ಕಲರ್ಸ್ ಕನ್ನಡ ವಾಹಿನಿಯಲ್ಲಿ ಉತ್ತಮವಾಗಿ ಸಾಗುತ್ತಿರುವ ಧಾರವಾಹಿಗಳಲ್ಲಿ ಲಕ್ಷ್ಮೀ ಬಾರಮ್ಮ ಕೂಡ ಪ್ರಮುಖ ಸ್ಥಾನದಲ್ಲಿದೆ. ಈ ಧಾರಾವಾಹಿಯನ್ನು ವೀಕ್ಷಕರು ಬಹಳ ಎಂಜಾಯ್ ಮಾಡಿಕೊಂಡು ನೋಡುತ್ತಿದ್ದಾರೆ. ಈಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಕೇವಲ ನಾಯಕ ಮತ್ತು ನಾಯಕಿಯ ಪಾತ್ರವಲ್ಲ ಎಲ್ಲಾ ಪಾತ್ರಗಳು ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಇದೀಗ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇಂದ ಗಂಗಕ್ಕ ಪಾತ್ರ ನಿರ್ವಹಿಸುತ್ತಿದ್ದ ನಟಿ ಹರ್ಷಿಕಾ ಹೊರಬಂದಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿಯುವ ಕುತೂಹಲ ಜನರಲ್ಲಿ ಸಹ ಇದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಒಂದು ಧಾರಾವಾಹಿ ಎಂದರೆ ಬಹುತೇಕ ಪ್ರತಿ ದಿನ ನೋಡುವ ಮನರಂಜನೆಯ ವಿಷಯ ಆಗಿರುತ್ತದೆ. ಧಾರಾವಾಹಿಗಳು ಜನರ ಮನಸ್ಸಿಗೆ ಕನೆಕ್ಟ್ ಆಗಿರುತ್ತದೆ ಎಂದರೂ ತಪ್ಪಲ್ಲ. ತಮ್ಮ ಮನೆಯ ಟಿವಿಗಳಲ್ಲಿ ಈ ಕಥೆಗಳನ್ನು ನೋಡುವ ಕಾರಣದಿಂದ ಜನರು ಆ ಕಥೆಯ ಜೊತೆಗೆ ಪಾತ್ರಗಳ ಜೊತೆಗೆ ಕನೆಕ್ಟ್ ಆಗಿರುತ್ತಾರೆ. ತಮ್ಮ ಮನೆಯಲ್ಲೇ ನಡೆಯುತ್ತಿರುವ ಕಥೆ ಇರಬಹುದೇನೋ ಎಂದುಕೊಳ್ಳುತ್ತಾರೆ. ಪಾತ್ರಗಳ ಜೊತೆಗೆ ಅಟ್ಯಾಚ್ ಆಗುತ್ತಾರೆ. ಪಾತ್ರಗಳಲ್ಲಿ ತಮಗೆ ಗೊತ್ತಿರುವವರನ್ನು ಅಥವಾ ಕುಟುಂಬದವರ ಹಾಗೆ ಅಂದುಕೊಳ್ಳುತ್ತಾರೆ. ಅದೇ ರೀತಿ ಪಾತ್ರಗಳಿಗೂ ಕನೆಕ್ಟ್ ಆಗಿರುತ್ತಾರೆ.

ಆ ರೀತಿ ಇದ್ದಾಗ ಒಂದು ಪಾತ್ರ ಧಾರಾವಾಹಿ ಇಂದ ಹೊರಬಂದರೆ, ಬೇರೆಯವರು ಆ ಪಾತ್ರಕ್ಕೆ ಬಂದರೆ ಆಗ ಜನರಿಗೆ ಆಶ್ಚರ್ಯ ಆಗುವುದರ ಜೊತೆಗೆ ಹೊಸ ಕಲಾವಿದರನ್ನು ಒಪ್ಪಿಕೊಳ್ಳುವುದಕ್ಕೆ ಸಮಯ ಆಗುತ್ತದೆ. ಇದೀಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮನೆಕೆಲಸದಾಕೆ ಗಂಗಕ್ಕ ಪಾತ್ರದಲ್ಲಿ ನಟಿಸುತ್ತಿರುವ ನಟಿ ಹರ್ಷಿತಾ ಅವರು ಹೊರಬಂದಿದ್ದು, ಈ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ಹರ್ಷಿತ ಅವರು ಗಂಗಾ ಪಾತ್ರದಲ್ಲಿ ಉತ್ತಮವಾಗಿ ನಟಿಸುತ್ತಿದ್ದರು. ಇದ್ದಕ್ಕಿದ್ದಂತೆ ಬೇರೆಯವರು ಬರುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಸಹ ಇತ್ತು, ಈ ಪ್ರಶ್ನೆಯನ್ನು ಅಭಿಮಾನಿಗಳು ಹರ್ಷಿತಾ ಅವರಿಗೆ ಕೇಳಿದ್ದಾರೆ..
ಇದಕ್ಕೆ ಹರ್ಷಿತಾ ಅವರು ಇನ್ಸ್ಟಾಗ್ರಾಮ್ ಮೂಲಕ ಉತ್ತರ ಕೊಟ್ಟಿದ್ದು, ಪ್ರೊಡಕ್ಷನ್ ಟೀಮ್ ರೀಪ್ಲೇಸ್ಮೆಂಟ್ ಗಾಗಿ ಹುಡುಕುತ್ತಿರುವ ವಿಷಯವನ್ನ ತಮಗೆ ತಿಳಿಸದೇ ಶುರು ಮಾಡಿದರು ಎಂದಿದ್ದಾರೆ. ಕಲರ್ಸ್ ಕನ್ನಡ ಚಾನೆಲ್ ಮೇಲೆ ತಮಗೆ ಯಾವುದೇ ಬೇಸರ ಇಲ್ಲ, ತಾವು ಮಜಾ ಭಾರತ ವಾಹಿನಿಯಿಂದ ಬಂದಿರುವ ಕಾರಣ ಕಲರ್ಸ್ ಕನ್ನಡ ವಾಹಿನಿ ತಮ್ಮ ಕೆರಿಯರ್ ಗೆ ತುಂಬಾ ಸಹಾಯ ಮಾಡಿದೆ, ಚಾನೆಲ್ ಗೆ ಯಾವಾಗಲೂ ಋಣಿ ಆಗಿರುತ್ತೇನೆ ಎಂದಿದ್ದಾರೆ. ಹಾಗೆಯೇ ಪ್ರೊಡಕ್ಷನ್ ಹೌಸ್ ಮೇಲೆ ಕೂಡ ತಮಗೆ ಬೇಸರ ಇಲ್ಲ ಎಂದಿದ್ದು, ಮಿಲನಾ ಪ್ರಕಾಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಬೇರೆ ಚಾನೆಲ್ ಪ್ರಾಜೆಕ್ಟ್ ಗೆ ಸಮಯ ಕೊಡುತ್ತಿದ್ದರೂ, ಲಕ್ಷ್ಮೀ ಬಾರಮ್ಮ ಧಾರವಾಹಿಗು ಡೇಟ್ಸ್ ಅಡ್ಜಸ್ಟ್ ಮಾಡುತ್ತಿದ್ದರೂ ಸಹ ಮತ್ತೊಬ್ಬರ ಹುಡುಕಾಟ ನಡೆಯುತ್ತಲೇ ಇತ್ತು, ಆ ವಿಷಯ ಗೊತ್ತಾಗಿ ಬೇಸರದಿಂದ ತಾವು ಧಾರಾವಾಹಿ ಇಂದ ಹೊರಬಂದಿರುವುದಾಗಿ ತಿಳಿಸಿದ್ದಾರೆ ನಟಿ ಹರ್ಷಿತಾ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.. ಲಕ್ಷ್ಮೀ ಬಾರಮ್ಮ ಧಾರಾವಹಿಗೆ ಮತ್ತೆ ಬರುವುದಿಲ್ಲ, ಆದರೆ ಬೇರೆ ಧಾರಾವಾಹಿಗಳ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿದ್ದಾರೆ ನಟಿ ಹರ್ಷಿತಾ.