ಭಾರತ-ಪಾಕಿಸ್ತಾನ ಯಾಕೆ ಹೊಡೆದಾಡುತ್ತಿವೆ..?, ನೆರೆ ರಾಷ್ಟ್ರಗಳ ನಡುವಿನ ಈ ಕದನ ನಿನ್ನೆ ಮೊನ್ನೆಯದಲ್ಲ.. ಸ್ವಾತಂತ್ರ್ಯಾ ನಂತರ ಇದುವರೆಗೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಎರಡು ಯುದ್ಧಗಳು ನಡೆದಿವೆ.. ಇದರ ನಡುವೆ ನಿರಂತರವಾಗಿ ಕಿತ್ತಾಟಗಳು ನಡೆಯುತ್ತಲೇ ಇವೆ.. ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಉಗ್ರರು ಆಗಾಗ ಪೈಶಾಚಿಕ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ.. ಪಾಕಿಸ್ತಾನ ಸೈನ್ಯ ಕೂಡಾ ಹಲವಾರು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.. ಅಷ್ಟಕ್ಕೂ ಈ ಕಾಶ್ಮೀರ ಯಾಕೆ ವಿವಾದಿತ ಪ್ರದೇಶವಾಗಿದೆ..? ಕಾಶ್ಮೀರಕ್ಕಾಗಿ ಎರಡೂ ದೇಶಗಳ ಹೋರಾಟ ಯಾವಾಗಿಂದ ಶುರುವಾಯಿತು..? ಈ ವಿವಾದದ ಇತಿಹಾಸ ಏನು..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಭಾರತ-ಪಾಕ್ ಸಂಘರ್ಷ ಎಷ್ಟು ದಿನದಿಂದ ನಡೆಯುತ್ತಿದೆ..?
ಕಾಶ್ಮೀರ ಅನ್ನೋದು ನೋಡೋದಕ್ಕೆ ರಮಣೀಯವಾದ ಪ್ರದೇಶ.. ಹಿಮಪರ್ವತಗಳು, ಸರೋವರಗಳು, ಅನೇಕ ಹಚ್ಚ ಹಸಿರಿನ ಹುಲ್ಲುಗಾವಲು ಈ ಪ್ರದೇಶದ ಅಂದವನ್ನು ಹೆಚ್ಚಿಸಿದೆ.. ಪ್ರವಾಸೋದ್ಯಮದಿಂದಲೇ ಈ ಪ್ರದೇಶಕ್ಕೆ ಹೆಚ್ಚಿನ ಆದಾಯ ಸಿಗುತ್ತದೆ.. ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.. ಪ್ರಪಂಚದ ನಾನಾ ಕಡೆಗಳಿಂದಲೂ ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ.. 1947ರಲ್ಲಿ ಬ್ರಿಟೀಷರಿಂದ ನಾವು ಸ್ವಾತಂತ್ರ್ಯ ಪಡೆದವು.. ಆಗಲೇ ಭಾರತ ಹಾಗೂ ಪಾಕಿಸ್ತಾನಗಳು ಬೇರೆಯಾದವು.. ಈ ಸಂದರ್ಭದಲ್ಲಿ ಭಾರತೀಯ ಸ್ವಾತಂತ್ರ್ಯ ಕಾಯ್ದೆಯಡಿಯಲ್ಲಿ ಒದಗಿಸಲಾದ ವಿಭಜನಾ ಯೋಜನೆಯಡಿಯಲ್ಲಿ, ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರವು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಲು ಮುಕ್ತವಾಗಿತ್ತು.. ಆದ್ರೆ ಆಗ ಜಮ್ಮು-ಕಾಶ್ಮೀರದಲ್ಲಿ ಮಹಾರಾಜ ಹರಿಸಿಂಗ್ ಆಳ್ವಿಕೆ ಇತ್ತು.. ರಾಜ ಹರಿಸಿಂಗ್ ಕಾಶ್ಮೀರ ಸ್ವತಂತ್ರವಾಗಬೇಕು ಎಂದು ಬಯಸಿದ್ದರು.. ಆದ್ರೆ, 1947ರ ಆಕ್ಟೋಬರ್ ನಲ್ಲಿ ಪಾಕಿಸ್ತಾನದ ಬುಡಕಟ್ಟು ಜನಾಂಗದವರು ಕಾಶ್ಮೀರದ ಮೇಲೆ ದಾಳಿ ಮಾಡಿದರು.. ಈ ವೇಳೆ ರಾಜ ಹರಿಸಿಂಗ್ಗೆ ಭಾರತ ಬೆಂಬಲವಾಗಿ ನಿಂತಿತ್ತು.. ಈ ಕಾರಣಕ್ಕಾಗಿ ರಾಜಾ ಹರಿಸಿಂಗ್ ಕಾಶ್ಮೀರ ಪ್ರದೇಶವನ್ನು ಭಾರತಕ್ಕೆ ಸೇರಿಸಲು ನಿರ್ಧಾರ ಮಾಡುತ್ತಾರೆ..

ಇದೇ ವೇಳೆ ಎರಡೂ ದೇಶಗಳ ನಡುವೆ ಯುದ್ಧ ಶುರುವಾಗುತ್ತದೆ.. ಆಗ ಭಾರತ ಮಧ್ಯಪ್ರವೇಶ ಮಾಡುವಂತೆ ವಿಶ್ವಸಂಸ್ಥೆಯನ್ನು ಮನವಿ ಮಾಡಿಕೊಳ್ಳುತ್ತದೆ.. ವಿಶ್ವಸಂಸ್ಥೆ ಕಾಶ್ಮೀರ ಯಾವ ದೇಶಕ್ಕೆ ಸೇರಬೇಕು ಎಂಬುದರ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಎಂದು ಸೂಚಿಸುತ್ತದೆ.. ನಂತರ 1949ರಲ್ಲಿ ವಿಶ್ವಸಂಸ್ಥೆ ಶಿಫಾರಸಿನಂತೆ ಕಾಶ್ಮೀರ ಪ್ರದೇಶವನ್ನು ಎರಡು ಭಾಗಗಳಾಗಿ ವಿಂಗಡಿಸಿ ಗಡಿಯಲ್ಲಿ ಕದನ ವಿರಾಮ ಸ್ಥಾಪನೆಯ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕುತ್ತವೆ..
ಅನಂತರ ಎರಡೂ ದೇಶಗಳ ನಡುವೆ 1965ರಲ್ಲಿ ಯುದ್ಧ ನಡೆಯುತ್ತದೆ.. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನ ಪಡೆಗಳಿಗೆ ಮಣ್ಣು ಮುಕ್ಕಿಸುತ್ತದೆ.. ಈ ಸಮಯದಲ್ಲೇ ಎರಡೂ ದೇಶಗಳು ತಮ್ಮ ಬಳಿ ಅಣ್ವಸ್ತ್ರಗಳಿವೆ ಎಂದು ಘೋಷಿಸಿಕೊಂಡಿದ್ದವು.. ಈಗಲೂ ಪಾಕಿಸ್ತಾನ ಕಾಶ್ಮೀರ ನಮ್ಮದು ಎಂದು ಹೇಳಿಕೊಳ್ಳುತ್ತಿದೆ.. ಕಾಶ್ಮೀರದ ಕೆಲ ಪ್ರದೇಶವನ್ನು ಪಾಕ್ ಆಕ್ರಮಿಸಿಕೊಂಡಿದೆ.. ಬಹುಭಾಗ ಭಾರತದ ಸುಪರ್ದಿಯಲ್ಲಿದೆ..
ಕಾಶ್ಮೀರದಲ್ಲಿ ಕುಕೃತ್ಯಗಳು ಹೆಚ್ಚಾಗಲು ಕಾರಣಗಳೇನು..?
ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹೆಚ್ಚಿದ್ದರು.. ಅಲ್ಲಿ ನಿರಂತರವಾಗಿ ನಡೆಯುತ್ತಿದ್ದ ಪೈಶಾಚಿಕ ಕೃತ್ಯಗಳಿಂದಾಗಿ ಅಲ್ಲೀಗ ಕಾಶ್ಮೀರಿ ಪಂಡಿತರು ಅಲ್ಪಸಂಖ್ಯಾತರಾಗಿದ್ದಾರೆ.. ಸದ್ಯ ಕಾಶ್ಮೀರದಲ್ಲಿ ಶೇಕಡಾ 60ರಷ್ಟು ಮುಸ್ಲಿಮರೇ ವಾಸಿಸುತ್ತಿದ್ದಾರೆ.. ಇದರಲ್ಲಿ ಕೆಲವರು ಭಾರತದ ಆಡಳಿತವನ್ನು ಒಪ್ಪಿಕೊಳ್ಳುವುದಿಲ್ಲ.. ಕೆಲವರು ಸ್ವತಂತ್ರರಾಗಲು ಬಯಸಿದರೆ ಇನ್ನು ಕೆಲವರು ಪಾಕಿಸ್ತಾನಕ್ಕೆ ಸೇರಲು ಬಯಸುತ್ತಾರೆ.. ಆದ್ರೆ ಇಂತಹವರ ಸಂಖ್ಯೆ ತೀರಾ ಕಡಿಮೆ ಇದೆ.. ಹಾಗಿದ್ದರೂ ಪಾಕಿಸ್ತಾನದ ಬೆಂಬಲದಿಂದ ಇಲ್ಲಿ ನಿರಂತರವಾಗಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಾ ಬಂದಿವೆ.. ಇದರಿಂದಾಗಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ.. ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕಿಸ್ತಾನ ಸಹಾಯ ಮಾಡುತ್ತಿದೆ.. ಭಾರತ ಈ ಬಗ್ಗೆ ನಿರಂತರ ಆರೋಪ ಮಾಡುತ್ತಾ ಬಂದಿದೆ.. ಆದ್ರೆ ಪಾಕಿಸ್ತಾನ ಇದನ್ನು ಅಲ್ಲಗೆಳೆಯುತ್ತಿದೆ.. ಒಂದು ಕಡೆ ಪಾಕ್ ಸೈನಿಕರು ಆಗಾಗ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುತ್ತಾರೆ.. ಇದರ ಜೊತೆಗೆ ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ಕುಕೃತ್ಯಗಳನ್ನು ನಡೆಸುತ್ತಾ ಬರುತ್ತಿದೆ.. ಮೊನ್ನೆ ಪಹಲ್ಗಾಮ್ನಲ್ಲಿ ನಡೆದ ದುರಂತ ಕೂಡಾ ಇದೇ ರೀತಿ ನಡೆದದ್ದು..
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು (ಆರ್ಟಿಕಲ್ 370) 2019ರಲ್ಲಿ ಮೋದಿ ನೇತೃತ್ವದ ಸರ್ಕಾರ ರದ್ದುಗೊಳಿಸುವ ನಿರ್ಧಾರ ಮಾಡಿತು.. ಇದಾದ ಮೇಲೆ ಕಾಶ್ಮೀರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಗಳು ಆದಷ್ಟು ಕಡಿಮೆಯಾಗಿವೆ.. ಶಾಂತಿ ಕೂಡಾ ನೆಲೆಸಿದೆ.. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ಹಿಂದೆಂದಿಗಿಂತಲೂ ಹೆಚ್ಚಾಗಿದೆ.. ಇದರ ನಡುವೆ ಪಹಲ್ಗಾಮ್ ದುಷ್ಕೃತ್ಯ ನಡೆದು ಮತ್ತೆ ಅಶಾಂತಿಗೆ ಕಾರಣವಾಗಿದೆ..

2016ರಲ್ಲಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್!
2016ರಲ್ಲಿ ಕಾಶ್ಮೀರದ ಉರಿ ಸೆಕ್ಟಾರ್ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು.. ಈ ವೇಳೆ 19 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.. ಈ ವೇಳೆ ಭಾರತ ಪಾಕ್ ಆಕ್ರಮಿತರ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಸೇಡು ತೀರಿಸಿಕೊಂಡಿತ್ತು.. ಆಗಲೂ ಕೂಡಾ ಹಲವಾರು ಉಗ್ರರು ಹತರಾಗಿದ್ದರು.. ಇನ್ನು 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 40 ಅರೆಸೈನಿಕ ಸಿಬ್ಬಂದಿ ಹುತಾತ್ಮರಾಗಿದ್ದರು.. ಇದಕ್ಕೆ ಪ್ರತಿಯಾಗಿ ಭಾರತ ಬಾಲಕೋಟ್ ಪ್ರದೇಶದಲ್ಲಿ ವಾಯುದಾಳಿ ಮಾಡಿತ್ತು.. ಕಾಶ್ಮೀರ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಿಲಿಟರಿ ನಿಯಂತ್ರಿತ ಪ್ರದೇಶಗಳಲ್ಲಿ ಒಂದಾಗಿದೆ..
ಭಾರತ ಶಾಂತಿ ಬಯಸಿದರೂ ಪಾಕ್ ನಿರಂತರ ಕಿರಿಕಿರಿ!
ಭಾರತ ಹಾಗೂ ಪಾಕಿಸ್ತಾನ 2003ರಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು.. 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೂ ಕೂಡಾ ಶಾಂತಿ ಮಾತುಕತೆಗೆ ಹೆಚ್ಚು ಗಮನ ಕೊಟ್ಟಿದ್ದರು.. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಕೂಡಾ ಆಗಮಿಸಿದ್ದರು.. ಆದರೂ ಪಾಕ್ ದುರ್ಬುದ್ಧಿ ಬಿಡಲಿಲ್ಲ.. ಇದಾದ ಒಂದು ವರ್ಷಕ್ಕೇ ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಯಿತು. ಇದರಿಂದಾಗಿ ಪ್ರಧಾನಿ ಮೋದಿ 2017 ರಲ್ಲಿ ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಲಿಲ್ಲ.. ಆವತ್ತಿನಿಂದ ಎರಡೂ ದೇಶಗಳ ಶಾಂತಿ ಮಾತುಕತೆಗಳು ಫಲಪ್ರದವಾಗಿಲ್ಲ.



