹುಡುಗನ ಜೊತೆಗೆ. ಬೆಂಗಳೂರಿನ ಮೂಲದ ಉದ್ಯಮಿ ವಿದ್ಯಾಸಾಗರ್ ಅವರೊಡನೆ ಮೀನಾ ಅವರು ಮದುವೆಯಾದರು. ಈ ಜೋಡಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ. ಮಗುವಿನ ಹೆಸರು ನೈನಿಕಾ ಆಗಿದ್ದು, ಈ ಮಗು ತಮಿಳು ನಟ ವಿಜಯ್ ಅವರ ಜೊತೆಗೆ ತೆರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಸುಂದರವಾಗಿದ್ದ ಇವರ ಸಂಸಾರದ ಮೇಲೆ ಎಷ್ಟು ದೃಷ್ಟಿ ಬಿದ್ದಿತೋ ಗೊತ್ತಿಲ್ಲ. ಒಂದೆರಡು ವರ್ಷಗಳ ಹಿಂದೆ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ವಿಧಿವಶರಾದರು. ಪ್ರಸ್ತುತ ಮೀನಾ ಅವರು ಒಂಟಿಯಾಗಿದ್ದಾರೆ.
ಇವರು ತಮಿಳಿನ ಖ್ಯಾತ ನಟ ಧನುಶ್ ಅವರೊಡನೆ ಮದುವೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಆದರೆ ಇದು ನಿಜವಲ್ಲ ಎಂದು ಮೀನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿರುವ ಮೀನಾ ಅವರು, ಇದೆಲ್ಲಾ ಸುಳ್ಳು ಸುದ್ದಿ, ಮತ್ತೆ ಮದುವೆ ಆಗುವ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ. ಧನುಷ್ ಅವರು ಸಹ ಈಗ ಒಂಟಿಯಾಗಿದ್ದಾರೆ, ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ಈ ಕಾರಣಕ್ಕೆ ಬೇಕೆಂದೇ ಇವರ ಬಗ್ಗೆ ಈ ರೀತಿ ಬರೆದು, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮೀನಾ ಅವರ ಎರಡನೇ ಮದುವೆ ಸುದ್ದಿಯಲ್ಲಿ ಯಾವುದೇ ನಿಜಾಂಶವಿಲ್ಲ. ಅವರು ಮಗಳ ಜೊತೆಗೆ ಆರಾಮಾಗಿದ್ದಾರೆ.