ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಅವರು 10 ವರ್ಷಗಳ ನಂತರ ಡೈರೆಕ್ಷನ್ ಕ್ಯಾಪ್ ತೊಟ್ಟು ನಿರ್ದೇಶನ ಮಾಡಿರುವ ಸಿನಿಮಾ ಯುಐ. ಈ ಸಿನಿಮಾ ಡಿಸೆಂಬರ್ 20ರಂದು ತೆರೆಕಂಡು ಭಾರಿ ಪ್ರದರ್ಶನ ಕಾಣುತ್ತಿದೆ. ಉಪೇಂದ್ರ ಅವರ ಸಿನಿಮಾ ಅಂದಮೇಲೆ ವೀಕ್ಷಕರ ತಲೆಗೆ ಹುಳ ಬಿಡುವ ಕೆಲವು ಅಂಶಗಳು ಇರಲೇಬೇಕು. ಯುಐ ಸಿನಿಮಾದಲ್ಲಿ ಅದೆಲ್ಲವೂ ಇದೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೆ ಒಂದಷ್ಟು ಪ್ರಶ್ನೆಗಳು ಕಾಡಿವೆ.. ಇನ್ನಷ್ಟು ಜನರು ಸಿನಿಮಾದಲ್ಲಿರುವ ಕೆಲವು ಕಾನ್ಸೆಪ್ಟ್ ಗಳನ್ನು ಅರ್ಥ ಮಾಡಿಕೊಳ್ಳಲು ಮತ್ತೆ ಮತ್ತೆ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ ನೋಡಿದವರಿಗೆ ಕಾಡಿದ ಪ್ರಶ್ನೆ ಸನ್ನಿ ಲಿಯೋನ್ ಎಲ್ಲಿ? ಎನ್ನುವುದು..

ಹೌದು, ಯುಐ ಸಿನಿಮಾ ಚಿತ್ರೀಕರಣದ ಹಂತದಲ್ಲಿದ್ದಾಗ ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಇದ್ದಾರೆ ಎನ್ನುವ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಉಪೇಂದ್ರ ಅವರೊಡನೆ ಸನ್ನಿ ಲಿಯೋನ್ ಅವರು ಇರುವ ಕೆಲವು ಫೋಟೋಸ್ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ವಿಚಾರ, ಹಾಗೂ ಒಂದೆರಡು ಪೋಸ್ಟರ್ ಗಳು ಕೂಡ ಭಾರಿ ಸೌಂಡ್ ಮಾಡಿದ್ದವು. ಎಲ್ಲರೂ ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ಅವರನ್ನ ನೋಡಲು ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ಕಾಣಿಸಲೇ ಇಲ್ಲ.. ನೋಡುಗರಿಗೆ ಇದರಿಂದ ಬೇಸರ ಆಗಿದ್ದಂತೂ ನಿಜ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಲವು ಮೀಮ್ ಪೇಜ್ ಗಳಲ್ಲಿ, ಟ್ರೋಲ್ ಪೇಜ್ ಗಳಲ್ಲಿ ಸನ್ನಿ ಲಿಯೋನ್ ಸಿನಿಮಾದಲ್ಲಿ ಇದ್ರ? ಅವರ ಸೀನ್ ಕಾಣಿಸ್ತಾ? ಎನ್ನುವ ಟ್ರೋಲ್ ಗಳು ವೈರಲ್ ಆದವು. ಜೊತೆಗೆ ಇದು ಉಪೇಂದ್ರ ಅವರ ಸಿನಿಮಾ ಇಲ್ಲಿ ಏನು ಬೇಕಾದರೂ ಆಗಬಹುದು. ಬಹುಶಃ ಪಾರ್ಟ್2 ನಲ್ಲಿ ಸನ್ನಿ ಲಿಯೋನ್ ಬರಬಹುದು ಎಂದು ಕೂಡ ಜನರು ಮಾತನಾಡಿಕೊಂಡರು. ನಿಜಕ್ಕೂ ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಇದ್ದಾರಾ? ಇವರ ಸೀನ್ಸ್ ಮತ್ತು ಸಾಂಗ್ ಅನ್ನ ಶೂಟಿಂಗ್ ಮಾಡಿ, ಸಿನಿಮಾದಲ್ಲಿ ಹಾಕಿಲ್ವ? ಸನ್ನಿ ಲಿಯೋನ್ ಯಾಕೆ ಯಾವ ದೃಶ್ಯದಲ್ಲೂ ಕಾಣಿಸಿಲ್ಲ ಎನ್ನುವ ಹಲವು ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿಬಂದಿದೆ..ಇದಕ್ಕೆಲ್ಲ ಉಪೇಂದ್ರ ಅವರೇ ಉತ್ತರ ಕೊಟ್ಟಿದ್ದಾರೆ.

ನಿನ್ನೆಯಷ್ಟೇ ಯುಐ ಸಿನಿಮಾದ ಸಕ್ಸಸ್ ಮೀಟ್ ಪ್ರೆಸ್ ಮೀಟ್ ನಡೆದಿದೆ. ಅದರಲ್ಲಿ ಜರ್ನಲಿಸ್ಟ್ ಒಬ್ಬರು ಉಪೇಂದ್ರ ಅವರಿಗೆ ಇದೇ ಪ್ರಶ್ನೆ ಕೇಳಿದ್ದು, ಅದಕ್ಕೆ ಉಪೇಂದ್ರ ಅವರು ಸನ್ನಿ ಲಿಯೋನ್ ಅನ್ನೋದೇ ಒಂದು ಭ್ರಮೆ ಎಂದಿದ್ದಾರೆ. ಸನ್ನಿ ಲಿಯೋನ್ ನಮ್ಮ ಸಿನಿಮಾದಲ್ಲಿ ಇದ್ದಾರೆ ಅಂತ ನಾನು ಎಲ್ಲೂ ಹೇಳೇ ಇಲ್ಲ. ನನ್ನ ತಂಡ ಕೂಡ ಹೇಳಿಲ್ಲ, ಇದು ಯಾರೋ ಹಬ್ಬಿಸಿರುವ ಸುಳ್ಳು ಸುದ್ದಿ ಎಂದಿದ್ದಾರೆ. ಅವರ ಹಾಡನ್ನ ಶೂಟಿಂಗ್ ಮಾಡಿದ್ರಾ ಎಂದು ಕೇಳಿದ್ದಕ್ಕೆ, ಇಲ್ಲ ಅಂದಮೇಲೆ ಶೂಟಿಂಗ್ ಮಾಡಿರೋಕೆ ಹೇಗೆ ಸಾಧ್ಯ ಎಂದು ಹೇಳಿದ್ದಾರೆ ಉಪೇಂದ್ರ. ಉಪೇಂದ್ರ ಅವರ ಮಾತಿನ ಅನುಸಾರ ಸನ್ನಿ ಲಿಯೋನ್ ಅವರು ಸಿನಿಮಾದಲ್ಲಿ ಇಲ್ಲ ಎನ್ನುವುದಂತೂ ಸ್ಪಷ್ಟವಾಗಿದೆ..
ಹಾಗಿದ್ದಲ್ಲಿ ಸನ್ನಿ ಲಿಯೋನ್ ಜೊತೆಗೆ ಉಪೇಂದ್ರ ಅವರು ಇರುವ ಫೋಟೋಸ್ ವೈರಲ್ ಆಗಿದ್ದು ಹೇಗೆ? ಇದು ಬೇರೆ ಸಿನಿಮಾ ಶೂಟಿಂಗ್ ಇರಬಹುದಾ ಎನ್ನುವ ಕುತೂಹಲ ಸಹ ಜನರಲ್ಲಿ ಶುರುವಾಗಿದೆ. ಉಪೇಂದ್ರ ಅವರು ಬುದ್ಧಿವಂತ 2 ಸಿನಿಮಾದಲ್ಲಿ ಸಹ ನಟಿಸಿದ್ದಾರೆ, ಆ ಸಿನಿಮಾ ಬಿಡುಗಡೆ ಆಗಬೇಕಿದೆ. ಹಾಗಾಗಿ ಬಹುಶಃ ಸನ್ನಿ ಲಿಯೋನ್ ಅವರು ಬುದ್ಧಿವಂತ2 ನಲ್ಲಿ ನಟಿಸಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಒಟ್ಟಿನಲ್ಲಿ ಯುಐ ಸಿನಿಮಾಗೆ ಸನ್ನಿ ಲಿಯೋನ್ ಅವರನ್ನೂ ನೋಡಬಹುದು ಎನ್ನುವ ನಿರೀಕ್ಷೆಯಲ್ಲಿ ಹೋದ ಫ್ಯಾನ್ಸ್ ಗೆ ಬೇಸರ ಆಗಿದೆ. ಜೊತೆಗೆ ಸಿನಿಮಾ ನೋಡಿ ತಲೆಗೆ ಕೂಡ ಹುಳ ಬಿಟ್ಟುಕೊಂಡ ಹಾಗೆ ಆಗಿದೆ.