ಮನುಷ್ಯ ಜೀವಿಯೊಂದಿಗೆ ಶತಮಾನಗಳಿಂದಲೂ ಅವಿನಾಭಾವ ಸಂಬಂಧ ಹೊಂದಿರುವ ಪ್ರಾಣಿ ಅದು ನಾಯಿ. ಪ್ರಾಮಾಣಿಕತೆಯ ವಿಚಾರದಲ್ಲೂ ನಾಯಿಗಳನ್ನು ಮೀರಿಸುವವರಿಲ್ಲ. ಅದೇ ಕಾರಣಕ್ಕೆ ಜಗತ್ತಿನಲ್ಲಿರುವ ಲಕ್ಷಾಂತರ ಶ್ವಾನ ಪ್ರೇಮಿಗಳು ಐಶಾರಾಮಿ ನಾಯಿಗಳನ್ನು ಸಾಕುತ್ತಾರೆ. ಅವುಗಳಿಗಾಗಿ ಸಾಕಷ್ಟು ಹಣ ವ್ಯಯಿಸುತ್ತಾರೆ. ಆದರೆ ಎಷ್ಟೋ ಜನರಿಗೆ ನಾಯಿಗಳ ಕೆಲವು ಸ್ವಭಾವದ ಬಗ್ಗೆ ತಿಳಿದೇ ಇರುವುದಿಲ್ಲ. ಅವುಗಳ ಕೆಲವೊಂದು ದಿನ ನಿತ್ಯದ ಆಗುಹೋಗಗಳ ಬಗ್ಗೆಯೂ ತಿಳುವಳಿಕೆ ಇರುವುದಿಲ್ಲ. ಸಾಮಾನ್ಯವಾಗಿ ನಾಯಿಗಳು ವಾಹನಗಳ ಚಕ್ರದ ಮೇಲೆ, ಕಂಬಗಳ ಮೇಲೆ ಮೂತ್ರ ಮಾಡುತ್ತವೆ ಆದರೆ ಇದು ಯಾಕೆ ಹೀಗೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.ಈ ಬಗ್ಗೆ ಇತ್ತೀಚೆಗೆ ಒಂದು ಸಂಶೋಧನೆಯಾಗಿದ್ದು. ನಿಖರ ಕಾರಣವನ್ನು ವಿಜ್ಞಾನಿಗಳು ತಿಳಿಸಿದ್ದಾರೆ.

ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಅಥವಾ ಬೀದಿ ನಾಯಿಗಳು ಹೆಚ್ಚಾಗಿ ಲೈಟ್ ಕಂಬ ಅಥವಾ ವಾಹನದ ಚಕ್ರದ ಮೇಲೆ ಕಾಲೆತ್ತಿ ಮೂತ್ರ ಮಾಡುತ್ತವೆ. ನಾಯಿಗಳು ಯಾಕೆ ಹೀಗೆ ಮಾಡುತ್ತವೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇತ್ತು. ಆದರೆ ಅದಕ್ಕೆ ನಿಖತ ಕಾರಣ ಇಲ್ಲಿಯ ತನಕ ಯಾರಲ್ಲೂ ಇರಲಿಲ್ಲ. ಇದೀಗ ಈ ಬಗ್ಗೆ ಸಂಶೋಧನೆ ಕೈಗೊಂಡಿರುವ ವಿಜ್ಞಾನಿಗಳು ನಾಯಿಗಳ ಈ ಸ್ವಭಾವಕ್ಕೆ ಕೆಲವು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಆ ಕಾರಣಗಳು ಯಾವುವು ಎಂಬುದನ್ನು ನೋಡೋಣ.
ನಾಯಿಗಳು ಹೆಚ್ಚಾಗಿ ಟೈರ್ ಅಥವಾ ಲೈಟ್ ಕಂಬಕ್ಕೆ ಮೂತ್ರ ಮಾಡಲು ಪ್ರಮುಖ ಕಾರಣ, ತಮ್ಮ ಪ್ರದೇಶವನ್ನು ಗುರುತಿಸುವುದಕ್ಕಾಗಿ. ಕಂಬ ಅಥವಾ ಟೈರ್ ಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಮತ್ತು ಬೇರೆ ನಾಯಿಗಳು ಅದನ್ನು ಮೂಸುವುದರಿಂದ ಪ್ರದೇಶದ ವ್ಯತ್ಯಾಸ ಅವುಗಳಿಗೆ ತಿಳಿಯುತ್ತವೆ. ಇದಲ್ಲದೇ ನಾಯಿಗಳು ಕೆಲವೊಮ್ಮೆ ತಮ್ಮ ಸಂಗಾತಿಯನ್ನು ಹುಡುಕುವುದಕ್ಕೂ ಕೂಡ ಇದೇ ಮಾರ್ಗವನ್ನು ಅನುಸರಿಸುತ್ತವೆ ಎನ್ನಲಾಗಿದೆ.
ಇನ್ನು, ನಾಯಿಗಳು ಯಾವಾಗಲು ತಮ್ಮ ಮೂಗಿನ ಮಟ್ಟಕ್ಕಿರುವ ವಾಸನೆಯನ್ನು ಬೇಗನೆ ಗ್ರಹಿಸುತ್ತದೆ ಇದೇ ಕಾರಣಕ್ಕೆ ಮೂಗಿನ ನೇರಕ್ಕಿರುವ ಕಂಬಗಳ ಮೇಲೆ ಇವುಗಳು ಮೂತ್ರ ವಿಸರ್ಜಿಸುತ್ತವೆ. ಜೊತೆಗೆ ಅದ್ಯಯನಗಳ ಪ್ರಕಾರ ನಾಯಿಗಳಿಗೆ ಟೈರ್ ಗಳ ವಾಸನೆ ಎಂದರೆ ಇಷ್ಟ ಇದೇ ಕಾರಣಕ್ಕೆ ಅವುಗಳು ವಾಹನಗಳ ಚಕ್ರಗಳನ್ನು ಮೂಸಿ ನೋಡಿ ಅನಂತರ ಮೂತ್ರ ಮಾಡುತ್ತವೆ.